ಕ್ರೈಂ ಸ್ಟೋರಿ

CCB ಪೊಲೀಸರ ಭರ್ಜರಿ ಬೇಟೆ – 21 ಕೋಟಿ ಮೌಲ್ಯದ ಡ್ರಗ್ಸ್‌ ವಶ.. ಮೂವರು ವಿದೇಶಿ ಪ್ರಜೆಗಳು ಅಂದರ್!

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ CCB ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬೃಹತ್ ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿದ್ದಾರೆ. ಸಿಸಿಬಿ ಪೊಲೀಸರ 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.‌

ಮೂವರು ನೈಜೀರಿಯಾ ಪ್ರಜೆಗಳು ಲಗೇಜ್‌ ಬ್ಯಾಗ್‌ನಲ್ಲಿ ಅಡಗಿಸಿಟ್ಟುಕೊಂಡು ಡ್ರಗ್ಸ್‌ ತರುತ್ತಿದ್ದರು. ಇದೀಗ ಮೂವರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದು, ಬಂಧಿತರಿಂದ ಬರೋಬ್ಬರಿ 21 ಕೋಟಿ ರೂ. ಮೌಲ್ಯದ 10 ಕೆಜಿ 270 ಗ್ರಾಂ ನಷ್ಟು ಎಂಡಿಎಂಎ ಕ್ರಿಸ್ಟಲ್‌, 4 ಮೊಬೈಲ್‌ ಫೋನ್‌, 2 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ್ದ ಇತರ ವಸ್ತುಗಳನ್ನ ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳು ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಬೈಲಕೊನೆಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದರು. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಡ್ರಗ್ಸ್‌ ಮಾರಾಟ ಮಾಡುತ್ತಿದ್ದರು.

ಮೆಡಿಕಲ್ ಮತ್ತು ಟೂರಿಸ್ಟ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ನೈಜೀರಿಯಾದಿಂದ ಬೇರೆ ಪೆಡ್ಲರ್‌ಗಳಿಂದ ಎಂಡಿಎಂಎ ಕ್ರಿಸ್ಟಲ್ ಬೆಂಗಳೂರಿಗೆ ತರಿಸಿಕೊಳ್ತಿದ್ರು. ಸದ್ಯ ಆರೋಪಿಗಳನ್ನ ಬಂದಿಸಿರುವ ಸಿಸಿಬಿ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button