Mandyaರಾಜಕೀಯ

ಸಿದ್ದರಾಮಯ್ಯ ರಾಜೀನಾಮೆಗೆ ನಾನು ಶಾಕ್ ಆಗಿಲ್ಲ- ಸುಮಲತಾ ಅಂಬರೀಷ್

Siddaramaiah CM resign is not a shocking news says EX MP Sumalatha

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತಂತೆ ಮಂಡ್ಯದ ಮಾಜಿ ಸಂಸದೆ, ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. “ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದು ತಮಗಾಗಲಿ ಅಥವಾ ಜನತೆಗಾಗಲಿ ಯಾವುದೇ ಶಾಕ್ ತಂದಿಲ್ಲ” ಎಂದು ಅವರು ನೇರವಾಗಿಯೇ ಹೇಳಿದ್ದಾರೆ. ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಇಂದಿನ ರಾಜಕೀಯ ವಿದ್ಯಮಾನಗಳು ಹಾಗೂ ತಮ್ಮ ಪುತ್ರ ಅಭಿಷೇಕ್ ಅಂಬರೀಷ್ ಅವರ ರಾಜಕೀಯ ಪ್ರವೇಶದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

2 ವರ್ಷದಿಂದ ಸಿಎಂ ಬದಲಾವಣೆಯ ಚರ್ಚೆ!


ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತು ಮಾತನಾಡಿದ ಸುಮಲತಾ ಅಂಬರೀಷ್, ಸಿಎಂ ರಾಜೀನಾಮೆ ಪ್ರಕ್ರಿಯೆ ಆಗಬೇಕಾಗಿತ್ತು. ಇದು ನಿರೀಕ್ಷಿತ ಬೆಳವಣಿಗೆ ಎಂದು ಹೇಳುವ ಮೂಲಕ ರಾಜ್ಯದ ಜನತೆಗೆ ಅಚ್ಚರಿ ನೀಡಿದ್ದಾರೆ. “ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ನಾವೆಲ್ಲರೂ ಮೊದಲೇ ನಿರೀಕ್ಷೆ ಮಾಡಿದ್ದೆವು. ಕಳೆದ ಎರಡು ವರ್ಷಗಳಿಂದಲೂ ರಾಜ್ಯದಲ್ಲಿ ಇದೇ ಚರ್ಚೆ ನಡೆಯುತ್ತಿತ್ತು. ಹಾಗಾಗಿ ಇದೇನು ಸಡನ್ ಆಗಿ ಆದ ಜಾಗೃತ ಬೆಳವಣಿಗೆ ಅಥವಾ ಶಾಕಿಂಗ್ ನ್ಯೂಸ್ ಖಂಡಿತಾ ಅಲ್ಲ. ಅಧಿಕಾರದಲ್ಲಿ ಯಾರೇ ಸಿಎಂ ಆದರೂ ಜನರಿಗೆ ಒಳ್ಳೆಯ ಆಡಳಿತ ಕೊಡಬೇಕು, ಅಷ್ಟೇ ಮುಖ್ಯ. ಸಾರ್ವಜನಿಕರು ಕೂಡ ಹೊಸ ಸರ್ಕಾರದಿಂದ ಅದನ್ನೇ ನಿರೀಕ್ಷೆ ಮಾಡುತ್ತಾರೆ.”

ಅಭಿಷೇಕ್ ರಾಜಕೀಯಕ್ಕೆ-ಸುಮಲತಾ ಹೇಳಿದ್ದೇನು?
ಇದೇ ವೇಳೆ ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಷ್ ಸಕ್ರಿಯ ರಾಜಕೀಯಕ್ಕೆ ಬರುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುಮಲತಾ ಸ್ಪಷ್ಟನೆ ನೀಡಿದರು. ಪುತ್ರ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ತಾಯಿಯಾಗಿ ನಾನು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ರಾಜಕೀಯ ರಂಗಕ್ಕೆ ಬರಬೇಕೋ ಅಥವಾ ಸಿನಿಮಾ ರಂಗದಲ್ಲೇ ಮುಂದುವರಿಯಬೇಕೋ ಎಂಬುದು ಸಂಪೂರ್ಣವಾಗಿ ಅಭಿಷೇಕ್‌ಗೆ ಬಿಟ್ಟ ವಿಚಾರ. ಆತನೇ ತನ್ನ ಭವಿಷ್ಯದ ಬಗ್ಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲಿದ್ದಾನೆ” ಎಂದು ತಿಳಿಸಿದರು.
ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ ಅವರು, “ನಾನು ಸದ್ಯ ಭಾರತೀಯ ಜನತಾ ಪಾರ್ಟಿಯಲ್ಲಿದ್ದೇನೆ.ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ನಾಯಕರು ನನಗೆ ಏನು ಸೂಚನೆ ನೀಡುತ್ತಾರೋ, ಅದರಂತೆ ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತೇನೆ” ಎಂದು ಸ್ಪಷ್ಟಪಡಿಸಿದರು.

#SumalathaAmbareesh #SiddaramaiahResigns #KarnatakaPolitics #AbishekAmbareesh #Maddur #MandyaPolitics #FreedomTV #BreakingNews #BJPNews #KarnatakaNewCM #AmbareeshFans #PoliticalUpdates #GoodGovernance

Comments (0)

Your email address will not be published. Required fields are marked *

Back to top button