ಜಿಲ್ಲೆ

ಬಿಹಾರ ಕಾರ್ಮಿಕರ ಸಾವು ಪ್ರಕರಣ : ಸಚಿವ ಎಂಬಿ ಪಾಟೀಲ ಹೇಳಿದೇನು..?

ವಿಜಯಪುರ : ಬಿಹಾರ ಕಾರ್ಮಿಕರ ಸಾವು ಪ್ರಕರಣದಲ್ಲಿ ಮೃತಪಟ್ಟಿರುವ ಕಾರ್ಮಿಕರಿಗೆ ಸರ್ಕಾರದಿಂದ ಎರಡು ಲಕ್ಷ ಘೋಷಣೆ ಮಾಡಲಾಗಿದೆ ಎಂದು ಸಚಿವ ಎಂಬಿ ಪಾಟೀಲ ಹೇಳಿದರು.

ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ಗಂಭೀರ ಗಾಯಾಳುಗಳಿಗೆ ಒಂದು ಲಕ್ಷ, ಸಣ್ಣಪುಟ್ಟ ಗಾಯಾಳಿಗೆ 50 ಸಾವಿರ ನೀಡಲಾಗುತ್ತದೆ. ಅಲ್ಲದೇ, ಕಾರ್ಖಾನೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಮಾಲೀಕರು ಸೇಫ್ಟಿಗೆ ಆದ್ಯತೆ ನೀಡಬೇಕು ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ದುರಂತ ಆಗಬಾರದಿತ್ತು ಎಂದರು.

Comments (0)

Your email address will not be published. Required fields are marked *

Back to top button