ರಾಜ್ಯಸುದ್ದಿ

ಗಂಡನ ಬಿಟ್ಟು ವಿವಾಹಿತ ಪುರುಷನೊಂದಿಗೆ ಓಡಿಹೋದ ಮಹಿಳೆ

ಚಿಕ್ಕೋಡಿ : ಗಂಡನ ಬಿಟ್ಟು ವಿವಾಹಿತ ಪುರುಷನೊಂದಿಗೆ ಮಹಿಳೆ ಓಡಿಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನರಾಳ ಗ್ರಾಮದಲ್ಲಿ ನಡೆದಿದೆ. ದುಂಡಾಪ್ಪ ವಾಲಿಕರ (37)ನ ಹೆಂಡತಿ ರೇಣುಕಾ ವಾಲಿಕರ ಎಂಬುವ ಮಹಿಳೆ ಲಗಮ ವಾಲಿಕರ (35) ಎಂಬ ವಿವಾಹಿತ ಪುರುಷನೊಂದಿಗೆ ಓಡಿಹೋಗಿದ್ದಾರೆ. ಈ ಪ್ರೇಮ ಸಂಬಂಧ ತಿಳಿದ ಮಹಿಳೆಯ ಪತಿ ದುಂಡಪ್ಪ ವಿವಾಹಿತ ಪುರುಷ ಲಗಮ ಮನೆ ಹಾಗೂ ಸಾಮಾಗ್ರಿಗಳನ್ನು ಧ್ವಂಸಗೊಳಿಸಿದರು.

ಕಳೆದ ಎರಡು ದಿನಗಳಿಂದ ಈ ಜೋಡಿ ನಾಪತ್ತೆಯಾಗಿದ್ದರು. ರೇಣುಕಾ 10 ವರ್ಷ ಗಂಡ ದುಂಡಾಪ್ಪನ ಜೊತೆ ಸಂಸಾರ ಮಾಡಿ ಇವರು ಪುತ್ರನನ್ನು ಹೊಂದಿದ್ದರು. ಈ ಲಗಮ ಕೂಡ ವಿವಾಹಿತನಾಗಿದ್ದನು. ರೇಣುಕಾ-ಲಗಮ‌ ಮಧ್ಯೆ ಅಕ್ರಮ ಸಂಬಂಧದ ಬಗ್ಗೆ ಮಾಹಿ ತಿಳಿದ ರೇಣುಕಾ ಗಂಡನ ಮನೆಯವರು ಲಗಮ ಮನೆಯ ಮೇಲೆ ಹಲ್ಲೆ ಮಾಡಿದ್ದಾರೆ.

ಲಗಮನ ಮನೆಯ ಕಿಟಕಿ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Comments (0)

Your email address will not be published. Required fields are marked *

Back to top button