Editorial
- Editorial

ಸಂಪಾದಕೀಯ…
ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿದ ಲಾಗಾಯ್ತು, ಇಡೀ ಜಗತ್ತೇ ಇಂಧನ ಸಮಸ್ಯೆಗೆ ಕುತ್ತಿಗೆ ಕೊಟ್ಟು ಭಯದ ಕಣ್ಣಲ್ಲಿ ನಿಂತಿದೆ. ನಾವು ಇರಾನ್ ಪರ ನಿಂತರೆ ನಾಳೆ ಅಮೆರಿಕ-ಇಸ್ರೇಲ್ ಗೆದ್ದು ನಮ್ಮ ದಾರಿಗೆ ಅಡ್ಡ ಬರಬಹುದು ಎಂಬುದು ಮೋದಿ ಅವರ ಭಯ. ಇಸ್ರೇಲ್ ಪರ ನಿಂತರೆ ನಾಳೆ ಇರಾನ್-ಚೀನಾ-ರಷ್ಯಾ ಗೆದ್ದು ನಮಗೆ ತೊಂದರೆ ಕೊಡಬಹುದು ಎಂಬ ಆತಂಕವಿದೆ. ಅತ್ತ ದರಿ ಇತ್ತ ಪುಲಿ ಎಂದು ನಮ್ಮ ಪ್ರಧಾನಿ ಬ್ಯಾಲೆನ್ಸ್ ಮಾಡುತ್ತಿರುವಾಗ, ಕೆಲ ಮೀಡಿಯಾ ಮಂಗಗಳು, ಮೋದಿ ಅವರನ್ನು ಇವರ ಮನೆಯ ಪುಕ್ಕಟೆ ಕೂಲಿಯಾಳಿಗೆ ಗದರುವಂತೆ ಗದರುತ್ತಾ, ಅವನು ಇವನು ಎಂದು ಹಂಗಿಸುತ್ತಾ, “ಕಿತ್ತು ಹೋಗುವುದೇನಯ್ಯ ಸರ್ವಜ್ಞ” ಎಂಬಂತೆ ಅರಚುತ್ತಿರುವ ವಿಕಟ ದೃಶ್ಯ ನಮ್ಮ ಮುಂದಿದೆ. ಅಲ್ಲಿ ಮೋದಿ ಇರಲಿ, ಯಂಕ್ ನಾಣಿ ಸೀನರೇ ಇರಲಿ — ಇದಕ್ಕಿಂತ ಹೆಚ್ಚೇನೂ ಮಾಡಲು ಆಗದು ಎಂಬ ಸತ್ಯ ಗೊತ್ತಿದ್ದೂ ಚೇಷ್ಟೆ ಮಾಡುವ ಕಪಿಗಳಿಗೆ ಅವುಗಳದ್ದೇ ಕಾರಣಗಳಿರುತ್ತವೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಏನೋ ಹೇಳಲು ಹೋಗಿ ಏನೋ ಹೇಳಿಬಿಟ್ಟರು. ಮರುದಿನ ಕ್ಲಾರಿಫಿಕೇಶನ್ ಕೊಟ್ಟರು. ಸುಪ್ರೀಂ ಕೋರ್ಟ್ ಜಡ್ಜ್ ಕ್ಲಾರಿಫಿಕೇಶನ್ ಕೊಟ್ಟರೆಂದರೆ ಪರೋಕ್ಷವಾಗಿ ಅದು ಕ್ಷಮೆಯಾಚನೆಯಷ್ಟೇ ಮಹತ್ವದ್ದು. ಆದರೆ ಅವರು ಬಳಸಿದ “ಕೆಲ ನಿರುದ್ಯೋಗಿಗಳು ಜಿರಳೆಗಳಂತೆ ಕಾಟ ಕೊಡುತ್ತಿದ್ದಾರೆ” ಎಂಬ ಮಾತಿನಲ್ಲಿ ನಿರುದ್ಯೋಗಿಗಳನ್ನು ಜಿರಳೆಗಳೆಂದು ಜರಿದಿದ್ದಾರೆ ಎಂಬ ಆಪಾದನೆಯನ್ನು ಎತ್ತಿಕೊಂಡು ರಾಷ್ಟ್ರವ್ಯಾಪಿ ಚಳವಳಿ ಹೂಡಿದೆ ಕಾಕ್ರೋಚ್ ಪಾಳೆಯ. ಅದರ ಎದೆಯಲ್ಲಿರುವುದು ಯುವಜನರ ಹತಾಶೆ, ವ್ಯವಸ್ಥೆಯ ಮೇಲಿನ ಜುಗುಪ್ಸೆ, ಸಮಸಮಾಜದ ತುಡಿತ ಅಷ್ಟೇ ಅಲ್ಲ — ಸಮಾಜಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂಬ ಹದಿಹರೆಯದ ತ್ಯಾಗ ಮತ್ತು ಆದರ್ಶ ಮನಸ್ಥಿತಿ. ಭಾರತದಂತಹ ದೇಶಗಳಲ್ಲಿ ಆಡಳಿತಶಾಹಿ ಹಾಗೂ ಪಟ್ಟಭದ್ರರಿಂದ ಜನ ನಿತ್ಯ ನೋವಿನಲ್ಲಿ ಬದುಕುತ್ತಿದ್ದಾರೆ. ಅವರಿಗೆ ಬದಲಾವಣೆ ಬೇಕು. ಅವರನ್ನು ನರಕಕೂಪದಿಂದ ಕಾಪಾಡುವ ನಾಯಕರು ಬೇಕು. ಅದಕ್ಕಾಗಿ ಅವರು ಮೋದಿ ಬಂದರೂ ಜೈ ಅನ್ನುತ್ತಾರೆ, ಕೇಜ್ರಿವಾಲ್ ಬಂದರೂ ಸೈ ಎನ್ನುತ್ತಾರೆ. ಬುದ್ಧದೇವರನ್ನು ಬೀಳಿಸಿ ಬಂಗಾಳದಲ್ಲಿ ದೀದಿಯನ್ನು ಗೆಲ್ಲಿಸುತ್ತಾರೆ. ತಮಿಳುನಾಡಿನಲ್ಲಿ ನಟರನ್ನು, ಚಳವಳಿಗಾರರನ್ನು, ಕಡೆಗೆ ವಿಜಯ್ ಅವರನ್ನು ಹೆಗಲ ಮೇಲೆ ನಿಲ್ಲಿಸಿಕೊಳ್ಳುತ್ತಾರೆ. ಅರವತ್ತು …
KANNADA NEWS
- udupi

ಶಾಂತಿ ಕದಡುವವರಿಗೆ ಕಾಂಗ್ರೆಸ್ ಕುಮ್ಮಕ್ಕು- ಶ್ರೀನಿವಾಸ ಪೂಜಾರಿ ಆಕ್ರೋಶ!
ಉಡುಪಿ: ರಾಜ್ಯದಲ್ಲಿ ತೈಲ ಬೆಲೆ ದರ ಏರಿಕೆ, ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ ಹಾಗೂ ಅಕ್ರಮ ವಲಸಿಗರ ಮತದಾರರ ತೀವ್ರಪಟ್ಟಿ ಪರಿಶೀಲನೆ (SIR) ಬಗ್ಗೆ ಕಾಂಗ್ರೆಸ್…
Read More » -

-

-










































