ರಾಜ್ಯಸುದ್ದಿ

ಕೊರಟಗೆರೆ ತಾಲ್ಲೂಕಿನ ಶ್ರೀ ಗೋರವನಹಳ್ಳಿ ಮಹಾಲಕ್ಷ್ಮಿ ಪೂಜೆಗಾಗಿ ಜನಪ್ರವಾಹ..!

ತುಮಕೂರು ; ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಶ್ರೀ ಗೋರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಏರ್ಪಡಿಸಿದ್ದ ಪೂಜೆಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂತು. ಹೊಸ ವರ್ಷದ ಪ್ರಾರಂಭ ದಿನವಾದ ಇಂದು ಬಯಲು ಸೀಮೆಯ ಧರ್ಮಸ್ಥಳವೆಂದೇ ಖ್ಯಾತಿ ಪಡೆದಿರುವ ಗೊರವನಹಳ್ಳಿಯಲ್ಲಿ ಭಕ್ತಾದಿಗಳ ದಂಡು ರಾಜ್ಯದ ಗಮನ ಸೆಳೆಯಿತುಜನ ಜಂಗುಳಿಯಿಂದ ತುಂಬಿದ ದೇವಾಲಯ ಭಕ್ತಾದಿಗಳನ್ನ ಇನ್ನಿಲ್ಲದೆ ಸೆಳೆಯಿತು.

ಜನಸಾಗರದ ಪರಿಣಾಮ ಸುಮಾರು ಐದರಿಂದ ಎಂಟು ಕಿಲೋಮೀಟರ್ ವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು
ವಿಜೃಂಭಣೆಯಿಂದ ನಡೆದ ಕಾರ್ಯಕರ್ಮದ ಕುರಿತು ಟ್ರಸ್ಟ್ ನ ಕಾರ್ಯನಿರ್ವಹಣಾಧಿಕಾರಿ ಕೇಶವ್ ಮೂರ್ತಿ ಸಂತೋಷ ವ್ಯಕ್ತಪಡಿಸಿದರು.

ಸಾವಿರಾರು ಜನರಿಂದ ಕೂಡಿದ್ದ ದೇವಾಲಯದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನ ಸಮರ್ಥವಾಗಿ ನಿಭಾಯಿಸಿದ ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಹಾಗೂ ಪಿಎಸ್ಐ ಚೇತನ್ ಕುಮಾರ್ಗೆ ಭಾರಿ ಪ್ರಶಂಸೆ ಲಭಿಸಿದೆ.ಜೊತೆಗೆ ಕೊರಟಗೆರೆ ಪ್ರೆಂಡ್ಸ್ ಗ್ರೂಪ್ ಹಾಗೂ ನಟ ಜಗ್ಗೇಶ್ ಅಭಿಮಾನಿಗಳಿಂದ ಸಹ ಪ್ರಸಾದ ವಿನಿಯೋಗ ನಡೆಯಿತು.

https://youtube.com/live/l1AgWtDgo9c

Comments (0)

Your email address will not be published. Required fields are marked *

Back to top button