ಮುಂಗಾರು ಕೃಷಿಗೆ ಬಿತ್ತನೆ ಬೀಜ ಸಮೃದ್ಧ- ಕೃಷಿ ಇಲಾಖೆ!
Sufficient seeds availablity in karnataka said Agri dept

ಬೆಂಗಳೂರು: ಮುಂಬರುವ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ರೈತ ಬಾಂಧವರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಕೃಷಿ ಇಲಾಖೆ ತಿಳಿಸಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಇಲಾಖೆಯು, ಬೀಜಗಳ ಸರಬರಾಜಿನಲ್ಲಿ ಯಾವುದೇ ಕೊರತೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಹಾವೇರಿಯಲ್ಲಿ ಮುಂಗಾರು ಕೃಷಿ ಶುರು!
ಹಾವೇರಿಯಲ್ಲಿ ಮುಂಗಾರಿನ ಪರಿಣಾಮ ಕೃಷಿ ಚಟುವಟಿಕೆ ಗರಿಗೆದರಿದೆ. ರೈತ ಸಂಪರ್ಕ ಕೇಂದ್ರಗಳತ್ತ ಮುಖಗಡಿ ಜಿಲ್ಲೆ ಹಾವೇರಿಯಲ್ಲಿ ಈ ಬಾರಿ ವಾಡಿಕೆಗಿಂತ ಬರೋಬ್ಬರಿ 500 ಪಟ್ಟು ಹೆಚ್ಚು ಮುಂಗಾರು ಪೂರ್ವ ಮಳೆಯಾಗಿದ್ದು, ರೈತರು ವ್ಯವಸಾಯ ಮಾಡುವಲ್ಲಿ ಪೈಪೋಟಿಗೆ ಬಿದ್ದಿದ್ದಾರೆ. ಹೀಗಾಗಿ ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕೃಷಿ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜಗಳ ಮಾರಾಟ ಆರಂಭವಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಈ ವರ್ಷ 8,960 ಕ್ವಿಂಟಾಲ್ ಸೋಯಾಬೀನ್ ಹಾಗೂ 1,344 ಕ್ವಿಂಟಾಲ್ ಶೇಂಗಾ (ನೆಲಗಡಲೆ) ಬೀಜಕ್ಕೆ ಬೇಡಿಕೆ ಇದೆ ಎಂದು ಅಂದಾಜಿಸಲಾಗಿದೆ. ಅದಕ್ಕನುಗುಣವಾಗಿ ಈಗಾಗಲೇ 2,733 ಕ್ವಿಂಟಾಲ್ ಸೋಯಾಬೀನ್ ಹಾಗೂ 305 ಕ್ವಿಂಟಾಲ್ ಶೇಂಗಾ ಬೀಜವನ್ನು ದಾಸ್ತಾನು ಮಾಡಲಾಗಿದ್ದು, ಉಳಿದ ದಾಸ್ತಾನನ್ನು ರವಾನೆ (Consignment) ಆಧಾರದ ಮೇಲೆ ತಕ್ಷಣವೇ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ರಾಜ್ಯ ಮಟ್ಟದಲ್ಲಿ ಬೇಡಿಕೆಗಿಂತಲೂ ಹೆಚ್ಚಿನ ದಾಸ್ತಾನು ಲಭ್ಯವಿದ್ದು, ರಾಜ್ಯಾದ್ಯಂತ ಮುಂಗಾರು ಕೃಷಿಗೆ ಬಿತ್ತನೆ ಬೀಜಗಳ ಕೊರತೆಯಾಗದಂತೆ ಕೃಷಿ ಇಲಾಖೆ ಬೃಹತ್ ದಾಸ್ತಾನು ಮಾಡಿಕೊಂಡಿದೆ.
ಇದರ ಸಂಪೂರ್ಣ ವಿವರ ಇಲ್ಲಿದೆ
| ಬೆಳೆಗಳು | ಇಲಾಖೆಯ ಬೇಡಿಕೆ ಅಂದಾಜು | ಪ್ರಸ್ತುತ ಲಭ್ಯವಿರುವ ದಾಸ್ತಾನು |
| ಸೋಯಾಬೀನ್ | 1.80 ಲಕ್ಷ ಕ್ವಿಂಟಾಲ್ | 2.09 ಲಕ್ಷ ಕ್ವಿಂಟಾಲ್ |
| ನೆಲಗಡಲೆ (ಶೇಂಗಾ) | 0.70 ಲಕ್ಷ ಕ್ವಿಂಟಾಲ್ | 0.74 ಲಕ್ಷ ಕ್ವಿಂಟಾಲ್ |
| ಒಟ್ಟು (ಎಲ್ಲಾ ಬೆಳೆಗಳು) | 4.71 ಲಕ್ಷ ಕ್ವಿಂಟಾಲ್ | 5.46 ಲಕ್ಷ ಕ್ವಿಂಟಾಲ್ |
ಕ್ಯೂಆರ್ ಕೋಡ್ (QR Code) ಮೂಲಕ ಬೀಜ ವಿತರಣೆ
ರೈತರಿಗೆ ಯಾವುದೇ ಗೊಂದಲವಿಲ್ಲದೆ, ಸಕಾಲದಲ್ಲಿ ಬಿತ್ತನೆ ಬೀಜ ತಲುಪಿಸಲು ಕೃಷಿ ಇಲಾಖೆ ಈ ಬಾರಿ ರೈತ ಸಂಪರ್ಕ ಕೇಂದ್ರಗಳಲ್ಲಿ QR Code ವ್ಯವಸ್ಥೆಯನ್ನು ಅಳವಡಿಸಿದೆ. ಇದರ ಮೂಲಕ ಅತ್ಯಂತ ಪಾರದರ್ಶಕವಾಗಿ ಬೀಜ ವಿತರಣೆ ಮಾಡಲಾಗುತ್ತಿದೆ. ಸೋಯಾಬೀನ್, ಶೇಂಗಾ, ಭತ್ತ, ರಾಗಿ, ಮೆಕ್ಕೆಜೋಳ ಸೇರಿದಂತೆ ಹಲವು ಬಿತ್ತನೆ ಬೀಜಗಳನ್ನು ಸರ್ಕಾರ ನಿಯಮಾನುಸಾರ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದು, ತಾಲೂಕು ಕೃಷಿ ಕೇಂದ್ರಗಳು, ರೈತ ಸೊಸೈಟಿ ಮತ್ತು ಹೋಬಳಿ ಕೇಂದ್ರಗಳಲ್ಲಿ ಮಾರಾಟ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ.
ಬಿತ್ತನೆ ಬೀಜಗಳ ಲಭ್ಯತೆ ಹಾಗೂ ರಿಯಾಯಿತಿ ದರದ ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
#Monsoon2026 #KharifSeason #AgricultureDepartment #SowingSeeds #FarmersOfKarnataka #HaveriRain #SoyaBean #GroundnutSeeds #RaithaSampaarkaKendra #KarnatakaFarmers #FreedomTV #FreedomTVNews #KannadaNews




