
ಬೆಂಗಳೂರು: ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಪಡೆಯುತ್ತಿರುವುದಕ್ಕೆ ರಾಜ್ಯಾದ್ಯಂತ ಸಂಭ್ರಮ ಮನೆಮಾಡಿದೆ. ಈ ಐತಿಹಾಸಿಕ ಕ್ಷಣದಲ್ಲಿ ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಡಿ.ಕೆ.ಎಸ್. ಹೆಗ್ಡೆ ತಮ್ಮ ತಂದೆಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಶುಭಾಶಯದ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
“ಅಭಿನಂದನೆಗಳು ಅಪ್ಪ” ಎಂದು ಬರೆದುಕೊಂಡು ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್ಗೆ ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಹರಸಿನ ಮಹಾಪೂರವೇ ಹರಿದುಬರುತ್ತಿದೆ.

“ಅಪ್ಪ ಬಂಡೆಯಾಗಿದ್ದು ಸುಮ್ಮನೆ ಅಲ್ಲ…” – ಹಳೇ ವಿಡಿಯೋ ರೀ-ವೈರಲ್!
ಡಿಕೆಶಿ ಮುಖ್ಯಮಂತ್ರಿಯಾಗುತ್ತಿದ್ದಂತೆ, ಈ ಹಿಂದೆ ಐಶ್ವರ್ಯಾ ಅವರು ತಮ್ಮ ತಂದೆಯ ರಾಜಕೀಯ ಪಯಣ ಮತ್ತು ಶ್ರಮದ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮುಂಚೂಣಿಗೆ ಬಂದಿದೆ. ಆ ವಿಡಿಯೋದಲ್ಲಿ ಐಶ್ವರ್ಯಾ ತಮ್ಮ ತಂದೆ ಯಾಕೆ ಸಿಎಂ ಆಗಬೇಕು ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ
“ಇವತ್ತು ಜನ ನಮ್ಮ ಅಪ್ಪನನ್ನು ‘ಬಂಡೆ’ (ಕನಕಪುರ ಬಂಡೆ) ಎಂದು ಕರೆಯಬಹುದು. ಆದರೆ, ಆ ಬಂಡೆ ಇವತ್ತು ಈ ರೂಪಕ್ಕೆ ಬಂದು ನಿಲ್ಲುವುದಕ್ಕೆ ಎಷ್ಟು ಕಷ್ಟಪಟ್ಟಿದೆ, ಎಷ್ಟು ಸಮಯ ತಗೊಂಡಿದೆ ಎಂಬುದನ್ನು ನಾವು ಚಿಕ್ಕ ವಯಸ್ಸಿನಿಂದ ಹತ್ತಿರದಿಂದ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಅಪ್ಪ ರಾಜ್ಯಕ್ಕೆ ಏನೆಲ್ಲಾ ಬದಲಾವಣೆ ತರುತ್ತಾರೆ ಎಂದು ನಾವೂ ಕುತೂಹಲದಿಂದ ಕಾಯುತ್ತಿದ್ದೇವೆ.”
‘ದೇವರು ವರವೂ ಕೊಡಲ್ಲ, ಶಾಪವೂ ಕೊಡಲ್ಲ; ಅವಕಾಶ ಕೊಡ್ತಾನೆ!’
ತಮ್ಮ ತಂದೆ ತಮಗೆ ಸದಾ ಹೇಳುತ್ತಿದ್ದ ಜೀವನದ ಪಾಠವನ್ನು ನೆನಪಿಸಿಕೊಂಡಿರುವ ಐಶ್ವರ್ಯಾ, “ನಮ್ಮ ಅಪ್ಪ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ—ಮಗಳೇ, ದೇವರು ಯಾರಿಗೂ ನೇರವಾಗಿ ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವನು ಕೇವಲ ಅವಕಾಶಗಳನ್ನು ಮಾತ್ರ ಕೊಡ್ತಾನೆ. ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯ,” ಎಂದಿದ್ದಾರೆ.
ಮುಂದುವರಿದು, “ನಮ್ಮ ಅಪ್ಪ ದೊಡ್ಡ ಮಹತ್ವಾಕಾಂಕ್ಷೆ ಮತ್ತು ಸ್ಪಷ್ಟ ಧ್ಯೇಯ ಹೊಂದಿರುವ ವ್ಯಕ್ತಿ. ಜನರಿಗಾಗಿ ಏನು ಮಾಡಬೇಕು, ರಾಜ್ಯವನ್ನು ಹೇಗೆ ಮುನ್ನಡೆಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಅವರ ಮುಂದಿನ ಹಾದಿ ಸುಗಮವಾಗಿರಲಿ. ಲವ್ ಯೂ ಅಪ್ಪ,” ಎಂದು ಐಶ್ವರ್ಯಾ ತಮ್ಮ ತಂದೆಯ ಮೇಲಿನ ಪ್ರೀತಿ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಹೋರಾಟದ ದಿನಗಳಲ್ಲಿ ಕುಟುಂಬ ನೀಡಿದ ಬೆಂಬಲ ಹಾಗೂ ತಂದೆಯ ಯಶಸ್ಸನ್ನು ಕಂಡು ಮಗಳು ಪಟ್ಟ ಸಂತಸದ ಈ ಪೋಸ್ಟ್ ಸದ್ಯ ಇಂಟರ್ನೆಟ್ನಲ್ಲಿ ಧೂಳೆಬ್ಬಿಸುತ್ತಿದೆ.
#FreedomTV #DKShivakumar #AishwaryaDKS #DKSdaughter #DKSAsCM #KarnatakaNewCM #KanakapuraBande #FatherDaughterGoals #InstagramViral #KarnatakaPolitics #WishesToPapa




