ಕ್ರೈಂ ಸ್ಟೋರಿ
ಬೆಂಗಳೂರಿನಲ್ಲಿ ಮತ್ತೊಂದು ತ್ರಿಬಲ್ ಮರ್ಡರ್ – ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ!
Another triple murder in Bengaluru – Mother, grandmother, and uncle killed; perpetrator commits suicide!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ತ್ರಿವಳಿ ಕೊಲೆ ಪ್ರಕರಣ ನಡೆದಿದ್ದು, ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಯುವಕನೊಬ್ಬ ತನ್ನ ತಾಯಿ, ಅಜ್ಜಿ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.
ಪ್ರಶಾಂತ್ (24) ಎಂಬಾತ ತನ್ನ ಸ್ವಂತ ಕುಟುಂಬದ ಮೂವರನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡವನು. ಮಂಗಳಮ್ಮ (ಅಜ್ಜಿ), ನಂಜಮ್ಮ (ತಾಯಿ) ಮತ್ತು ಸತೀಶ್ (ಮಾವ) ಕೊಲೆಯಾದ ದುರ್ದೈವಿಗಳು.
ಕುಟುಂಬಸ್ಥರೆಲ್ಲರು ಕಳೆದ ಏಳೆಂಟು ವರ್ಷದಿಂದ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಪ್ರಶಾಂತ್ ಡ್ರೈವಿಂಗ್ ಕೆಲಸ ಮಾಡ್ತಿದ್ದ. ಪ್ರಶಾಂತ್ ಮೂವರನ್ನ ಮಚ್ಚಿನಿಂದ ಕೊಚ್ಚಿ ಕೊಲೆಗೈದ ಬಳಿಕ ರೂಂನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಕೊಲೆ ನಿಖರ ಕಾರಣ ಏನು ಎನ್ನೋದು ತನಿಖೆಯಲ್ಲಿ ಹೊರಬರಬೇಕಿದೆ.




