ಕ್ರೈಂ ಸ್ಟೋರಿ

ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು; 6 ಜನರ ಹತ್ಯೆ!

6 people shot dead in Bheema river shore

ವಿಜಯಪುರ: ಇಷ್ಟು ದಿನ ತಣ್ಣಗಾಗಿದ್ದ ರಕ್ತಚರಿತ್ರೆಯ ಭೂಮಿ ಭೀಮಾತೀರದಲ್ಲಿ ಮತ್ತೆ ಭೀಕರ ಗುಂಡಿನ ಮೊರೆತ ಕೇಳಿಬಂದಿದೆ. ಸುದೀರ್ಘ ಕಾಲದಿಂದ ಶಾಂತವಾಗಿದ್ದ ಚಡಚಣ ಭಾಗದಲ್ಲಿ ಆಸ್ತಿ ದ್ವೇಷದ ಹಿನ್ನೆಲೆಯಲ್ಲಿ ಬರೋಬ್ಬರಿ 6 ಜನರನ್ನು ಅತ್ಯಂತ ಕ್ರೂರವಾಗಿ ಗುಂಡಿಟ್ಟು ಭೀಕರ ಹತ್ಯೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ರಕ್ತಪಿಪಾಸು ಕೃತ್ಯ ನಡೆದಿದ್ದು, ಇಡೀ ಜಿಲ್ಲೆಯೇ ತಲ್ಲಣಗೊಂಡಿದೆ.

ಜಮೀನು ವ್ಯಾಜ್ಯಕ್ಕೆ ಜೀವತೆತ್ತ 6 ಮಂದಿ!


ಪ್ರಾಥಮಿಕ ವರದಿಗಳ ಪ್ರಕಾರ, ಗೋವಿಂದಪುರ ಗ್ರಾಮದ ನಿರಾಳೆ ಮತ್ತು ಗೊಳಗಿ ಕುಟುಂಬಸ್ಥರ ನಡುವೆ ಕಳೆದ ಕೆಲವು ಸಮಯದಿಂದ ಜಮೀನು ಮತ್ತು ಆಸ್ತಿಗೆ ಸಂಬಂಧಿಸಿದಂತೆ ತೀವ್ರ ವಿವಾದ ತಾರಕಕ್ಕೇರಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಗೊಳಗಿ ಕುಟುಂಬದ ಹಂತಕರು, ಇಂದು ಏಕಾಏಕಿ ನಿರಾಳೆ ಕುಟುಂಬಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಅಪ್ರಚೋದಿತವಾಗಿ ಮುಗಿಬಿದ್ದ ದುಷ್ಕರ್ಮಿಗಳು ಸಿಕ್ಕಸಿಕ್ಕವರ ಮೇಲೆ ಪಿಸ್ತೂಲ್‌ನಿಂದ ಗುಂಡುಗಳ ಸುರಿಮಳೆಗರೆದಿದ್ದಾರೆ. ತಲೆ ಮತ್ತು ಎದೆಯ ಭಾಗಕ್ಕೆ ತೀವ್ರವಾಗಿ ಗುಂಡು ತಗುಲಿದ ಪರಿಣಾಮ ಒಂದೇ ಕುಟುಂಬದ ಪ್ರಮುಖರು ಸೇರಿದಂತೆ ಒಟ್ಟು ಆರು ಮಂದಿ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರು ರೇವಣಸಿದ್ದಪ್ಪ ನಿರಾಳೆ,ದುಂಡಪ್ಪ ರೇವಣಸಿದ್ದಪ್ಪ ನಿರಾಳೆ,ಶಿವಪುತ್ರ ರೇವಣಸಿದ್ದಪ್ಪ ನಿರಾಳೆ,ಚಂದ್ರಶೇಖರ್ ನಿರಾಳೆ,ಶಬ್ಬಿರ್ ನದಾಫ್ ಸೇರಿದಂತೆ 6 ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಭೀಮಾತೀರದಲ್ಲಿ ಮತ್ತೆ ಹಳೇ ಗ್ಯಾಂಗ್‌ವಾರ್ ಮತ್ತು ಫ್ಯಾಕ್ಷನ್ ರಾಜಕಾರಣದ ಆತಂಕ ಶುರುವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಚಡಚಣ ಪೊಲೀಸ್ ಸಿಬ್ಬಂದಿ ಭಾರಿ ಬಂದೋಬಸ್ತ್‌ನೊಂದಿಗೆ ಗೋವಿಂದಪುರ ಗ್ರಾಮಕ್ಕೆ ಧಾವಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸದ್ಯ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಇಡೀ ಹಳ್ಳಿಯನ್ನೇ ಪೊಲೀಸ್ ಕಂಟ್ರೋಲ್‌ಗೆ ತೆಗೆದುಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಗೊಳಗಿ ಕುಟುಂಬದ ಹಂತಕರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತೀವ್ರ ಜಾಲ ಬೀಸಲಾಗಿದೆ.

#FreedomTV #BheemaTeera #VijayapuraCrime #Chadachan #MassMurder #SixKilled #PropertyDispute #BheemaTeeraGangwar #VijayapuraNews #BreakingNews #KannadaCrimeNews #GovindapuraMurder #FiringInVijayapura #KarnatakaPolice #EncounterAlert

Comments (0)

Your email address will not be published. Required fields are marked *

Back to top button