ರಾಜಕೀಯರಾಜ್ಯಸುದ್ದಿ

ಕಾಮಾಕ್ಯ ದೇವಿಯ ಮೊರೆ ಹೋದ ಡಿಕೆಶಿ-ಪ್ರಿಯಾಂಕಾ! ಅಧಿಕಾರಕ್ಕಾಗಿ ತಾಂತ್ರಿಕ ಪೂಜೆ?

ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಶಕ್ತಿಪೀಠ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿರುವುದು ಈಗ ದೇಶಾದ್ಯಂತ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ಈ ತಾಂತ್ರಿಕ ಕ್ಷೇತ್ರವು 51 ಶಕ್ತಿಪೀಠಗಳಲ್ಲಿ ಅತ್ಯಂತ ಪ್ರಭಾವಶಾಲಿ ಎಂದು ನಂಬಲಾಗಿದ್ದು, ಕೇಳಿದ್ದನ್ನು ನೀಡುವ ದೇವಿ ಎಂದೇ ಪ್ರಸಿದ್ಧಿ ಪಡೆದಿದೆ.

ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಹಲವು ಹೋಮ-ಹವನ ಹಾಗೂ ಜ್ಯೋತಿಷಿಗಳ ಮೊರೆ ಹೋಗಿದ್ದು, ಶಿವರಾತ್ರಿಯ ನಂತರವೂ ಅಧಿಕಾರ ಹಸ್ತಾಂತರದ ಸುಳಿವು ಕಾಣದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಮತ್ತೊಂದೆಡೆ, ರಾಷ್ಟ್ರ ರಾಜಕಾರಣದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಕೂಗು ಪಕ್ಷದ ಒಳಗಿನಿಂದಲೇ ಕೇಳಿಬರುತ್ತಿದ್ದು, ಉನ್ನತ ಅಧಿಕಾರ ಪ್ರಾಪ್ತಿಗಾಗಿ ಈ ಜೋಡಿ ದೇವಿಯ ಮೊರೆ ಹೋಗಿರಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ತಮ್ಮ ಈ ಭೇಟಿಯ ಫೋಟೋಗಳನ್ನು ಹಂಚಿಕೊಂಡು ಸಮೃದ್ಧಿಗಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದರೂ, ರಾಜಕೀಯ ವಲಯದಲ್ಲಿ ಮಾತ್ರ “ಮುಂದಿನ ಸಿಎಂ” ಮತ್ತು “ಮುಂದಿನ ಪ್ರಧಾನಿ” ಹುದ್ದೆಯ ಆಕಾಂಕ್ಷೆಗಳಿಗೆ ತಾಂತ್ರಿಕ ದೇವಿ ಒಲಿಯುವಳೇ ಎಂಬ ಕುತೂಹಲ ಮನೆಮಾಡಿದೆ.

Comments (0)

Your email address will not be published. Required fields are marked *

Back to top button