ಆರೋಗ್ಯಜನಸಾಮಾನ್ಯರ ದನಿಜಿಲ್ಲೆ
ಜಿಲ್ಲಾಸ್ಪತ್ರೆಯಲ್ಲಿ ಮಂಗನಾಟ..! ; ರೋಗಿಗಳು ಹೈರಾಣು

ಚಿತ್ರದುರ್ಗ : ನಗರದ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ ಕುರಿತು ಆಗಾಗ ಸುದ್ದಿಯಾಗುತ್ತಿದ್ದು ಕಾಮನ್ ಆಗಿದೆ. ಆದ್ರೆ ಈ ಬಾರಿ ಜಿಲ್ಲಾಸ್ಪತ್ರೆಯಲ್ಲಿ ಮಂಗನ ಕಿರಿಕಿರಿ ಕಾರಣಕ್ಕೆ ಸುದ್ದಿಯಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದೇ ರೋಗಿಗಳು ಹೈರಾಣಾಗಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯ ವಾರ್ಡ್ಗಳ ಕಿಟಕಿ ಬಾಗಿಲುಗಳು ಹಾಳಾಗಿದ್ದು. ಅಧಿಕಾರಿಗಳು ರಿಪೇರಿ ಮಾಡಿಸೋ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ ಈ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಈ ಮೂಲಕ ಕೋತಿಗಳು ಆಸ್ಪತ್ರೆಯ ವಾರ್ಡ್ಗಳಿಗೆ ನುಗ್ಗುತ್ತಿವೆ. ರೋಗಿಗಳಿಗೆ ನೀಡಿದ ಹಣ್ಣು, ಬ್ರೆಡ್, ಆಹಾರದ ಚೀಲ ಎತ್ತಿಕೊಂಡು ಪರಾರಿಯಾಗುತ್ತಿವೆ. ಬೆಡ್ ಮೇಲೆಯೇ ಓಡಾಡುತ್ತಿರುವ ಮಂಗಕ್ಕೆ ಹೆದರಿ ರೋಗಿಗಳು ಗಾಬರಿಯಾಗುತ್ತಿದ್ದಾರೆ. ಸದ್ಯ ಮಂಗವೊಂದು ವಾರ್ಡನಲ್ಲಿ ರೋಗಿಗಳ ಬೆಡ್ ಮೇಲೆ ಓಡಾಡುತ್ತಿರುವ ವೀಡಿಯೋದ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.




