ನಾನು ಸಿಎಂ ಆಗಿದ್ದನ್ನ ಕೆಲವರಿಗೆ ತಡೆದುಕೊಳ್ಳಲು ಆಗ್ತಿಲ್ಲ, ನನ್ನ ಜೈಲಿಗೆ ಕಳುಹಿಸಲು ಹುನ್ನಾರ – ಸಿಎಂ ಡಿಕೆಶಿ!
Some people can't stand the fact that I'm the CM, they want to send me to jail - CM DK!

ಬೆಂಗಳೂರು : ನಾನು ಸಿಎಂ ಆಗಿದ್ದನ್ನ ಕೆಲವರಿಗೆ ತಡೆದುಕೊಳ್ಳಲು ಆಗ್ತಿಲ್ಲ, ನನ್ನನ್ನು ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ. ಎಷ್ಟು ಸಂಚು ನಡೆಯುತ್ತಿದೆ ಎಂದು ಮುಂದೆ ಹೇಳುವೆ. ನಾನೊಬ್ಬ ರೈತನ ಮಗ, ರೈತರ ಶ್ರಮದ ಬಗ್ಗೆ ನನಗೆ ಗೊತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಡದಿ ಟೌನ್ ಶಿಪ್ ಯೋಜನೆಯ ಪಿತಾಮಹ ನಾನಲ್ಲ. ನಮ್ಮ ಅಣ್ಣ ಕುಮಾರಸ್ವಾಮಿ ಸಿಎಂ ಇದ್ದಾಗ 5 ಟೌನ್‌ಶಿಪ್ ಪ್ಲ್ಯಾನ್ ಮಾಡಿದ್ದರು. 2006ರಲ್ಲೇ ಬಿಡದಿ ಭಾಗದ ಹಳ್ಳಿಗಳನ್ನು ರೆಡ್ ಝೋನ್ ಮಾಡಿದ್ದರು
ಅಲ್ಲಿನ ರೈತರನ್ನು ಒಕ್ಕಲೆಬ್ಬಿಸಲು ಪ್ಲ್ಯಾನ್ ಮಾಡಿದ್ರು, 22 ಲಕ್ಷ ರೂ.ದಿಂದ 25 ಲಕ್ಷ ರೂ. ವರೆಗೆ ರೈತರಿಗೆ ಕೊಡಲು ಫಿಕ್ಸ್ ಮಾಡಿದ್ದರು ಎಂದು ಕಿಡಿ ಕಾರಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ್ದೇ ಕುಮಾರಸ್ವಾಮಿ, ಅಧಿಕಾರದಲ್ಲಿದ್ದಾಗ ನೀವೆಲ್ಲ ಏನು ಮಾಡಿದ್ದು ನನಗೆ ಗೊತ್ತಿಲ್ವಾ? ನಾನು ಸಿಎಂ ಆದಾಗ ನಿಮಗೆ ಪ್ರತಿಭಟಿಸೋ ಛಲ ಬಂತಾ? ದೇವೇಗೌಡರ ಹೆಸರು ಹೇಳಬಾರದು ಅಂತಾ ಅಂದುಕೊಳ್ತೇನೆ, ಆದ್ರೆ, ಅವರೇ ಬಿಡದಿ ಟೌನ್‌ಶಿಪ್ ಯೋಜನೆಗೆ ಸಹಿ ಹಾಕಿದ್ದಾರೆ. ಹಾಗಾಗಿ ಮಾತನಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ, ರೈತರಿಗೆ ಕಡಿಮೆ ಬೆಲೆ ಕೊಟ್ಟಾಗ, ರೋಷ, ಆವೇಶ ಎಲ್ಲಿ ಹೋಗಿತ್ತು? ಎಂದು ಡಿಕೆಶಿ ಗುಡುಗಿದ್ದಾರೆ.
ನಾವು ಯಾವುದೇ ಕಾರಣಕ್ಕೂ ರೈತರಿಗೆ ಒತ್ತಾಯ ಮಾಡಿ ಜಮೀನು ಕೇಳುವುದಿಲ್ಲ, ಯಾರ ಆಸ್ತಿಯನ್ನೂ ಬಲವಂತವಾಗಿ ಪಡೆಯುವುದಿಲ್ಲ. ರೈತರು ಸ್ವಇಚ್ಛೆಯಿಂದ ಜಮೀನು ನೀಡಿದರೆ ಮಾತ್ರ ಭೂಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.




