ಕರುನಾಡಿನಲ್ಲಿ ಸುರಿಯಲಿದೆ ಭಾರಿ ಮಳೆ – ಬೆಂಗಳೂರು ಸೇರಿ 7 ಜಿಲ್ಲೆಗಳಿಗೆ ಹೈ ಅಲರ್ಟ್!
Yellow alert in different districts including bangalore

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನರೇ ಎಚ್ಚರ. ಕೆಲವೇ ಗಂಟೆಗಳಲ್ಲಿ ಇಡೀ ವಾತಾವರಣವೇ ರಣಭೀಕರವಾಗಿ ಬದಲಾಗಲಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಬಿಡುಗಡೆ ಮಾಡಿರುವ ಇತ್ತೀಚಿನ ವೆದರ್ ಬುಲೆಟಿನ್ನಲ್ಲಿ ಅತ್ಯಂತ ಆತಂಕಕಾರಿ ಮುನ್ಸೂಚನೆಯನ್ನು ನೀಡಿದೆ. ಮುಂದಿನ ಕೇವಲ 2 ಗಂಟೆಗಳ ಅವಧಿಯಲ್ಲಿ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸಿಡಿಲು-ಗುಡುಗು ಸಹಿತ ರಣಭೀಕರ ಬಿರುಗಾಳಿ ಮಳೆ ತಲ್ಲಣ ಸೃಷ್ಟಿಸಲಿದೆ!

40 ಕಿಮೀ ವೇಗದ ಗಾಳಿ: ಜನಜೀವನ ಅಸ್ತವ್ಯಸ್ತ ಸಾಧ್ಯತೆ!
ಹವಾಮಾನ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಮುಂದಿನ 2 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಬರೋಬ್ಬರಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ರಣಭೀಕರ ಬಿರುಗಾಳಿ ಬೀಸಲಿದೆ. ಇದರೊಂದಿಗೆ 64.5 ಮಿಲಿಮೀಟರ್ನಿಂದ ಹಿಡಿದು 115 ಮಿಲಿಮೀಟರ್ವರೆಗೆ ಭಾರಿ ಪ್ರಮಾಣದ ಮಳೆ ಸುರಿಯಲಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೋಲಾರ,ತುಮಕೂರು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಜೂನ್ 7ಕ್ಕೆ ಮುಂಗಾರು ಪ್ರವೇಶ!
ಹವಾಮಾನ ಇಲಾಖೆಯು ಇಂದು ಮತ್ತು ನಾಳೆ (ಮೇ 30, 31) ಕರ್ನಾಟಕದ ಇಡೀ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಿದೆ. ಮುಂಗಾರು ಮಳೆ ಜೂನ್ 7ರ ಸುಮಾರಿಗೆ ರಾಜ್ಯಕ್ಕೆ ದುರ್ಬಲವಾಗಿ ಆಗಮಿಸುವ ನಿರೀಕ್ಷೆ ಇದೆ. ಆದರೆ, ಅದಕ್ಕೂ ಮುನ್ನವೇ ವಾಯುಭಾರ ಕುಸಿತ ಮತ್ತು ಸ್ಥಳೀಯ ಹವಾಮಾನ ವೈಪರೀತ್ಯದಿಂದಾಗಿ ಈ ಭಾರಿ ಮುನ್ಸೂಚನೆ ಲಭ್ಯವಾಗಿದೆ.
ಧಾರಾಕಾರ ಮಳೆ ಹಾಗೂ ಭೀಕರ ಬಿರುಗಾಳಿ ಬೀಸುವ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಓಡಾಡುವುದನ್ನು ತಪ್ಪಿಸಬೇಕು. ಮರದ ಕೆಳಗೆ, ವಿದ್ಯುತ್ ಕಂಬಗಳ ಬಳಿ ಹಾಗೂ ಹಳೆಯ ಕಟ್ಟಡಗಳ ಕೆಳಗೆ ಆಶ್ರಯ ಪಡೆಯಬಾರದು. ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆ ಮತ್ತು ಜಿಲ್ಲಾಡಳಿತಗಳು ಎಚ್ಚರಿಕೆ ನೀಡಿವೆ.
#KarnatakaRains #BengaluruRains #WeatherAlert #IMD #Monsoon2026 #FreedomTV #BreakingNews #RainUpdate #StormWarning #BengaluruWeather #HeavyRainfall #YellowAlert #CoastalKarnataka




