ರಾಮನಗರ: ಮಾಜಿ ಸಚಿವ ಕೆ.ಎನ್ ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂದು ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ರಾಜಣ್ಣ ಬ್ರೈನ್ ಮ್ಯಾಪಿಂಗ್ ಮಾಡಿದ್ರೆ ಎಲ್ಲ ಬಯಲಾಗುತ್ತೆ. ಯಾರ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂಬುದು ಗೊತ್ತಾಗುತ್ತೆ. ರಸ್ತೆ ಕ್ಲಿಯರ್ ಆಗಿದೆ ನುಗ್ಗೋದೊಂದೇ ಬಾಕಿ. ರಾಜಣ್ಣರನ್ನ ಕಾಂಗ್ರೆಸ್ ನಿಂದ ದೂರ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ. ವಜಾ ಮಾಡಾಯ್ತು ,ಈಗ ಪಕ್ಷದಿಂದಲೇ ತೆಗೆದು ಹಾಕಲು ಬಿಗ್ ಪ್ಲ್ಯಾನ್ ಮಾಡಿದ್ದಾರೆ. ಸಿಎಂ ಆಪ್ತ ಪಕ್ಷದಲ್ಲಿ ಉಳಿದುಕೊಂಡರೇ ಡಿಕೆ ನಾಯಕತ್ವಕ್ಕೆ ಕೊಕ್ಕೆ ಬೀಳುತ್ತೆ ಎಂದು ಡಿಕೆ ಆಪ್ತ ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ.


