ಬಕ್ರೀದ್ ದಿನವೇ ಹಿಂದುಳಿದ ನಾಯಕ ಸಿದ್ದರಾಮಯ್ಯ ಬಲಿ- ಬಸನಗೌಡ ಪಾಟೀಲ್ ಯತ್ನಾಳ್!
Basanagouda patil yatnal siddu lost cm post of for favouring muslim community

ವಿಜಯಪುರ/ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿದು ಹೊಸ ಸರ್ಕಾರ ರಚನೆಯಾಗುತ್ತಿದ್ದರೂ, ರಾಜಕೀಯ ವಲಯದಲ್ಲಿ ಅದರ ಬಿಸಿ ಮಾತ್ರ ಕಮ್ಮಿಯಾಗಿಲ್ಲ. ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿದ ವಿಚಾರವಾಗಿ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಫೈರ್‌ಬ್ರಾಂಡ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ವಿರುದ್ಧ ಅತ್ಯಂತ ಆಘಾತಕಾರಿ ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

“ಬಕ್ರೀದ್ ದಿನವೇ ಟಗರು ಬಲಿ!”
ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಚಾಟಿ ಬೀಸಿದ ಯತ್ನಾಳ್, “ಕಾಂಗ್ರೆಸ್ ಪಕ್ಷದವರು ಬಕ್ರೀದ್ ಹಬ್ಬದ ದಿನವೇ ಒಬ್ಬ ಹಿಂದುಳಿದ ವರ್ಗದ ಪ್ರಭಾವಿ ನಾಯಕನನ್ನು ರಾಜಕೀಯವಾಗಿ ಬಲಿ ಕೊಟ್ಟಿದ್ದಾರೆ” ಎಂದು ಮಾರ್ಮಿಕವಾಗಿ ಲೇವಡಿ ಮಾಡಿದರು. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಅತಿರೇಕದ ಮುಸ್ಲಿಂ ತುಷ್ಟೀಕರಣ ರಾಜಕಾರಣ ಮಾಡಿದರು. ದೇಶದಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರನ್ನು ಬಿಟ್ಟರೆ, ಅತಿ ಹೆಚ್ಚು ಮುಸ್ಲಿಂ ಓಲೈಕೆ ಮಾಡಿದ್ದು ಇದೇ ಸಿದ್ದರಾಮಯ್ಯ ಎಂದು ಯತ್ನಾಳ್ ಕಿಡಿಕಾರಿದರು.
ಮುಸ್ಲಿಂ ಓಲೈಕೆಯಿಂದಲೇ ಸಿದ್ದು CM ಪಟ್ಟ ಹೋಯ್ತು!
“ಸಿದ್ದರಾಮಯ್ಯ ಅವರು ಸದಾ ದ್ವೇಷದ ರಾಜಕಾರಣ ಮಾಡಿದರು. ಟಿಪ್ಪು ಜಯಂತಿ ಮಾಡಿದರು, ಹಿಂದೂಗಳನ್ನು ಜೈಲಿಗಟ್ಟಿದರು. ಆದರೆ ತಮ್ಮನ್ನು ನಂಬಿದ ಹಿಂದುಳಿದವರು ಮತ್ತು ದಲಿತರನ್ನು ಅವರು ಕಣ್ಣೆತ್ತಿಯೂ ನೋಡಲಿಲ್ಲ. ಹೀಗಾಗಿಯೇ ಅವರು ಇಡೀ ರಾಜ್ಯದ ಜನರ ಅನುಕಂಪವನ್ನು ಕಳೆದುಕೊಂಡರು. ಮುಸ್ಲಿಂ ಓಲೈಕೆ ಮಾಡಲು ಹೋಗಿ ಸಿದ್ದರಾಮಯ್ಯ ಕೊನೆಗೆ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು” ಎಂದು ವಿಶ್ಲೇಷಿಸಿದರು.
ಅಂಬೇಡ್ಕರ್ ಹೇಳಿದ್ದು ಸತ್ಯ!
ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರೂ ಮುಸ್ಲಿಂ ಸಮುದಾಯ ಅವರ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಲೇವಡಿ ಮಾಡಿದ ಯತ್ನಾಳ್, “ಇಷ್ಟೆಲ್ಲಾ ಮುಸ್ಲಿಂ ಓಲೈಕೆ ಮಾಡಿದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ, ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ನಾಯಕ ಅಥವಾ ಯುವಕ ಬೀದಿಗೆ ಇಳಿದು ಪ್ರತಿಭಟನೆ ಮಾಡಲಿಲ್ಲ. ಕಾಂಗ್ರೆಸ್ ಮಾಡಿದ್ದು ತಪ್ಪು ಎಂದು ಯಾರೂ ಧ್ವನಿ ಎತ್ತಲಿಲ್ಲ. ಮುಸ್ಲಿಂ ಸಮುದಾಯದ ಬಗ್ಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಂದು ಹೇಳಿದ್ದ ಮಾತುಗಳು ಈಗ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಗಿವೆ” ಎಂದರು. ಅಲ್ಲದೆ, ಮುಸ್ಲಿಮರನ್ನು ನಂಬಿ ದಲಿತ-ಹಿಂದೂಗಳನ್ನು ಕಡೆಗಣಿಸಿದ ಸಿದ್ದರಾಮಯ್ಯ ಮುಂದಿನ ದಿನಗಳಲ್ಲಿ ತಮ್ಮ ತಪ್ಪಿಗೆ ಭಾರಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಯತ್ನಾಳ್ ಭವಿಷ್ಯ ನುಡಿದರು.
#FreedomTV #YatnalSpitsFire #BasanagoudaPatilYatnal #SiddaramaiahResignation #Vijayapura #YatnalSpeech #CongressPolitics #MuslimAppeasement #KarnatakaPolitics #BreakingNews #KannadaNews #AhindaPolitics #BJPVSCongress #SiddaramaiahDownfall




