Top Newsಜಿಲ್ಲೆಸುದ್ದಿ

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಅಂತ್ಯ! ಮಾರ್ಚ್ 2 ಡೆಡ್‌ಲೈನ್

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು, ಸರ್ಕಾರದೊಂದಿಗಿನ ಮಾತುಕತೆಯ ನಂತರ ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.

38 ತಿಂಗಳ ವೇತನ ಹಿಂಬಾಕಿಯ ಪೈಕಿ 26 ತಿಂಗಳ ಬಾಕಿಯನ್ನು ಪಾವತಿಸಲು ಮತ್ತು ವೇತನ ಪರಿಷ್ಕರಣೆ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಆದರೆ, ಸಂಪೂರ್ಣ 38 ತಿಂಗಳ ಬಾಕಿ ಹಣವನ್ನೂ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ನೌಕರರ ಜಂಟಿ ಕ್ರಿಯಾ ಸಮಿತಿಯು ಸರ್ಕಾರಕ್ಕೆ ಮಾರ್ಚ್ 2ರವರೆಗೆ ಅಂತಿಮ ಗಡುವನ್ನು ನೀಡಿದೆ.

ಕೆಎಸ್​​ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನೀಡಿದ ಭರವಸೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ನಾಳೆಯಿಂದ ರಾಜ್ಯಾದ್ಯಂತ ಬಸ್ ಸಂಚಾರ ಎಂದಿನಂತೆ ಇರಲಿದೆ. ಒಂದು ವೇಳೆ ಮಾರ್ಚ್ 2ರೊಳಗಾಗಿ ಎಲ್ಲಾ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಹೋರಾಟಕ್ಕೆ ಇಳಿಯುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ. ಸಂಘಟನೆಯ ಈ ನಿರ್ಧಾರಕ್ಕೆ ಕೆಲವು ಸಿಬ್ಬಂದಿಗಳು ಆಕ್ಷೇಪ ವ್ಯಕ್ತಪಡಿಸಿ ಮುಷ್ಕರ ಮುಂದುವರಿಸಲು ಆಗ್ರಹಿಸಿದರಾದರೂ, ಸದ್ಯಕ್ಕೆ ಹೋರಾಟ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.

Comments (0)

Your email address will not be published. Required fields are marked *

Back to top button