ದೇಶ/ವಿದೇಶರಾಜಕೀಯ

ಕಾಂಗ್ರೆಸ್ ಪಾಲಿಗೆ ಕರ್ನಾಟಕ ದೊಡ್ಡ ಎಟಿಎಂ ಲಹರ್ ಸಿಂಗ್ ಆರೋಪ!

Lahar Singh Siroya said Karnataka state is ATM fo Congress party

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಹಾಗೂ ಹೊಸ ಸಚಿವ ಸಂಪುಟ ರಚನೆಯ ಕಸರತ್ತು ತಾರಕಕ್ಕೇರಿರುವಾಗಲೇ, ವಿರೋಧ ಪಕ್ಷವಾದ ಬಿಜೆಪಿ ಭ್ರಷ್ಟಾಚಾರದ ಅಸ್ತ್ರವನ್ನು ಪ್ರಯೋಗಿಸಿ ಮತ್ತೊಮ್ಮೆ ಭೀಕರ ದಾಳಿ ನಡೆಸಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಸರ್ಕಾರದ ಲೂಟಿ ರಾಜಕಾರಣದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಸಂಸದ ಲಹರ್ ಸಿಂಗ್ ಸಿರೋಯಾ, ಕರ್ನಾಟಕವನ್ನು ಕಾಂಗ್ರೆಸ್ ತನ್ನ ವೈಯಕ್ತಿಕ ಖಜಾನೆಯನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಗೆ ಕರ್ನಾಟಕ ಎಟಿಎಂ ಆಗಿರೋದು ದುರಾದೃಷ್ಟ!


ಮಾಧ್ಯಮಗಳೊಂದಿಗೆ ಮಾತನಾಡಿದ ಲಹರ್ ಸಿಂಗ್, “ಕರ್ನಾಟಕವು ನಿಸರ್ಗ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಶ್ರೀಮಂತ ರಾಜ್ಯವಾಗಿದೆ. ಆದರೆ, ದುರದೃಷ್ಟವಶಾತ್ ಇಂತಹ ರಾಜ್ಯ ಇಂದು ದೆಹಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಕೇವಲ ಹಣ ಡ್ರಾ ಮಾಡುವ ಎಟಿಎಂ (ATM) ಆಗಿ ಮಾರ್ಪಟ್ಟಿದೆ. ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದ್ದು, ಕೇವಲ ಲೂಟಿ ಮತ್ತು ದರೋಡೆಯೇ ಎದ್ದು ಕಾಣುತ್ತಿದೆ” ಎಂದು ಕಿಡಿಕಾರಿದರು.

ಲೂಟಿಯ ಕಪಿಮುಷ್ಟಿಯಿಂದ ಬಚಾವಾಗಲು ಬಿಜೆಪಿ ಬೇಕೇಬೇಕು!
“ಕಾಂಗ್ರೆಸ್ ಸರ್ಕಾರದ ಈ ನಿರಂತರ ಲೂಟಿ ಮತ್ತು ಆಡಳಿತ ದುರುಪಯೋಗದಿಂದ ಕರ್ನಾಟಕದ ಜನತೆ ಈಗ ಸಂಪೂರ್ಣ ಬೇಸತ್ತು ಹೋಗಿದ್ದಾರೆ. ರಾಜ್ಯವನ್ನು ಈ ಭ್ರಷ್ಟಾಚಾರದ ಹಿಡಿತದಿಂದ ಮುಕ್ತಗೊಳಿಸಬೇಕಾದರೆ ಜನರು ಬಿಜೆಪಿಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಪ್ರಜ್ಞಾವಂತ ಜನರು ರಾಜ್ಯದಲ್ಲಿ ಈ ಜನವಿರೋಧಿ ಸರ್ಕಾರವನ್ನು ಕಿತ್ತೊಗೆದು, ಖಂಡಿತವಾಗಿಯೂ ಅಭಿವೃದ್ಧಿ ಪರವಾದ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಬಹುಮತದೊಂದಿಗೆ ಆಯ್ಕೆ ಮಾಡಲಿದ್ದಾರೆ ಎನ್ನುವ ಅಚಲ ವಿಶ್ವಾಸ ನನಗಿದೆ. ನಾವು ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯದ ಸಂಪತ್ತನ್ನು ಉಳಿಸಲು ಮತ್ತು ಕರ್ನಾಟಕವನ್ನು ಲೂಟಿಕೋರರ ಹಿಡಿತದಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತದೆ” ಎಂದು ಕರಾರುವಕ್ಕಾಗಿ ಲಹರ್ ಸಿಂಗ್ ಹೇಳಿದರು.

#FreedomTV #LaharSinghSiroya #KarnatakaATM #CongressCorruption #LaharSinghAttacksCongress #BJPvsCongress #KarnatakaPolitics #BreakingNews #KannadaNews #BengaluruPolitics #CongressLoot #DKShivakumarCM #SiddaramaiahResignation

Comments (0)

Your email address will not be published. Required fields are marked *

Back to top button