ಕಾಕ್ರೋಚ್ ಜನತಾ ಪಕ್ಷದ ಎಕ್ಸ್ ಖಾತೆಗಳಿಗೆ ನಿರ್ಬಂಧ: 6 ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 13.4 ಮಿಲಿಯನ್ ಫಾಲೋವರ್ಸ್, ಇದು ಬಿಜೆಪಿ ಫಾಲೋವರ್‌ಗಳ ಸಂಖ್ಯೆಗಿಂತ 1.5 ಪಟ್ಟು ಹೆಚ್ಚು, ಕಾಂಗ್ರೆಸ್‌ಗಿಂತ ಹೆಚ್ಚು.


ಆರು ದಿನಗಳ ಹಿಂದೆ ರಚನೆಯಾದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ). ಗುರುವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ, ಇನ್‌ಸ್ಟಾಗ್ರಾಮ್‌ನಲ್ಲಿ 13.4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಸಂಪಾದಿಸಿತು. ಇದು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಹೆಚ್ಚು. ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಾಗಿರುವ, ಕಾಂಗ್ರೆಸ್ 13.3 ಮಿಲಿಯನ್, ಬಿಜೆಪಿ 8.7 ಮಿಲಿಯನ್, ಎಎಪಿ 8.7 ಮಿಲಿಯನ್ ಮತ್ತು ಸಿಪಿಐ(ಎಂ) 2.35 ಮಿಲಿಯನ್ ಫಾಲೋವರ್ಸ್ ಹೊಂದಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಜಿರಳೆ ಹೇಳಿಕೆಗೆ ಪ್ರತಿಭಟಿಸಿ. ರಚನೆಯಾಗಿದ್ದ ಈ ಪಕ್ಷವು, ಸಾಮಾಜಿಕ ಜಾಲತಾಣ X ನಲ್ಲಿ 1.93 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿತ್ತು. ಆದಾಗ್ಯೂ, ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ X ಖಾತೆಯನ್ನು ನಿರ್ಬಂಧ ಮಾಡಲಾಯಿತು.
“ನಾವು ಅಂದುಕೊಂಡಂತೆಯೇ ಸಂಭವಿಸಿದೆ, ಮುಂಚೆಯೆ ನಿರ್ಬಂಧದ ಭಯ ಇತ್ತು. ಸಿಜೆಪಿಯ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿನ ಸ್ಥಳೀಯ ನಿಯಮಗಳು, ನ್ಯಾಯಾಲಯದ ಆದೇಶ ಅಥವಾ ಕಾನೂನು ದೂರಿನ ಆಧಾರದ ಮೇಲೆ ಎಕ್ಸ್ ಕ್ರಮ ಕೈಗೊಂಡಿದೆ” ಅಂತ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರತಿಕ್ರಯಿಸಿದ್ದಾರೆ.
ಮೇ 15 ರಂದು ನಡೆದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ರವರು ಕೆಲವು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ಒಂದು ದಿನದ ನಂತರ ಸಿಜೆಪಿ ಪಕ್ಷ ರಚನೆ ಮಾಡಲಾಗಿತ್ತು.

ಪಕ್ಷದ ಲೋಗೋ ಬಿಡುಗಡೆ ಮಾಡಿದ್ದ ಅಭಿಜೀತ್ ದೀಪ್ಕೆ.
ಕಾಕ್ರೋಚ್ ಜನತಾ ಪಕ್ಷದ ಘೋಷಣೆ ನಂತರ ಸಾಮಾಜಿಕ ಜಾಲತಾಣದಲ್ಲಿ, ಭಾರಿ ಅಲೆ ಎಬ್ಬಿಸಿದ್ದ ಅಭಿಜಿತ್ ದೀಪ್ಕೆ, ಪಕ್ಷದ ಲೋಗೋವನ್ನೂ ಬಿಡುಗಡೆ ಮಾಡಿದ್ದರು.
ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ, ಸೋಮಾರಿ ಅಂತಲೇ ಲೋಗೋ ರಚನೆ ಮಾಡಲಾಗಿತ್ತು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹುದುಗಿದ್ದ ಯುವ ಧ್ವನಿಗೆ ಶಕ್ತಿ ತುಂಬಿತ್ತು..

ಪಕ್ಷದ ಸದಸ್ಯತ್ವ ಪಡೆಯಲು 4 ಅರ್ಹತೆಗಳು ಮಾನದಂಡ
- ಮೊಲನೆ ಮಾನದಂಡ- ಸದಸ್ಯ ನಿರುದ್ಯೋಗಿ ಆಗಿರಬೇಕು.
- ಎರಡನೆಯದು – ಸದಸ್ಯ ಸೋಮಾರಿಯಾಗಿರ ಬೇಕು ಎಂದರೆ ಹೆಚ್ಚು ನಿದ್ದೆ ಮಾಡುವುದು.
- ಮೂರನೆಯದು – ಹೆಚ್ಚು ಆನ್‌ಲೈನ್‌ನಲ್ಲಿರುವ ವ್ಯಸನಿ ಆಗಿರಬೇಕು.
- ನಾಲ್ಕನೆಯದು – ವೃತ್ತಿಪರವಾಗಿ ಕೋಪ ಹೊರಹಾಕುವ ಸಾಮರ್ಥ್ಯ ಇರಬೇಕು.
ಪ್ರಣಾಳಿಕೆ ಬಿಡುಗಡೆ, ಪಕ್ಷದ 5 ಭರವಸೆಗಳು
- ಸಿಜೆಪಿ ಅಂದರೆ ಕಾಕ್ರೋಚ್ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ, ನಿವೃತ್ತಿಯ ನಂತರ ಯಾವುದೇ ಸಿಜೆಐ (ಮುಖ್ಯನ್ಯಾಯಮೂರ್ತಿಗಳು) ರಾಜ್ಯಸಭೆಗೆ ಹೋಗುವ ಪ್ರತಿಫಲವನ್ನು ಪಡೆಯುವುದಿಲ್ಲ.
- ಯಾವುದೇ ಮಾನ್ಯ ಮತವನ್ನು ಅಳಿಸಿದರೆ, ಮುಖ್ಯ ಚುನಾವಣಾ ಆಯುಕ್ತರನ್ನು ಯುಎಪಿಎ ಅಡಿಯಲ್ಲಿ ಬಂಧಿಸಲಾಗುತ್ತದೆ ಏಕೆಂದರೆ ಯಾರೊಬ್ಬರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಭಯೋತ್ಪಾದನೆಗಿಂತ ಕಡಿಮೆಯಿಲ್ಲ.
- ಮಹಿಳೆಯರಿಗೆ 33% ಅಲ್ಲ, 50% ಮೀಸಲಾತಿ ಇರುತ್ತದೆ. ಈ ಉದ್ದೇಶಕ್ಕಾಗಿ ಸಂಸದರ ಸಂಖ್ಯೆಯನ್ನು ಹೆಚ್ಚಿಸಲಾಗುವುದಿಲ್ಲ. ಸಚಿವ ಸಂಪುಟದಲ್ಲಿ ಮಹಿಳೆಯರಿಗೆ 50% ಮೀಸಲಾತಿಯೂ ಇರುತ್ತದೆ.
- ನಿಜವಾದ ಸ್ವತಂತ್ರ ಮಾಧ್ಯಮಕ್ಕೆ ಅವಕಾಶ ಕಲ್ಪಿಸಲು ಅಂಬಾನಿ ಮತ್ತು ಅದಾನಿ ಒಡೆತನದ ಎಲ್ಲಾ ಮಾಧ್ಯಮ ಸಂಸ್ಥೆಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುವುದು. ಗೋಡಿ ಮಾಧ್ಯಮ ನಿರೂಪಕರ ಬ್ಯಾಂಕ್ ಖಾತೆಗಳನ್ನು ತನಿಖೆ ಮಾಡಲಾಗುವುದು.
- ಬೇರೆ ಪಕ್ಷಕ್ಕೆ ಪಕ್ಷಾಂತರಗೊಂಡ ಯಾವುದೇ ಶಾಸಕರು ಅಥವಾ ಸಂಸದರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗುವುದು ಮತ್ತು ಮುಂದಿನ 20 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆಯನ್ನು ಹೊಂದುವುದನ್ನು ನಿಷೇಧಿಸಲಾಗುವುದು.




