#Exclusive NewsTop Newsಮನರಂಜನೆರಾಜ್ಯಸಿನಿಮಾಸುದ್ದಿ

ಮ್ಯಾಕ್ಸ್ ಸಿನಿಮಾ ನೋಡಿ ನೇರವಾಗಿ ಅಭಿಪ್ರಾಯ ತಿಳಿಸಿದ ಜನ

ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಕಿಚ್ಚ ಸುದೀಪ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್​ 25) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ಸುದೀಪ್​ ಅವರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಈ ಚಿತ್ರದಲ್ಲಿನ ಆ್ಯಕ್ಷನ್ ಸೀನ್​ಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ‘ಮ್ಯಾಕ್ಸ್’ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

‘ಮ್ಯಾಕ್ಸ್’ ಸಿನಿಮಾದಿಂದ ಜನರಿಗೆ ಮುಖ್ಯವಾಗಿ ಸಿಗುವುದು ಆ್ಯಕ್ಷನ್. ಹೊಡಿಬಡಿ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಸುದೀಪ್ ಅವರನ್ನು ಬಹಳ ದಿನಗಳ ಬಳಿಕ ಇಷ್ಟೊಂದು ಮಾಸ್ ಗೆಟಪ್​ನಲ್ಲಿ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಸುದೀಪ್ ಅವರ ಅಭಿನಯಕ್ಕೆ ಮೆಚ್ಚುಗೆ ಕೇಳಿಬರುತ್ತಿದೆ.

ಈ ಸಿನಿಮಾ ನೋಡುವಾಗ ಕಿಂಚಿತ್ತೂ ಬೋರ್​ ಆಗಲ್ಲ ಎಂದು ಸುದೀಪ್ ಅಭಿಮಾನಿಗಳು ಹೇಳಿದ್ದಾರೆ. ಕತೆ ತುಂಬ ವೇಗವಾಗಿ ಸಾಗುವುದರಿಂದ ಜನರಿಗೆ ಇಷ್ಟ ಆಗುತ್ತಿದೆ. ಇದು ಸುದೀಪ್ ಅವರ ಒನ್​ ಮ್ಯಾನ್​ ಶೋ ಕೂಡ ಹೌದು. ಪಕ್ಕಾ ಅಭಿಮಾನಿಗಳಿಗಾಗಿ ‘ಮ್ಯಾಕ್ಸ್’ ಮೂಡಿಬಂದಿದೆ. ಸೂಪರ್ ಹಿಟ್ ಆಗಲಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

ಚಿತ್ರಮಂದಿರದಲ್ಲಿ ‘ಮ್ಯಾಕ್ಸಿಮಮ್ ಮಾಸ್​..’ ಹಾಡು ಬಂದಾಗ ಜನರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರೇಷನ್ ಜೋರಾಗಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಸಿನಿಮಾಗೆ ಪಾಸಿಟಿವ್ ವಿಮರ್ಶೆ ನೀಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button