MYSOREರಾಜಕೀಯ

ಡಿಕೆಶಿಯವರೇ ಒಳ್ಳೇ ಆಡಳಿತ ನೀಡಿ; ಇಲ್ವೋ ಟೀಕೆಗೆ ಸಿದ್ಧರಾಗಿ – ಪ್ರತಾಪ್ ಸಿಂಹ

Former MP Pratap Simha congrats DKS and says 2028 NDA will rule

ಮೈಸೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಸದಾ ರಾಜಕೀಯ ವಿರೋಧಿಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಪ್ರತಾಪ್ ಸಿಂಹ, ಈ ಶುಭ ಸಂದರ್ಭದಲ್ಲಿ ಯಾವುದೇ ಅಸಂಬದ್ಧ ಮಾತುಗಳನ್ನು ಆಡದೆ, ಡಿಕೆ ಶಿವಕುಮಾರ್ ನಾಯಕತ್ವಕ್ಕೆ ಶುಭ ಹಾರೈಸುವುದರ ಜೊತೆಯಲ್ಲೇ ವಿಪಕ್ಷ ನಾಯಕನಾಗಿ ತೀಕ್ಷ್ಣ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ. ಅವರು ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ಆಸ್ಪದ ನೀಡದಂತೆ ಮುಂದಿನ ಎರಡು ವರ್ಷಗಳ ಕಾಲ ಕರ್ನಾಟಕದಲ್ಲಿ ಅತ್ಯುತ್ತಮ, ಜನಪರ ಆಡಳಿತ ನೀಡಲಿ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ” ಎಂದು ಹಾರೈಸಿದರು.

ಸಿದ್ದರಾಮಯ್ಯ ಆಡಳಿತದ ಬಗ್ಗೆ ಪದೇ ಪದೇ ಮಾತನಾಡಲ್ಲ
ಇದೇ ವೇಳೆ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ಕುಟುಕಿದ ಸಿಂಹ, “ಕಳೆದ ಮೂರು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತ ಹೇಗಿತ್ತು ಎಂಬುದನ್ನು ಮಾಧ್ಯಮಗಳೇ ಸಾರಿಸಾರಿ ಹೇಳಿವೆ. ಜನರಿಗೂ ಅದರ ಸಂಪೂರ್ಣ ಅರಿವಿದೆ. ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿರುವ ಈ ಸಮಯದಲ್ಲಿ ನಾನು ಪದೇ ಪದೇ ಅವರ ಆಡಳಿತವನ್ನು ವಿಶ್ಲೇಷಿಸಲು ಇಷ್ಟಪಡುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.

2028ಕ್ಕೆ ಎನ್‌ಡಿಎ ಸರ್ಕಾರ ಫಿಕ್ಸ್!
ರಾಜ್ಯದ ಜನತೆ ಈಗಾಗಲೇ ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ. ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ‘ಎನ್‌ಡಿಎ’ (NDA) ಸರ್ಕಾರವನ್ನು ಅಧಿಕಾರಕ್ಕೆ ತರಲು ಜನರು ಮನಸ್ಸು ಮಾಡಿದ್ದಾರೆ” ಎಂದು ಭವಿಷ್ಯ ನುಡಿದರು. ಪ್ರತಾಪ್ ಸಿಂಹ ಅವರ ಈ ನಯನಾಜೂಕಿನ ರಾಜಕೀಯ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

#FreedomTV #PratapSimha #DKShivakumar #SiddaramaiahResignation #KarnatakaNewGovernment #DKSChiefMinister #BJPvsCongress #KarnatakaPolitics #GoodGovernance #NDAGovernment2028 #BreakingNews #KannadaNews #MysuruPolitics #CongressPowerShift

Comments (0)

Your email address will not be published. Required fields are marked *

Back to top button