Ballaryರಾಜಕೀಯ

ಡಿಕೆಶಿ ಮುಖ್ಯಮಂತ್ರಿ ಪಟ್ಟದ ಹಿಂದೆ ‘ರಾಜಶ್ಯಾಮಲಾ’ ಪವಾಡ!

DKS become CM because of RajaShyamala Yaga a belief

ಬಳ್ಳಾರಿ/ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಅಂತಿಮವಾಗಿದೆ. ಆದರೆ ಈ ಬೆಳವಣಿಗೆಯ ಹಿಂದೆ ಧಾರ್ಮಿಕ ಪವಾಡದ ರಹಸ್ಯ ಬೆಳಕಿಗೆ ಬಂದಿದೆ. ಹೌದು, ಡಿಕೆಶಿ ಅವರು ಸಿಎಂ ಹುದ್ದೆಯನ್ನು ಅಲಂಕರಿಸುತ್ತಿರುವ ಹಿನ್ನೆಲೆಯಲ್ಲಿ, ಗಣಿನಾಡು ಬಳ್ಳಾರಿಯಲ್ಲಿ ಅವರಿಗಾಗಿ ರಹಸ್ಯವಾಗಿ ನಡೆದಿದ್ದ ಆ ಒಂದು ʼವಿಶೇಷ ಯಾಗʼ ಈಗ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ಫಲಿಸಿತು ಡಿಕೆಶಿ ಆಪ್ತನ ‘ರಾಜಶ್ಯಾಮಲಾ ಯಾಗ’!


ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಹಾಗೂ ಬಳ್ಳಾರಿಯ ಸ್ಥಳೀಯ ಪ್ರಮುಖ ಮುಖಂಡರಾಗಿರುವ ಜೆ.ಎಸ್. ಆಂಜನೇಯಲು ನೇತೃತ್ವದಲ್ಲಿ ಈ ಮಹಾ ಪವಾಡ ಸದೃಶ ಯಾಗ ನಡೆದಿತ್ತು. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ, ಬಳ್ಳಾರಿ ತಾಲೂಕಿನ ಪ್ರಸಿದ್ಧ ಅಮೃತೇಶ್ವರ ದೇವಾಲಯದಲ್ಲಿ ಜೆ.ಎಸ್. ಆಂಜನೇಯಲು ಅವರು ತಮ್ಮ ಧರ್ಮಪತ್ನಿಯೊಂದಿಗೆ ಶಾಸ್ತ್ರೋಕ್ತವಾಗಿ ಸಂಕಲ್ಪ ಮಾಡಿ ಈ ‘ರಾಜಶ್ಯಾಮಲಾ ಯಾಗ’ವನ್ನು ನೆರವೇರಿಸಿದ್ದರು. ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅತ್ಯುನ್ನತ ಮುಖ್ಯಮಂತ್ರಿ ಸ್ಥಾನಕ್ಕೇರಬೇಕು ಎನ್ನುವ ಏಕೈಕ ಮಹತ್ವಾಕಾಂಕ್ಷೆಯೊಂದಿಗೆ ಈ ಯಾಗ ಮಾಡಿಸಲಾಗಿತ್ತು. ಈಗ ಡಿಕೆಶಿ ಸಿಎಂ ಆಗುತ್ತಿರುವುದು ಈ ಯಾಗದ ಶಕ್ತಿಯೇ ಕಾರಣ ಎಂದು ಆಪ್ತ ವಲಯದಲ್ಲಿ ಚರ್ಚೆಯಾಗುತ್ತಿದೆ.

ಶತ್ರು ಸಂಹಾರಕ್ಕೆ 50ಕ್ಕೂ ಹೆಚ್ಚು ಋತ್ವಿಜರಿಂದ ಹೋಮಗಳ ಸುರಿಮಳೆ!
ಕೇವಲ ರಾಜಶ್ಯಾಮಲಾ ಯಾಗ ಮಾತ್ರವಲ್ಲದೆ, ಡಿಕೆಶಿ ಅವರಿಗೆ ಎದುರಾಗುವ ವಿಘ್ನಗಳ ನಿವಾರಣೆಗಾಗಿ ಚಂಡಿಕಾ ಯಾಗ, ದುಷ್ಟ ಶಕ್ತಿಗಳ ನಾಶಕ್ಕೆ ರುದ್ರಯಾಗ, ಶತ್ರುಗಳ ಸಂಚು ಮತ್ತು ರಾಜಕೀಯ ಕುತಂತ್ರಗಳನ್ನು ವಿಫಲಗೊಳಿಸಲು ಸುದರ್ಶನ ಯಾಗ ಹಾಗೂ ಮಹಾ ಗಣಪತಿ ಹೋಮಗಳನ್ನು ಸರಣಿಯಾಗಿ ಮಾಡಿಸಲಾಗಿತ್ತು. ಸತತ ಮೂರು ದಿನಗಳ ಕಾಲ ನಡೆದ ಈ ಮಹಾ ಯಾಗವನ್ನು ಅತ್ಯಂತ ಕಟ್ಟುನಿಟ್ಟಾಗಿ ಮತ್ತು ಕಠಿಣ ಶಾಸ್ತ್ರೋಕ್ತ ನಿಯಮಗಳೊಂದಿಗೆ ನೆರವೇರಿಸಲು ಹೈದರಾಬಾದ್, ಕೇರಳ ಹಾಗೂ ತಮಿಳುನಾಡಿನ ಸುಮಾರು 50ಕ್ಕೂ ಹೆಚ್ಚು ಪ್ರಖ್ಯಾತ ಋತ್ವಿಜರು ಮತ್ತು ವೇದ ಪಂಡಿತರು ಬಳ್ಳಾರಿಗೆ ಆಗಮಿಸಿದ್ದರು.

ರಾಜಶ್ಯಾಮಲಾ ಯಾಗದ ಶಕ್ತಿಯೇನು!
ಇತಿಹಾಸದ ಕೆದಕಿ ನೋಡಿದರೆ ರಾಜಕೀಯದಲ್ಲಿ ಅತ್ಯುನ್ನತ ಅಧಿಕಾರ ಪ್ರಾಪ್ತಿ, ಕಳೆದುಹೋದ ಸಾಮ್ರಾಜ್ಯದ ಮರುಗಳಿಕೆ, ಶತ್ರು ಸಂಹಾರ, ಉನ್ನತ ಹುದ್ದೆ ಸಿದ್ಧಿ ಹಾಗೂ ವಿರೋಧಿಗಳ ಮಂತ್ರ-ತಂತ್ರಗಳನ್ನು ಧೂಳೀಪಟ ಮಾಡಲು ಹಿಂದೆ ರಾಜ-ಮಹಾರಾಜರು ಈ ರಾಜಶ್ಯಾಮಲಾ ಯಾಗವನ್ನು ಆಶ್ರಯಿಸುತ್ತಿದ್ದರು. ಆಧುನಿಕ ರಾಜಕಾರಣದಲ್ಲಿ ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ (KCR) ಹಾಗೂ ಆಂಧ್ರಪ್ರದೇಶದ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರು ಈ ಯಾಗವನ್ನು ಮಾಡಿ ಉನ್ನತ ಅಧಿಕಾರ ಗಳಿಸಿದ್ದರು ಎಂಬ ಇತಿಹಾಸವಿದೆ. ಈಗ ಅದೇ ದಾರಿಯಲ್ಲಿ ಸಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೂ ರಾಜಶ್ಯಾಮಲಾ ದೇವಿ ಒಲಿದಿದ್ದು, ಕನಸಿನ ಮುಖ್ಯಮಂತ್ರಿ ಗದ್ದುಗೆ ಹಸ್ತಾಂತರವಾಗುತ್ತಿದೆ.

#FreedomTV #DKShivakumar #RajashyamalaYaga #BallariPolitics #KarnatakaNewCM #JSAnjaneyulu #AmrutheshwaraTemple #MahaYaga #PowerPolitics #KCR #ChandrababuNaidu #KarnatakaPolitics #BreakingNews #TrendingKannada #DKSChiefMinister

Comments (0)

Your email address will not be published. Required fields are marked *

Back to top button