
ಬೆಂಗಳೂರು : ನಾಲ್ಕು ವೋಟರ್ ಐಡಿ ಹೊಂದಿರುವ ಆರೋಪ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಕೋರ್ಟ್ ನಾನ್ ಬೇಲೇಬಲ್ ವಾರಂಟ್ ಹೊರಡಿಸಿದ್ದ ಹಿನ್ನಲೆಯಿಂದಾಗಿ ಅರೆಸ್ಟ್ ಭೀತಿ ಎದುರಿಸುತ್ತಿದ್ದ ನಟ ಪ್ರಕಾಶ್ ರಾಜ್‌ಗೆ ಇದೀಗ ಜಾಮೀನು ಮಂಜೂರಾಗಿದೆ.
ನಟ ಪ್ರಕಾಶ್ ರಾಜ್ ಪರ ವಕೀಲರು ಇಂದು ಬೆಳಗ್ಗೆ ವಾರಂಟ್ ರಿಕಾಲ್ಗೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಖುದ್ದು ಪ್ರಕಾಶ್ ರಾಜ್ ಅವರೇ ವಾರೆಂಟ್ ರೀಕಾಲ್ ಮಾಡಿಸಲು ಕೋರ್ಟ್ ಹಾಜರಾಗಿದ್ದರು. ಮಧ್ಯಾಹ್ನ ಮೂರು ಗಂಟೆಗೆ ವಿಚಾರಣೆ ಆರಂಭಿಸಿ 48ನೇ ಎಸಿಜೆಎಂ ಕೋರ್ಟ್, ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು ಮಾಡಿದೆ. ನಾಲ್ಕು ಸಾವಿರ ಕ್ಯಾಶ್ ಶ್ಯೂರಿಟಿ ಕಟ್ಟಲು ಸೂಚಿಸಿ ಆದೇಶ ಹೊರಡಿಸಿದೆ.
ಈ ಹಿಂದಿನ ವಿಚಾರಣೆ ವೇಳೆ ಪ್ರಕಾಶ್ ರಾಜ್ ಅವರು ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ಬೆಂಗಳೂರಿನ 48ನೇ ಎಸಿಜೆಎಂ (ACJM) ನ್ಯಾಯಾಲಯವು ನಟನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶಿಸಿತ್ತು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕಾಶ್ ರಾಜ್ ಅವರಿಗೆ ಬಿಗ್ ರಿಲೀಫ್ ನೀಡಿದೆ.




