‘ಕಾಕ್ರೋಚ್ ಜನತಾ ಪಾರ್ಟಿ’ಗೆ ಮ್ಯಾಂಗೋ ಪಾರ್ಟಿ ಮೂಲಕ ಪ್ರಕಾಶ್ ಸಾಥ್!
Prakash raj supprots Cockroach Janatha party

ನವದೆಹಲಿ: ಬಹುಭಾಷಾ ನಟ, ಪ್ರಖ್ಯಾತ ವಿಚಾರವಾದಿ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹಳೆಯ ಸಂದರ್ಶನವೊಂದನ್ನು ನೆನಪಿಸುವಂತೆ ಮಾಡಿರುವ ವಿಡಂಬನಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ನಲ್ಲಿ ಸಖತ್ ವೈರಲ್ ಆಗುತ್ತಿದೆ. ಮಾವಿನ ಹಣ್ಣು ತಿನ್ನುತ್ತಾ ಪ್ರಧಾನಿ ಮೋದಿಯವರನ್ನು ಅಣಕಿಸಿರುವ ನಟನ ಈ ಪೋಸ್ಟ್‌ಗೆ ಇಂಟರ್ನೆಟ್‌ನಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

ಮೋದಿಗೆ ಪ್ರಕಾಶ್ ರಾಜ್ ಸವಾಲ್!
ಪ್ರಕಾಶ್ ರಾಜ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಐಸ್ ಕ್ರೀಂನೊಂದಿಗೆ ‘ಇಮಾಮ್ ಪಸಂದ್’ ತಳಿಯ ಮಾವಿನ ಹಣ್ಣನ್ನು ಸವಿಯುತ್ತಿರುವುದು ಕಂಡುಬಂದಿದೆ. ಮಾವಿನ ಹಣ್ಣು ತಿನ್ನುತ್ತಲೇ ಪ್ರಧಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು, “ದೇಖಿಯೇ ಮೋದಿಜಿ, ಆಮ್ ಕೋ ನಾ ಪುರಾ ಐಸೆ ಕಟ್ ಕರ್ಕೆ, ಇಮಾಮ್ ಪಸಂದ್ ಹೈ. ಇಸ್ಮೇ ಐಸ್ ಕ್ರೀಮ್ ದಾಲ್ಕೆ ಕಾಕ್ರೋಚಸ್ ಐಸೆ ಖತೇ ಹೈ” (“Dekhiye Modiji, aam ko na pura aise cut karke, Imam Pasand hai. Isme ice cream daalke cockroaches aise khate hain) ಎಂದು ಲೇವಡಿ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಈ ವಿಡಿಯೋಗೆ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janata Party) ಹಾಗೂ “ಜಿರಳೆಗಳು ಮಾವಿನ ಹಣ್ಣು ತಿನ್ನುತ್ತಿವೆ” ಎಂಬ ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ. ಇದು ನೇರವಾಗಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾಡಿರುವ ರಾಜಕೀಯ ವಿಡಂಬನೆ ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.
2019ರ ಅಕ್ಷಯ್ ಕುಮಾರ್-ಮೋದಿ ಸಂದರ್ಶನಕ್ಕೆ ತಳುಕು
ನೆಟ್ಟಿಗರು ಪ್ರಕಾಶ್ ರಾಜ್ ಅವರ ಈ ವಿಡಿಯೋವನ್ನು 2019ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ್ದ ವೈರಲ್ ಸಂದರ್ಶನಕ್ಕೆ ಹೋಲಿಕೆ ಮಾಡುತ್ತಿದ್ದಾರೆ.ಅಂದು ಆ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಅವರು, “ನಮ್ಮ ಪ್ರಧಾನ ಮಂತ್ರಿಗಳು ಮಾವಿನ ಹಣ್ಣು ತಿನ್ನುತ್ತಾರಾ? ಒಂದು ವೇಳೆ ತಿನ್ನುವುದಾದರೆ ಅವುಗಳನ್ನು ಕಟ್ ಮಾಡಿ ತಿನ್ನುತ್ತೀರಾ ಅಥವಾ ಜ್ಯೂಸ್ ತರಹ ಕುಡಿಯುತ್ತೀರಾ?” ಎಂದು ಕೇಳಿದ್ದರು. ಅದಕ್ಕೆ ಪ್ರಧಾನಿ ಮೋದಿ ಅವರು ಮುಗುಳ್ನಕ್ಕು, “ನನಗೆ ಮಾವಿನ ಹಣ್ಣು ಎಂದರೆ ತುಂಬಾ ಇಷ್ಟ, ನಾನು ಅದನ್ನು ಸವಿಯುತ್ತೇನೆ” ಎಂದು ಉತ್ತರಿಸಿದ್ದರು.ಆ ಹಳೆಯ ಸಂಭಾಷಣೆಯನ್ನು ನೆನಪಿಸುವಂತೆ ಪ್ರಕಾಶ್ ರಾಜ್ ಈಗ ಟಾಂಗ್ ನೀಡಿದ್ದಾರೆ.
ಶಶಿ ತರೂರ್ ಸಲಹೆ ಹಾಗೂ ನೆಟ್ಟಿಗರ ತರಹೇವಾರಿ ಕಾಮೆಂಟ್ಸ್!
ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷಗಳಿಗೆ ಇದೊಂದು ಉತ್ತಮ ರಾಜಕೀಯ ಸುದ್ದಿ ಎಂದು ಸಲಹೆ ನೀಡಿದ್ದಾರೆ. ಇತ್ತ ನೆಟ್ಟಿಗರು ಕೂಡ ಪ್ರಕಾಶ್ ರಾಜ್ ಪೋಸ್ಟ್‌ಗೆ ಮುಗಿಬಿದ್ದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಒಬ್ಬ ಖಾತೆದಾರ, “ಕೀಟಗಳು (ಜಿರಳೆಗಳು) ಸಹ ಈಗ ‘ಅಚ್ಛೇ ದಿನ್'(ಒಳ್ಳೆಯ ದಿನಗಳನ್ನು) ಆನಂದಿಸಲು ಪ್ರಾರಂಭಿಸಿವೆ” ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, “ಜಿರಳೆಗಳು ಕಮಲವನ್ನು ತಿನ್ನುತ್ತಿವೆ” ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ, ಪ್ರಕಾಶ್ ರಾಜ್ ಅವರ ಈ ‘ಮಾವಿನ ಹಣ್ಣಿನ ರಾಜಕೀಯ ವಿಡಂಬನೆ’ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
#PrakashRaj #PMModi #MangoInterview #AkshayKumar #CockroachJanataParty #ShashiTharoor #XViralVideo #PoliticalSatire #BollywoodNews #FreedomTV #FreedomTVNews #KannadaNews




