ಸ್ಟ್ರೀಟ್ದ್ನಲ್ಲಿ ಸಿಗುವ ಫುಡ್ಸ್ ಆರೋಗ್ಯಕ್ಕೆ ಹಾನಿಕಾರಕ ತಿನ್ಬೇಡಿ ಅಂತ ದಿನಾ ಬೆಳಗಾದ್ರೆ ಸೋಶಿಯಲ್ ಮೀಡಿಯಾದಲ್ಲಿ ಡಾಕ್ಟರ್ಸ್, ಮನೆಯಲ್ಲಿ ಅಪ್ಪ ಅಮ್ಮ ಬಾಯ್ ಬಡ್ಕೋತನೆ ಇರ್ತಾರೆ. ಆದ್ರೆ ನಾಲಿಗೆ ಚಪಲ ಏನ್ ಮಾಡೋದು, ಯಾರ್ ಏನೇ ಹೇಳಿದ್ರು ಬಿಸಿ ಬಿಸಿ ಸಮೋಸ, ಮೆಣಸಿನಕಾಯಿ ಬಜ್ಜಿ ಮತ್ತು ಸ್ಪೈಸಿ ಪಾನಿಪುರಿ, ಗೋಬಿ ಮಂಚೂರಿ ಬಾ ಅಂತ ನಿಮ್ಮನ ಕರಿತಿರುತ್ತೆ ಇವುಗಳಲ್ಲಿ ಕ್ಯಾಲೋರಿನೂ ಜಾಸ್ತಿ ಇರುತ್ತೆ. ಬಟ್ ನಾನು ಈಗ ಹೇಳೋ ಸ್ಟ್ರೀಟ್ ಫುಡ್ ಗಳನ್ನ ಕಣ್ ಮುಚ್ಕೊಂಡು ತಿನ್ಬೋದು. ಈ ಸ್ಟ್ರೀಟ್ ಫುಡ್ ರುಚಿಕರ ಆರೋಗ್ಯಕ್ಕೂ ಒಳ್ಳೆಯದು ಹಸಿ ಮಾವು ಮತ್ತು ಚನ್ನಾ ಚಾಟ್ , ಹಬೆಯಲ್ಲಿ ಬೇಯಿಸಿದ ಬಿಸಿ ಬಿಸಿ ಇಡ್ಲಿ , ಇನ್ನೂ ಹೆಸರು ಕಾಳು ದೋಸೆ , ಗ್ರಿಲ್ಡ್ ಕಾರ್ನ್, ಫ್ರೂಟ್ ಸಲಾಡ್,ಮೊಟ್ಟೆಗಳು,ಭೇಲ್ ಪುರಿ, ತೆಂಗಿನಕಾಯಿ ತುಂಡುಗಳು, ಮೊಳಕೆ ಕಾಳುಗಳು ಚಾಟ್ ನ ಆರಾಮಾಗಿ ಸೇವಿಸ ಬಹುದು. ಇವುಗಳನ್ನ ಬಿಟ್ಟು ಮೋಸಾ, ಕಚೋರಿ ಜಿಲೇಬಿ, ಪಿಜಾ, ಬರ್ಗರ್ ಕ್ಯಾಲೋರಿ ಮತ್ತು ಕೊಬ್ಬನ್ ನ ಜಾಸ್ತಿ ಮಾಡ್ತವೆ ಅದ್ರಿಂದ ಹೃದಯ ಸಮಸ್ಯೆಗಳು ಬರುತ್ತೆ ಹೀಗಾಗಿ ವೀಷಕರೆ ಗೊತ್ತಿರ್ಲಿ ನಿಮ್ಮ ಆರೋಗ್ಯವನ್ನ ನಿಮ್ಮ ಆಹಾರನೇ ಕಾಪಾಡೋದು.!

ಹಸಿ ಮಾವು ಮತ್ತು ಚನ್ನಾ ಚಾಟ್: ಇದು ಪ್ರೋಟೀನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಈರುಳ್ಳಿ, ಟೊಮೆಟೊ, ಮಾವು ಮತ್ತು ಸೌತೆಕಾಯಿ ಇದರ ರುಚಿಯನ್ನ ಮತ್ತಷ್ಟು ಜಾಸ್ತಿ ಮಾಡುತ್ತೆ.

ಇಡ್ಲಿ: ಹಬೆಯಲ್ಲಿ ಬೇಯಿಸಿದ ಇಡ್ಲಿ ಆರೋಗ್ಯಕ್ಕೆ ತುಂಬಾನೇ ಆರೋಗ್ಯಕಾರಕ, ಇದರಲ್ಲಿ ಕ್ಯಾಲೋರಿಗಳು ಕಡಿಮೆ ಮತ್ತು ಫೈಬರ್ ಅಧಿಕವಾಗಿರುತ್ತದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ.
![]()
ಹೆಸರು ಕಾಳು ದೋಸೆ: ರುಚಿಕರವಾದ ಮತ್ತೊಂದು ಖಾದ್ಯ ಹೆಸರು ಕಾಳು ದೋಸೆ. ಇದನ್ನು ಹೆಸರು ಕಾಳುಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಚಟ್ನಿಯೊಂದಿಗೆ ತಿನ್ನುವುದರಿಂದ ರುಚಿಯಾಗಿ ಇರುತ್ತೆ ಮತ್ತು ದೇಹಕ್ಕೆ ಶಕ್ತಿಯೂ ಸಿಗುತ್ತೆ.

ಗ್ರಿಲ್ಡ್ ಕಾರ್ನ್: ಕಾರ್ನ್ ನ ಬೆಂಕಿಯ ಮೇಲಿಟ್ಟು ಸುಟ್ಟಿ, ನಿಂಬೆ ರಸ ಮತ್ತು ಉಪ್ಪನ್ನು ಸವರಿದ್ರೆ ಜೋಳ ರುಚಿಕರವಾದ ಜೋಳ ರೆಡಿಯಾಗುತ್ತೆ. ಅಲ್ಲದೇ ಜೋಳದಲ್ಲಿ ಹೆಚ್ಚು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಕಾರ್ನ್ ಫ್ರೈಟರ್‌ಗಳು ಆರೋಗ್ಯಕ್ಕೂ ತುಂಬಾ ಒಳ್ಳೆಯದು.
:max_bytes(150000):strip_icc()/Simply-Recipes-Cajun-Corn-LEAD-04-4c0471cde9484a3a86110bc408077d06.jpg)
ಫ್ರೂಟ್ ಸಲಾಡ್: ರಸ್ತೆ ಬದಿಯಲ್ಲಿ ಆಹಾರವನ್ನು ಸೇವಿಸಬೇಕು,
ಆದ್ರೆ ಅದು ಆರೋಗ್ಯಕರವಾಗಿರಬೇಕೆಂದರೆ ಫ್ರೂಟ್ ಸಲಾಡ್ ತಿನ್ನುವುದು ಉತ್ತಮ ಆಯ್ಕೆ. ಹಣ್ಣುಗಳಲ್ಲಿ ಹೆಚ್ಚಾಗಿ ಫೈಬರ್ ಇರುತ್ತೆ.

ಮೊಟ್ಟೆಗಳು: ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಉತ್ತಮ ಆಯ್ಕೆ. ಇವುಗಳಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಕೊತ್ತಂಬರಿ ಸೊಪ್ಪು ಮತ್ತು ಮಸಾಲೆಗಳನ್ನು ಸೇರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

ಭೇಲ್ ಪುರಿ: ಈ ಆರೊಗ್ಯಕರ ತಿಂಡಿಯನ್ನು ಪಫ್ಡ್ ರೈಸ್, ಹಸಿರು ತರಕಾರಿಗಳು ಮತ್ತು ಹುಣಸೆ ಹಣ್ಣಿನ ತಿರುಳಿನಿಂದ ತಯಾರಿಸಲಾಗುತ್ತೆ. ಪಫ್ಡ್ ರೈಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇದರಲ್ಲಿ ಸೇರಿಸಲಾಗುವ ತರಕಾರಿಗಳು ಮತ್ತು ಮಸಾಲೆಗಳು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತವೆ.

ತೆಂಗಿನಕಾಯಿ ತುಂಡುಗಳು: ಎಳ ನೀರು ಮಾತ್ರವಲ್ಲ, ಬೀದಿಗಳಲ್ಲಿಯೂ ಮಾರಾಟ ಮಾಡುವ ತೆಂಗಿನಕಾಯಿ ಪೀಸ್ಗಳು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತವೆ. ಇವು ಕಡಿಮೆ ಕ್ಯಾಲೋರಿಗಳೊಂದಿಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತವೆ. ಇವು ಜೀರ್ಣಕ್ರಿಯೆಗೆ ಸಹ ಸಹಾಯ ಮಾಡುತ್ತವೆ. ನೀವು ಸಿಹಿ ಏನನ್ನಾದರೂ ತಿನ್ನಬೇಕೆಂದು ಅನಿಸಿದರೆ ಇದು ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.

ಮೊಳಕೆ ಕಾಳುಗಳು ಚಾಟ್: ಮೊಳಕೆ ಕಾಳುಗಳ ಚಾಟ್ ತುಂಬಾ ಪೌಷ್ಟಿಕವಾಗಿದೆ. ಅವು ಕ್ಯಾಲೋರಿಗಳನ್ನು ಹೆಚ್ಚಿಸುವುದಿಲ್ಲ. ಅವು ಸುಲಭವಾಗಿ ಜೀರ್ಣವಾಗುತ್ತವೆ. ತರಕಾರಿಗಳು, ಉಪ್ಪು ಮತ್ತು ನಿಂಬೆ ರಸದೊಂದಿಗೆ ಮೊಳಕೆ ಕಾಳುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.



