Editorial
- Editorial

ಸಂಪಾದಕೀಯ…
ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಯುಗಕ್ಕೆ ಅತ್ಯಂತ ನಾಟಕೀಯ ಅಂತ್ಯ ಹಾಡಲಾಗಿದ್ದು, ಇದನ್ನು ಬೇರೆ ಯಾವ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೊದಲ ಅವಧಿಯಲ್ಲಿ ‘ಅಹಿಂದ’ ನಾಯಕ, ‘ಜನತಾ ಪರಿವಾರದ’ ಕುಡಿ ಎಂದು ಕರೆಸಿಕೊಂಡಿದ್ದ ಸಿದ್ದರಾಮಯ್ಯ, ಎರಡನೇ ಅವಧಿಯ ಕೊನೆಗೆ ‘ಜಾತಿವಾದಿ’, ‘ದುರಹಂಕಾರಿ’, ‘ವಂಶಾಡಳಿತದ ಪ್ರತಿಪಾದಕ’ ಎಂಬ ಕಳಂಕ ಹೊತ್ತುಕೊಂಡು ಮನೆಯ ದಾರಿ ಹಿಡಿಯುತ್ತಿದ್ದಾರೆ. ಇದು ಹೈಕಮಾಂಡ್ ನೀಡಿದ ‘ಗೌರವಯುತ ನಿರ್ಗಮನ’ ಅಲ್ಲ, ಬದಲಾಗಿ ‘ಹೀನಾಯ ವಿದಾಯ’. ಮಗನ ರಾಜಕೀಯ ಪ್ರವೇಶ, ಸ್ವಜಾತಿ ಅಧಿಕಾರಿಗಳ ಮೇಲಾಟ, ಎಗ್ಗಿಲ್ಲದ ಭ್ರಷ್ಟಾಚಾರ, ಆಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದು, ಮಾಧ್ಯಮಗಳ ಜೊತೆ ಸಮರ ಹಾಗೂ ವಯೋಸಹಜ ನಿತ್ರಾಣ – ಇವೆಲ್ಲವೂ ಸೇರಿ ಅವರನ್ನು ಜನರಿಂದ ದೂರ ಮಾಡಿತ್ತು. ಗ್ಯಾರಂಟಿಗಳ ಹೆಸರಲ್ಲಿ ರಾಜ್ಯದ ಬೊಕ್ಕಸ ಬರಿದು ಮಾಡಿ, ಆರ್ಥಿಕತೆಯನ್ನು ಹಳ್ಳಕ್ಕೆ ತಳ್ಳಿದ ‘ದುಂದುಗಾರಿಕೆ’ಯೇ ಅವರ ಆಡಳಿತದ ಮೈಲಿಗಲ್ಲಾಗಿದ್ದು, ಅಂದು ‘ಭಾಗ್ಯ’ ಕೊಟ್ಟ ಸಿದ್ದರಾಮಯ್ಯ ಕೊನೆಗೆ ‘ದುರ್ಭಾಗ್ಯ’ದ ಸಿಎಂ ಆಗಿ ಹೊರನಡೆಯುತ್ತಿದ್ದಾರೆ. ಸಿದ್ದರಾಮಯ್ಯ ನಿರ್ಗಮನದ ನಂತರ ಈಗ ಡಿ.ಕೆ. ಶಿವಕುಮಾರ್ ಸರದಿ ಬಂದಿದ್ದು, ಇದು ಸಂಭ್ರಮದ ಪಟ್ಟಾಭಿಷೇಕ ಅಲ್ಲ, ಬದಲಿಗೆ ಅಗ್ನಿಪರೀಕ್ಷೆ. ಪಕ್ಷವನ್ನು ಸಾವಿರ ಬಾರಿ ಸಾವಿನ ದವಡೆಯಿಂದ ಪಾರು ಮಾಡಿದ ಚಾಣಕ್ಯ ‘ಟ್ರಬಲ್ ಶೂಟರ್’ ಶಕ್ತಿ ಅವರಲ್ಲಿದೆ. ಜೋಲಿ ಹೊಡೆಯದ, ಕಾಲಹರಣ ಮಾಡದ ‘ಎಸ್ ಅಂದ್ರೆ ಎಸ್’ ಎನ್ನುವ ಕಠಿಣ ನಿರ್ಧಾರ ಶಕ್ತಿ ಹಾಗೂ ಇಂಧನ-ನೀರಾವರಿ ಖಾತೆಗಳನ್ನು ಗೆಲ್ಲಿಸಿದ ಆಡಳಿತದ ಅನುಭವದ ಟ್ರ್ಯಾಕ್ ರೆಕಾರ್ಡ್ ಅವರ ಬೆನ್ನಿಗಿದೆ. ಕಾರ್ಯಕರ್ತರ ನಾಡಿಮಿಡಿತ ಅರಿತ, ಜನರ ಜೊತೆ ನೇರ ಸಂಪರ್ಕ ಇರುವ ಮಾಸ್ ಲೀಡರ್ ಆಗಿರುವ ಇವರು ‘ಬ್ರ್ಯಾಂಡ್ ಬೆಂಗಳೂರು’ ಮತ್ತು ನಗರಗಳ ಅಭಿವೃದ್ಧಿಯ ವಿಷನ್ ಹೊಂದಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರೇ, ನೀವು ಈ ಆರು ತಪ್ಪುಗಳನ್ನು ಮಾಡಿದರೆ ನಿಮ್ಮದೂ ‘ಹೀನಾಯ ವಿದಾಯ’ ಖಚಿತವಾಗುತ್ತದೆ. ಮೊದಲನೆಯದಾಗಿ, ED-CBI ಕೇಸ್ಗಳ ಸುಳಿಯಲ್ಲಿರುವ ನೀವು ‘ಕರಪ್ಷನ್ ಕಿಂಗ್’ ಪಟ್ಟ ಹಾಗೂ ‘ಬಿಸಿನೆಸ್ಮ್ಯಾನ್’ ಇಮೇಜ್ ಕಿತ್ತೊಗೆದು, ಮೊದಲ ದಿನವೇ ಭ್ರಷ್ಟರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿದೆ. ಎದುರಾಳಿಗಳನ್ನು ಮುಗಿಸುವ ‘ಸೇಡಿನ ರಾಜಕಾರಣ’ದ ಚಾಳಿ ಬಿಟ್ಟು, ನಿಮ್ಮ ‘ಟ್ರಬಲ್ ಶೂಟರ್’ …
KANNADA NEWS
- ramanagara

ಮತದಾರರಿಗೆ ಚೊಂಬು ಕೊಡ್ತಿರಾ- ಡಿಕೆಶಿ ವಿರುದ್ಧ ನಿಖಿಲ್ ಗುಡುಗು!
ರಾಮನಗರ: ಜಮೀನು ಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಬಿಡದಿಯ ಭೈರಮಂಗಲ ಗ್ರಾಮದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ…
Read More » -

-

-





































