bengaluru

ಬೆಂಗಳೂರು ವಾಹನ ಸವಾರರಿಗೆ ಶಾಕ್ – ಇಂದಿನಿಂದ ನೈಸ್‌ ರಸ್ತೆ, ಎಲೆಕ್ಟ್ರಾನಿಕ್ಸ್‌ ಸಿಟಿ ಫ್ಲೈಓವರ್‌ ಟೋಲ್‌ ದರ ಏರಿಕೆ!

Shock for Bengaluru motorists – Toll rates for NICE Road and Electronics City Flyover hiked starting today!

ಬೆಂಗಳೂರು : ಸಿಲಿಕಾನ್ ಸಿಟಿಯ ವಾಹನ ಸವಾರರ ಜೇಬಿಗೆ ಮತ್ತೊಮ್ಮೆ ಕತ್ತರಿ ಬಿದ್ದಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳಾದ ನೈಸ್ ರಸ್ತೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ಗಳ ಟೋಲ್ ದರವನ್ನು ಇಂದಿನಿಂದಲೇ ಜಾರಿಗೆ ಬರುವಂತೆ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.

ರಸ್ತೆಗಳ ನಿರ್ವಹಣಾ ವೆಚ್ಚ ಹಾಗೂ ಇತರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಟೋಲ್ ದರವನ್ನು ಪರಿಷ್ಕರಿಸಲಾಗಿದೆ. ಟೋಲ್ ದರ ಏರಿಕೆಯಿಂದಾಗಿ ಕೇವಲ ಖಾಸಗಿ ವಾಹನ ಸವಾರರು ಮಾತ್ರವಲ್ಲದೆ, ಬಿಎಂಟಿಸಿ ಬಸ್‌ಗಳ ಟೋಲ್‌ ದರವೂ ಹೆಚ್ಚಳವಾಗಿರುವುದರಿಂದ ಸಾಮಾನ್ಯ ಪ್ರಯಾಣಿಕರಿಗೂ ಇದರ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಬಿಎಂಟಿಸಿಯು ಈ ಹೆಚ್ಚುವರಿ ವೆಚ್ಚದ ಹೊರೆಯನ್ನು ಪ್ರಯಾಣಿಕರ ಟಿಕೆಟ್ ದರದ ಮೇಲೆ ಹಾಕುವ ಸಾಧ್ಯತೆ ಇದೆ.

ಕಾರು, ಬೈಕ್‌ಗಳಿಗೆ ಎಷ್ಟು ಏರಿಕೆ?

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಸಂಚರಿಸುವ ಕಾರುಗಳ ಟೋಲ್ ಶುಲ್ಕವನ್ನು 65 ರೂ.ನಿಂದ 72 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ನಡುವಿನ ಕಾರುಗಳ ಟೋಲ್ ಶುಲ್ಕ 70 ರೂ.ನಿಂದ 77 ರೂ.ಗೆ ಏರಿಕೆಯಾಗಿದೆ. ಪ್ರಯಾಣದ ದೂರವನ್ನು ಅವಲಂಬಿಸಿ, ಪ್ರತ್ಯೇಕ ವಿಭಾಗಗಳಲ್ಲಿ ಕಾರುಗಳಿಗೆ ಕನಿಷ್ಠ 3 ರೂ.ನಿಂದ ಗರಿಷ್ಠ 8 ರೂ.ವರೆಗೆ ಟೋಲ್ ದರ ಹೆಚ್ಚಳ ಮಾಡಲಾಗಿದೆ.

ದ್ವಿಚಕ್ರ ವಾಹನ ಸವಾರರಿಗೂ ದರ ಏರಿಕೆ ಬಿಸಿ ತಟ್ಟಿದ್ದು, ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಮಾರ್ಗದ ಟೋಲ್ ಶುಲ್ಕವನ್ನು 30 ರೂ.ನಿಂದ 33 ರೂ.ಗೆ ಹೆಚ್ಚಿಸಲಾಗಿದೆ. ಇನ್ನು ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯ ದರ 15 ರೂ.ನಿಂದ 17 ರೂ.ಗೆ ಏರಿಕೆಯಾಗಿದೆ. ವಾಣಿಜ್ಯ ವಾಹನಗಳಾದ ಬಸ್‌ಗಳ ಟೋಲ್ ಶುಲ್ಕ 195 ರೂ.ನಿಂದ 215 ರೂ.ಗೆ ಹಾಗೂ ಟ್ರಕ್‌ಗಳ ದರ 128 ರೂ.ನಿಂದ 141 ರೂ.ಗೆ ಹೆಚ್ಚಳವಾಗಿದೆ.

ಹೊಸೂರು ರಸ್ತೆ-ಬನ್ನೇರುಘಟ್ಟ ರಸ್ತೆ ಬಸ್‌ಗಳ ಟೋಲ್ ಶುಲ್ಕ 195 ರಿಂದ 215 ರೂ. ಕ್ಕೆ ಹೆಚ್ಚಳ ಮಾಡಲಾಗಿದೆ. ಟ್ರಕ್‌ಗಳಿಗೆ, 128 ರಿಂದ 141 ರೂ. ಏರಿಕೆ ಮಾಡಲಾಗಿದೆ.

Comments (0)

Your email address will not be published. Required fields are marked *

Back to top button