ಜ್ಯೋತಿಷ್ಯವಿಶೇಷಸುದ್ದಿ

ಜೀವವಿಲ್ಲದ ಹಾವು: ಇದರ ರಚನೆ ಮಸ್ತಾಗಿದೆ ನೋಡಿ, ನೀವು ಫುಲ್​​​ ಫಿದಾ ಆಗೋದು ಪಕ್ಕಾ

ನೀವು ಕಲಾಭಿಮಾನಿಗಳಾಗಿದ್ದರೆ ಈ ವಿಡಿಯೋ ನೋಡಲೇಬೇಕು. ಹಾವು ಯಾರಿಗೂ ಇಷ್ಟವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಹಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ನಿಜವಾದ ಹಾವಿನ ಬದಲು ಒಂದು ಚಿಕ್ಕ ಹಾವಿನ ರೀತಿ ಕಾಣುವ ರಬ್ಬರ್ ಪೀಸ್ ಕಂಡರೂ ಹಾವು ಎಂದು ತಿಳಿದು ಮಾರುದ್ದ ಹಾರುವ ಜನರಿರುವ ಕಾಲದಲ್ಲಿ ಇಲ್ಲೊಬ್ಬರ 3 ಜನರ ತಂಡ ಒಂದು ಹಾವಿನ ಆಕೃತಿಯನ್ನು ಮಾಡಿದ್ದಾರೆ. ಏನಿದು ವಿಡಿಯೋ ನೀವೇ ನೋಡಿ!.

ಕಲೆ ಮತ್ತು ಪ್ರತಿಭೆ ಯಾರ ಸೊತ್ತು ಅಲ್ಲ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಸತ್ಯ ಎನಿಸುವಂತಹ ಅನೇಕ ದೃಶ್ಯಗಳನ್ನು ನೀವು ಕಣ್ಣಾರೆ ಕಂಡಿರಬಹುದು, ತೆರೆಮರೆಯಲ್ಲಿವಿದ್ದು ಗುರುತಿಸಿಕೊಳ್ಳದಿದ್ದರೂ, ತಮ್ಮ ಅಭಿರುಚಿಯನ್ನು ಬಿಡದೆಯೇ ಸಾಧನೆಯ ಮೆಟ್ಟಿಲು ಏರಲು ಪ್ರಯತ್ನಿಸುತ್ತಿರುವವರು ಲಕ್ಷಾಂತರ ಜನರಿದ್ದಾರೆ. ಇವರೆಲ್ಲರೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಉತ್ತಮ ಸಂದೇಶ ನೀಡುವವರಾಗಿದ್ದರೆ. ಅದರಲ್ಲಿಯೂ ಯಾರ ಬಳಿ ಯಾವ ರೀತಿಯ ವಿದ್ಯೆ ಅಥವಾ ಕಲೆ ಇದೆ ಎಂಬುದು ತಿಳಿದಿರುವುದಿಲ್ಲ.

ಇಷ್ಟೆಲ್ಲಾ ಪೀಠಿಕೆ ಕೇಳಿದ ಮೇಲೆ ಅದು ಯಾವ ರೀತಿಯ ಕಲೆಯ ಬಗ್ಗೆ ಮಾತನಾಡುತ್ತಿರಬಹುದು ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ನೀವು ಕೂಡ ಕಲಾಭಿಮಾನಿಗಳಾಗಿದ್ದರೆ ಈ ವಿಡಿಯೋ ನೋಡಲೇಬೇಕು. ಹಾವು ಯಾರಿಗೂ ಇಷ್ಟವಾಗುವುದಿಲ್ಲ. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಹಾವನ್ನು ನೋಡಿ ಬೆಚ್ಚಿ ಬೀಳುತ್ತಾರೆ. ನಿಜವಾದ ಹಾವಿನ ಬದಲು ಒಂದು ಚಿಕ್ಕ ಹಾವಿನ ರೀತಿ ಕಾಣುವ ರಬ್ಬರ್ ಪೀಸ್ ಕಂಡರೂ ಹಾವು ಎಂದು ತಿಳಿದು ಮಾರುದ್ದ ಹಾರುವ ಜನರಿರುವ ಕಾಲದಲ್ಲಿ ಇಲ್ಲೊಬ್ಬರ 3 ಜನರ ತಂಡ ಒಂದು ಹಾವಿನ ಆಕೃತಿಯನ್ನು ಮಾಡಿದ್ದಾರೆ. ಚಿತ್ರದಲ್ಲಿ ನೀವು ಹಾವನ್ನು ನೋಡಿರಬಹುದು ಅಥವಾ ಗೋಡೆಗಳ ಮೇಲೆ ಪೇಂಟಿಗ್ ಆಗಿ ನೋಡಿರಬಹುದು ಆದರೆ ತೋಟದಲ್ಲಿ ಥೇಟ್ ಹಾವು ಮಲಗಿದ ಹಾಗೆಯೇ ಆಕೃತಿ ಮಾಡುವುದನ್ನು ನೀವು ನೋಡಿದ್ದೀರಾ? ಹಾಗಾದರೆ ಈ ವಿಡಿಯೋ ತಪ್ಪದೇ ನೋಡಿ.

ಎರಡು ಯುವಕರು ಮತ್ತು ಒಬ್ಬಳು ಯುವತಿ ಸೇರಿಕೊಂಡು ಒಂದು ತೋಟದಲ್ಲಿ ಥೇಟ್ ಹಾವಿನ ಹಾಗೆಯೇ ಕಾಣುವ ಒಂದು ಕಲಾಕೃತಿ ಮಾಡಿದ್ದಾರೆ. ಇದರಲ್ಲಿ ಏನಿದೆ ವಿಶೇಷ ಅಂತೀರಾ. ಇದು ಸಣ್ಣ ಪುಟ್ಟ ಹಾವಲ್ಲ. ಹೆಬ್ಬಾವಿಗಿಂತಲೂ ದಪ್ಪ ಮತ್ತು ಉದ್ದವಾಗಿರುವ ಹಾವು. ಈ ಹಾವಿನ ಆಕೃತಿ ಮಾಡಲು ಮಣ್ಣು, ಒಣಗಿದ ಬಾಳೆ ಎಲೆ, ಹುಲ್ಲು ಎಲ್ಲವನ್ನೂ ಸೇರಿಸಿಕೊಂಡಿದ್ದಾರೆ. ಈ ವಿಡಿಯೋ ನಿಮಗೆ ಮೊದ ಮೊದಲು ತುಂಬಾ ಫನ್ನಿ ಆಗಿದೆ ಎಂದು ಅನಿಸಿದರೂ ಕೂಡ ಮುಂದೆ ಹಾವಿನ ಆಕೃತಿ ಶುರುವಾಗುತ್ತಿದ್ದಂತೆ ಈ ವಿಡಿಯೋಗಾಗಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ನಿಮಗೆ ಅರಿವಾಗುತ್ತದೆ. ನೋಡ ನೋಡುತ್ತಿದ್ದಂತೆ ಹಾವಿನ ಆಕೃತಿ ಸಿದ್ದವಾಗುತ್ತದೆ ಅದಕ್ಕೆ ಹಾವಿನ ರೀತಿಯಲ್ಲಿ ಬಣ್ಣ ಬಳಿದು ಅದೇ ರೀತಿಯಲ್ಲಿ ಶೇಪ್ ನೀಡಲಾಗುತ್ತದೆ. ದೂರದಲ್ಲಿ ನಿಂತು ನೋಡಿದಾಗ ಹಾವೊಂದು ಮಲಗಿದೆ ಎಂಬ ರೀತಿಯಲ್ಲಿ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ.

Comments (0)

Your email address will not be published. Required fields are marked *

Back to top button