#Exclusive NewsTop Newsದೇಶ/ವಿದೇಶವಾಣಿಜ್ಯಸುದ್ದಿಹಣಕಾಸು

ಬಜೆಟ್ ಬೆನ್ನಲ್ಲೇ ಬಂತು ಬ್ಯಾಡ್ ನ್ಯೂಸ್; ಸಿಲಿಂಡರ್ ಬೆಲೆ ಏರಿಕೆ!

ಇಂದು ದೇಶದ ಆರ್ಥಿಕತೆಯ ದಿಕ್ಸೂಚಿ ಎನಿಸಿದ ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವಾಗಲೇ, ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಮೇಲೆ ₹49 ಹೆಚ್ಚಳವಾಗಿರುವುದು ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್ ಉದ್ಯಮಿಗಳ ಲಾಭದ ಮೇಲೆ ನೇರ ಹೊಡೆತ ನೀಡಲಿದೆ. ಕಳೆದ ತಿಂಗಳು ₹111 ಏರಿಕೆಯಾಗಿದ್ದ ಬೆಲೆ ಈಗ ಮತ್ತೆ ಏರಿರುವುದು, ಮಾರುಕಟ್ಟೆಯಲ್ಲಿ ಹಣದುಬ್ಬರದ ಆತಂಕವನ್ನು ಹೆಚ್ಚಿಸಿದೆ. ಆದರೆ, ಸರ್ಕಾರವು ದೇಶೀಯ ಸಿಲಿಂಡರ್ ಬೆಲೆಯನ್ನು ಸ್ಥಿರವಾಗಿಟ್ಟು ‘ಮಧ್ಯಮ ವರ್ಗದವರ ಆಕ್ರೋಶಕ್ಕೆ ತಡೆಯೊಡ್ಡಿದೆ.

ಸಿಲಿಂಡರ್ ಬೆಲೆ ಏರಿಕೆ; ನಿಮ್ಮ ಜೇಬಿಗೆ ಎಷ್ಟು ಕತ್ತರಿ?
ನೀವು ಮನೆಯಲ್ಲಿ ಅಡುಗೆ ಮಾಡುವವರಾಗಿದ್ದರೆ ಸದ್ಯಕ್ಕೆ ಚಿಂತಿಸುವ ಅಗತ್ಯವಿಲ್ಲ, ಏಕೆಂದರೆ ದೇಶೀಯ ಗ್ಯಾಸ್ ಬೆಲೆ ಏರಿಲ್ಲ. ಆದರೆ, ನೀವು ವಾರಾಂತ್ಯದಲ್ಲಿ ಹೋಟೆಲ್‌ಗೆ ಹೋಗುವವರಾಗಿದ್ದರೆ ಅಥವಾ ನಿತ್ಯವೂ ಹೊರಗಡೆ ತಿನ್ನುವವರಾಗಿದ್ದರೆ, ನಿಮ್ಮ ‘ಫುಡ್ ಬಿಲ್’ ಸ್ವಲ್ಪ ಜಾಸ್ತಿಯಾಗಬಹುದು. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಇಂಧನವೇ ಪ್ರಮುಖ ವೆಚ್ಚವಾಗಿರುವುದರಿಂದ, ಈ ₹49 ಬೆಲೆ ಏರಿಕೆಯ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳುವ ಸಂಭವವಿದೆ.

19 ಕೆಜಿ ಸಿಲಿಂಡರ್ ಬೆಲೆಯಲ್ಲಿ ₹49 ಹೆಚ್ಚಳವಾಗಿದ್ದು, ದೆಹಲಿಯಲ್ಲಿ ಒಂದು ವಾಣಿಜ್ಯ ಸಿಲಿಂಡರ್ ಬೆಲೆ ಈಗ ₹1,740.50.5 ಕೆಜಿ ತೂಕದ ಎಫ್‌ಟಿಎಲ್ ಸಿಲಿಂಡರ್‌ಗಳ ಬೆಲೆ ₹27 ಏರಿಕೆಯಾಗಿದೆ. 14.2 ಕೆಜಿ ದೇಶೀಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.ಮುಂಬರುವ ದಿನಗಳಲ್ಲಿ ಹೊರಗಿನ ತಿಂಡಿ-ತಿನಿಸುಗಳು ಮತ್ತು ಕ್ಯಾಟರಿಂಗ್ ಸೇವೆಗಳ ಬೆಲೆ ಹೆಚ್ಚಾಗುವ ಸಾಧ್ಯತೆ.

Comments (0)

Your email address will not be published. Required fields are marked *

Back to top button