Editorial
- Editorial

ಸಂಪಾದಕೀಯ..
ನಮ್ಮ ಎಂಎಲ್ಎಗಳು ಅಸಲಿಗೆ ಏನೆಲ್ಲಾ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ನಮ್ಮಂಥ ರಾಜಧಾನಿ ಕೇಂದ್ರಿತ ಪತ್ರಕರ್ತರಿಗೆ ಗೊತ್ತಿರುವುದಿಲ್ಲ. ಏಕೆಂದರೆ ಆ ಎಂಎಲ್ಎಗೆ ಎಷ್ಟು ಗ್ರಾಂಟ್ ಬಂದಿದೆ, ಅದರಲ್ಲಿ ಆತನ ಪರ್ಸೆಂಟೇಜ್ ಎಷ್ಟು ಎಂದಷ್ಟೇ ಅಂದಾಜಿಸಿ ಸುಮ್ಮನಾಗುತ್ತೇವೆ. ಉಳಿದಂತೆ ಅವನ ಕ್ಷೇತ್ರದಲ್ಲಿ ಬೇರೆ ಬೇರೆ ಇಲಾಖೆಯ ಎಷ್ಟು ಪ್ರಾಜೆಕ್ಟ್ಗಳು ಬಂದಿವೆ, ಅದರಲ್ಲಿ ಕಮಾಯಿಸಿದ ಪರ್ಸೆಂಟೇಜ್ ಎಷ್ಟು? ಕ್ಷೇತ್ರದಲ್ಲಿ ಆತ ಮಾಡಿಸಿದ ವರ್ಗಾವಣೆ ದುಡಿಮೆ ಎಷ್ಟು? ಹಳೆಯ ಹಗರಣ ಕೆದಕಿ ಕಟಾಯಿಸಿದ್ದೆಷ್ಟು? ಬೇರೆ ಇಲಾಖೆಗಳ ಫೈಲ್ ಹಿಡಿದು ಮಾಡಿದ ಬ್ರೋಕರೇಜ್ ಎಷ್ಟು? ಮಾಡುತ್ತಿರುವ ಕಾರ್ಯಕ್ರಮಗಳೆಷ್ಟು? ಆತನ ಬಳಿ ಎಷ್ಟು ಜನ ಕರ ಸಂಗ್ರಾಹಕರಿದ್ದಾರೆ? ಮಂತ್ಲಿ ದುಡಿಮೆ ಎಷ್ಟಿರಬಹುದು, ಖರ್ಚು ಎಷ್ಟು? ಆತ ಆಡಳಿತ ಯಂತ್ರ ಬಳಸಿ ಎದುರಾಳಿಗಳನ್ನು ಹೇಗೆ ಮಟ್ಟಹಾಕುತ್ತಾನೆ? ಮುಂದೆಯೂ ಮತ್ತೆ ಗೆಲ್ಲಲು ಏನೇನು ಮಾಡುತ್ತಿದ್ದಾನೆ ಎಂಬುದೆಲ್ಲದರ ಅಂದಾಜು ನಮಗೆ ಇರುವುದಿಲ್ಲ.. ಈಗ ಇಬ್ಬರು ಎಂಎಲ್ಎಗಳ ಇಂದಿನ ಹೇಳಿಕೆ ಬಗ್ಗೆ ಚರ್ಚೆ ಮಾಡೋಣ. ಮಂಡ್ಯ ಕಾಂಗ್ರೆಸ್ ಎಂಎಲ್ಎ ಶ್ರೀಯುತ ಗಣಿಗ ರವಿ ಕುಮಾರ್ ಅವರ ಬಾಯಲ್ಲಿ ಬೆಂಕಿ ಉಗುಳಿ ಸದ್ದು ಮಾಡಿದ್ದಾರೆ. “ಮಂಡ್ಯ ವಿವಿ ಮುಚ್ಚಲು ಮುಂದಾದರೆ ಬೆಂಕಿ ಹಚ್ಚಿಸುತ್ತೇನೆ. ರಸ್ತೆಯಲ್ಲಿ ಓಡಾಡೋಕೆ ಬಿಡಲ್ಲ” ಎಂದಿದ್ದಾರೆ. “ಮಂಡ್ಯ ಯೂನಿವರ್ಸಿಟಿ ಕ್ಯಾನ್ಸಲ್ ಆದರೆ ಮೈಸೂರಿನ ಗುಲಾಮರಾಗ್ತೇವೆ” ಎಂದು ಅಬ್ಬರಿಸಿದ್ದಾರೆ. ಕ್ರಿಮಿನಲ್ ಕೇಸ್ಗೆ ಅರ್ಹವಾದ ಮಾತುಗಳು, ಎಂಎಲ್ಎ ಬಾಯಲ್ಲಿ ಸಹಜ ನುಡಿಗಳಾಗಿ ಹೊಮ್ಮಿರುವುದು ನಮ್ಮ ರಾಜಕಾರಣಿಗಳ ಸಂದಾಯದ ಮನಸ್ಥಿತಿಗೆ ಕನ್ನಡಿ ಹಿಡಿದಿವೆ. ಜೊತೆಗೆ ಮಂಡ್ಯದಲ್ಲಿ ವಿವಿ ಹೋದರೆ ಮೈಸೂರಿನ ಗುಲಾಮರಾಗ್ತೇವೆ ಎನ್ನುವ ಮಾತು, ಇವರ ಶ್ರೇಷ್ಠ ದರ್ಜೆಯ ಚಿಂತನೆಯನ್ನು ಜಾಹೀರು ಮಾಡಿದೆ. ಇಂಥ ಮಹೋನ್ನತ ಚಿಂತನೆಯುಳ್ಳ ಜನ ಪ್ರತಿನಿಧಿಯನ್ನು ಪಡೆದ ಮಂಡ್ಯದ ಜನರು ಧನ್ಯರು… ಇನ್ನು ಕೆ.ಆರ್. ಪೇಟೆ ಎಂಎಲ್ಎ ಎಚ್ಟಿ ಮಂಜು ಎನ್ನುವ ಮಹನೀಯರು, ಭ್ರೂಣ ಹತ್ಯೆಗೆ ಸಹಕರಿಸಿದ ವೈದ್ಯರನ್ನು ಜೈಲಿಗಟ್ಟಿದ್ದು ಸರಿಯಲ್ಲ ಎಂದು ವಾದಿಸಿದ್ದಾರೆ. ಸಣ್ಣ ನಿರ್ಲಕ್ಷ್ಯಕ್ಕೆ ವೈದ್ಯರನ್ನು ಅರೆಸ್ಟ್ ಮಾಡಬಾರದಿತ್ತು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಲೋಕಾಯುಕ್ತ ವರದಿ ಬಳಿಕ ವೈದ್ಯಕೀಯ ವೃತ್ತಿಗೆ ದ್ರೋಹ ಬಗೆದ ವೈದ್ಯರನ್ನು ದಸ್ತಗಿರಿ ಮಾಡಿದ್ದು ತಪ್ಪು ಎನ್ನುವ ಮೂಲಕ ಗೌರವಾನ್ವಿತ …
KANNADA NEWS
- Freedom TV

ಸದನ ಶಿಕಾರಿ, ಕೆಂಡದಲ್ಲಿ ಅರಳಿದ ಕಮಲ ಯಡಿಯೂರಪ್ಪ
ಚಿತ್ರದುರ್ಗ: ಮದಕರಿ ನಾಡು, ವೀರವನಿತೆ ಓಬವ್ವನ ಬೀಡು ಚಿತ್ರದುರ್ಗ ಇಂದು “ರಾಜಾಹುಲಿ” ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಸುನಾಮಿಗೆ ಸಾಕ್ಷಿಯಾಯಿತು. ಮಾಜಿ ಸಿಎಂ ಯಡಿಯೂರಪ್ಪ ಅವರ 50…
Read More » -

-

-






































