chitradurgaರಾಜಕೀಯ

ಜನಾಕರ್ಷಣೆಗೆ ಬಿಜೆಪಿ ಮುಸ್ಲಿಂ,ಪಾಕಿಸ್ತಾನ ಎನ್ನುತ್ತೆ- ಜಾರಕಿಹೊಳಿ ವಾಗ್ದಾಳಿ!

PWD minister Sathish jarakiholi slams BJP agenda

ಚಿತ್ರದುರ್ಗ: “ರಾಜ್ಯದಲ್ಲಿ ಮುಸ್ಲಿಮರು, ರೈತರು, ಕನ್ನಡಪರ ಹೋರಾಟಗಾರರು ಹಾಗೂ ರಾಜಕೀಯ ಮುಖಂಡರ ಮೇಲಿರುವ ಸುಮಾರು 50-60 ಪ್ರಕರಣಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಡೆದಿದೆ. ಅಲ್ಪಸಂಖ್ಯಾತರ ಕೇಸು ವಾಪಸ್ ವಿಚಾರವನ್ನು ಬಿಜೆಪಿ ನಾಯಕರು ಕೇವಲ ರಾಜಕೀಯ ಲಾಭಕ್ಕಾಗಿ ಬಳಸುತ್ತಾರೆ. ಮುಸ್ಲಿಂ ಅಥವಾ ಪಾಕಿಸ್ತಾನದ ಹೆಸರು ಹೇಳಿದೊಡನೆ ಜನ ಆಕರ್ಷಿತರಾಗುತ್ತಾರೆ ಎಂಬುದು ಕಮಲಿಗಳಿಗೆ ಚೆನ್ನಾಗಿ ತಿಳಿದಿದೆ. ಈ ನಿಟ್ಟಿನಲ್ಲಿ ತುಚ್ಛ ರಾಜಕಾರಣ ಮಾಡುತ್ತಿದೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಹಲವು ಪ್ರಮುಖ ವಿದ್ಯಮಾನಗಳ ಕುರಿತು ಮುಕ್ತವಾಗಿ ಪ್ರತಿಕ್ರಿಯಿಸಿದರು.

ನೀಟ್ (NEET) ಅಕ್ರಮ: ಬೇಜವಾಬ್ದಾರಿ ಮೋದಿ ಸರ್ಕಾರ


ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ನೀಟ್ (NEET) ಪರೀಕ್ಷೆ ಅಕ್ರಮದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಸಚಿವರು, “ನೀಟ್ ಅಕ್ರಮದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಆದರೆ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಅವರಲ್ಲಿ ಆಸಕ್ತಿಯೇ ಸತ್ತು ಹೋಗಿದೆ.ಖುದ್ದು ಕೇಂದ್ರ ಶಿಕ್ಷಣ ಸಚಿವರೇ ಈ ಬಗ್ಗೆ ನಿರಾಸಕ್ತಿ ತೋರುತ್ತಿದ್ದು, ಮಾಧ್ಯಮಗಳಿಗೆ ಉತ್ತರಿಸಲು ಹಿಂಜರಿಯುತ್ತಿದ್ದಾರೆ. ಇದು ಕೇಂದ್ರದ ಬೇಜವಬ್ದಾರಿತನದ ಪರಮಾವಧಿ”ಎಂದರು.

ಕೇಸರಿ ಅಭಿಯಾನ ಹೊಸತಲ್ಲ!
ಶಾಲೆಗಳಲ್ಲಿ ಬಿಜೆಪಿ ನಡೆಸುತ್ತಿರುವ ಕೇಸರಿ ಅಭಿಯಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ಬಿಜೆಪಿಯವರು ಶಾಲೆಗಳಲ್ಲಿ ಕೇಸರಿ ಅಭಿಯಾನವನ್ನು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ನಾವು ಸಣ್ಣವರಿದ್ದಾಗಿನಿಂದಲೂ ಇದು ನಡೆಯುತ್ತಿದೆ, ಇದೇನೂ ಹೊಸದಲ್ಲ. ದೇಶದಲ್ಲಿ ಕೆಲವರು ಎಡಪಂಥವನ್ನು ಒಪ್ಪುತ್ತಾರೆ,ಇನ್ನು ಕೆಲವರು ಬಲಪಂಥವನ್ನು ಒಪ್ಪುತ್ತಾರೆ.ಅದು ಅವರವರ ವೈಯಕ್ತಿಕ ಇಷ್ಟ. ಆದರೆ ನಮ್ಮ ಐಡಿಯಾಲಜಿ (ಸಿದ್ಧಾಂತ) ಏನಿದೆಯೋ ಅದನ್ನು ನಾವು ಜನರಿಗೆ ಹೇಳುತ್ತಲೇ ಇರುತ್ತೇವೆ” ಎಂದು ಸ್ಪಷ್ಟಪಡಿಸಿದರು.

ಡಿಸಿಎಂ ಹುದ್ದೆಗೆ ಪೈಪೋಟಿ!
ರಾಜ್ಯ ರಾಜಕಾರಣದಲ್ಲಿ ಸತೀಶ್ ಜಾರಕಿಹೊಳಿ ಅವರ ಉಪಮುಖ್ಯಮಂತ್ರಿ (DCM) ರೇಸ್ ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತಾದ ಚರ್ಚೆಗಳಿಗೆ ಸಚಿವರು ಮಾರ್ಮಿಕವಾಗಿ ಉತ್ತರಿಸಿದರು.”ಡಿಸಿಎಂ ಸೃಷ್ಟಿ ವಿಚಾರದ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗಬೇಕಿದೆ. ಸದ್ಯಕ್ಕೆ ದೆಹಲಿ ಮಟ್ಟದಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತಿವೆ ಎಂಬುದು ನಮಗೂ ಗೊತ್ತಿಲ್ಲ.ಹೈಕಮಾಂಡ್ ನಡೆ ಏನೆಂಬುದನ್ನು ಕಾದು ನೋಡೋಣ.ಇನ್ನು ಸಚಿವ ಸಂಪುಟ ವಿಸ್ತರಣೆ ಅಥವಾ ಎಷ್ಟು ಮಂದಿ ಸಚಿವರನ್ನು ಬದಲಾವಣೆ ಮಾಡುತ್ತಾರೆ ಎಂಬುದು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದು.ಸಮಯ ಬಂದಾಗ ಎಲ್ಲವೂ ನಿರ್ಧಾರವಾಗಲಿದೆ.” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಇವರ ಈ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳಾಗುವ ಮುನ್ಸೂಚನೆಯನ್ನು ನೀಡಿದೆ.

#SatishJarkiholi #Chitradurga #NEETScam #BJP #CongressKarnataka #CaseWithdrawal #DCMChitradurga #CabinetExpansion #KarnataPolitics #FreedomTV #FreedomTVNews #KannadaNews

Comments (0)

Your email address will not be published. Required fields are marked *

Back to top button