ರಾಜಕೀಯ

ನನ್ನದಲ್ಲದ ಆಡಿಯೋ ಬಗ್ಗೆ ನಾನು ಮಾತಾಡಲ್ಲ – ಡಿವಿಎಸ್ ಸ್ಪಷ್ಟನೆ!

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುರಿತು ಮಾಜಿ ಸಿಎಂ ಸದಾನಂದಗೌಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಇದೀಗ ರಾಜ್ಯ ರಾಜಕೀಯದಲ್ಲಿ ಆಡಿಯೋ ಭಾರೀ ಚಚೆಗೆ ಗ್ರಾಸವಾಗಿದೆ. ಈ ವಿವಾದಕ್ಕೆ ಸದಾನಂದಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಡಿಯೋ ವೈರಲ್ ಬಗ್ಗೆ ಮಾಜಿ ಸಿಎಂ ಸದಾನಂದಗೌಡ ಪ್ರತಿಕ್ರಿಯಿಸಿ, ನೋ ಕಾಮೆಂಟ್ಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಬೇಕಿದ್ದರೆ ಅದರ ಸತ್ಯಾಸತ್ಯತೆಯನ್ನು ನೀವೇ ಪತ್ತೆ ಹಚ್ಚಿ. ನನ್ನದಲ್ಲದ ವಿಷಯವನ್ನು ನಾನು ಯಾಕೆ ಮೈಮೇಲೆ ಎಳೆದುಕೊಳ್ಳಲಿ? ಎಂದು ಪ್ರಶ್ನಿಸಿದ್ದಾರೆ.

ನಾನು ಹೇಳದಿದ್ರೆ ಅಡ್ಡ ಮತದಾನ ವಿಚಾರ ಹೇಗೆ ಗೊತ್ತಾಗ್ತಿತ್ತು? ನಮ್ಮ ರಾಷ್ಟ್ರೀಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ. ಬಾಯಿ ಮುಚ್ಚಿಕೊಂಡು ಕೂತಿದ್ರೆ ನಾನು ಮೂಲೆಯಲ್ಲಿ ಇರ್ತಿದ್ದೆ. ಪಕ್ಷದ ಹಿತದೃಷ್ಟಿಯಿಂದ ಕೋರ್ ಕಮಿಟಿಯಲ್ಲೂ ಮಾತಾಡಿದ್ದೇನೆ. ನನ್ನದಲ್ಲದ ಆಡಿಯೋ ಬಗ್ಗೆ ನಾನು ಯಾಕೆ ದೂರು ಕೊಡಲಿ? ಎಂದು ವಿಜಯೇಂದ್ರ ಕಿತ್ತು ಬಿಸಾಕಿ ಅನ್ನೋ ವಿಚಾರಕ್ಕೆ ಮಾಜಿ ಸಿಎಂ ಸದಾನಂದಗೌಡ​​ ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button