ಜಮೀರ್ ಅಹಮದ್ ಡಿಸಿಎಂ ಆಗಲು ಅಭಿಮಾನಿಗಳಿಂದ ವಿಶೇಷ ಪ್ರಾರ್ಥನೆ!
zameer followers perform prayer in darga in Mysore for DCM post

ಮೈಸೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಆಗಿದ್ದು, ಮಂತ್ರಿಗಿರಿ ಹಾಗು ಡಿಸಿಎಂ ಹುದ್ದೆಗಳಿಗೆ ತೀವ್ರ ಕಸರತ್ತು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಈಗ ಮತ್ತಷ್ಟು ಜೋರಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಮೀರ್ ಪರವಾಗಿ ಭರ್ಜರಿ ಪ್ರಾರ್ಥನೆ ಮತ್ತು ರಾಜಕೀಯ ಲಾಬಿ ಶುರುವಾಗಿದೆ.

ದರ್ಗಾದಲ್ಲಿ ಮೊಳಗಿದ ‘ಡಿಸಿಎಂ’ ಬೇಡಿಕೆ
ನಗರದ ದಿವಾನ್ಸ್ ರಸ್ತೆಯಲ್ಲಿರುವ ಪ್ರಸಿದ್ಧ ಹಜರತ್ ಇಮಾಮ್ ಷಾ ವಲೀ ದರ್ಗಾದಲ್ಲಿ ಅಲ್ಪಸಂಖ್ಯಾತ ಮುಖಂಡರು ಜಮೀರ್ ಅಹಮದ್ ಅವರಿಗೆ ಡಿಸಿಎಂ ಪಟ್ಟ ಸಿಗಲೆಂದು ಆಶಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಜೀಜುಲ್ಲ (ಅಜ್ಜು) ನೇತೃತ್ವದಲ್ಲಿ ನಡೆದ ಈ ವಿಶೇಷ ಪೂಜೆ ಮತ್ತು ದುವಾದಲ್ಲಿ ನೂರಾರು ಅಭಿಮಾನಿಗಳು, ಸ್ಥಳೀಯ ಮುಖಂಡರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.
“ಜಮೀರ್ ಸಮುದಾಯದ ಧ್ವನಿ, ಸೂಕ್ತ ಸ್ಥಾನ ಸಿಗಬೇಕು”
ವಿಶೇಷ ಪ್ರಾರ್ಥನೆಯ ಬಳಿಕ ಮಾತನಾಡಿದ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಜೀಜುಲ್ಲ ಅಜ್ಜು ಬ್ರದರ್ಸ್, ಜಮೀರ್ ಅಹಮದ್ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. : “ಜಮೀರ್ ಅಹಮದ್ ಖಾನ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಅವರು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜನಪ್ರಿಯ ನಾಯಕರು. ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ದೊಡ್ಡ ಮಟ್ಟದ ರಾಜಕೀಯ ಪ್ರತಿನಿಧಿತ್ವ ಸಿಗಲಿದೆ. ಈ ನಿಟ್ಟಿನಲ್ಲಿ ಅವರಿಗೆ ದೇವರ ಆಶೀರ್ವಾದ ಸಿಗಲಿ ಎಂದು ನಾವು ವಿಶೇಷ ದುವಾ ಮಾಡಿದ್ದೇವೆ.”
ಹೊಸ ಸರ್ಕಾರದಲ್ಲಿ ಜಮೀರ್‌ಗೆ ಸಿಗುತ್ತಾ ಉನ್ನತ ಪಟ್ಟ?
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಸಂಪುಟದಲ್ಲಿ ಅಲ್ಪಸಂಖ್ಯಾತ ಕೋಟಾದಡಿ ಜಮೀರ್ ಅಹಮದ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಒತ್ತಡ ಹೈಕಮಾಂಡ್ ಮೇಲೆ ಹೆಚ್ಚಾಗುತ್ತಿದೆ. ಮೈಸೂರಿನಲ್ಲಿ ನಡೆದಿರುವ ಈ ವಿಶೇಷ ಪ್ರಾರ್ಥನೆ ಈಗ ರಾಜಧಾನಿ ಬೆಂಗಳೂರಿನವರೆಗೂ ಸದ್ದು ಮಾಡುತ್ತಿದ್ದು, ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
#ZameerAhmedKhan #ZameerForDCM #KarnatakaPolitics #MysuruNews #HazratImamShahWaliDargah #WaqfBoard #FreedomTV #CongressGovernment #DKShivakumar #BreakingNews #MinorityLeaders #KarnatakaCabinet #ZameerKhanFanClub




