ರಾಜ್ಯ
ಏರ್‌ಪೋರ್ಟ್‌ನಲ್ಲಿ ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದ ಇಂಡಿಗೋ ವಿಮಾನ!
Indigo plane hit a parking pole at the airport!

ಶ್ರೀನಗರ : ಮುಂಬೈನಿಂದ ಕಾಶ್ಮೀರದ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ವೇಳೆ ಪಾರ್ಕಿಂಗ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ.
ನವಿ ಮುಂಬೈನಿಂದ ಶ್ರೀನಗರಕ್ಕೆ ಕಾರ್ಯನಿರ್ವಹಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ನ ‘6ಇ 225’ ವಿಮಾನವು ನಿಗದಿತ ವೇಳಾಪಟ್ಟಿಯಂತೆ ರನ್‌ವೇನಲ್ಲಿ ಸುಗಮವಾಗಿ ಲ್ಯಾಂಡ್ ಆಗಿತ್ತು. ಬೆಳಗ್ಗೆ 9.02 ರ ಸುಮಾರಿಗೆ ವಿಮಾನ ನಿಲ್ದಾಣದ ‘ಬೇ ನಂ. 06’ ರಲ್ಲಿ ವಿಮಾನವನ್ನು ಪಾರ್ಕ್ ಮಾಡಲು ತರುತ್ತಿದ್ದಾಗ, ಸ್ವಯಂಚಾಲಿತ ಪಾರ್ಕಿಂಗ್ ಗೈಡೆನ್ಸ್ ಸಿಸ್ಟಮ್ ಕಂಬಕ್ಕೆ ವಿಮಾನದ ಒಂದು ಭಾಗ ಸವರಿದೆ.
ಡಿಕ್ಕಿ ಸಂಭವಿಸಿದ ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣ ಸಿಬ್ಬಂದಿ ಮ್ಯಾನುಯಲ್ ಏರ್‌ಕ್ರಾಫ್ಟ್ ಮೆಟ್ಟಿಲುಗಳನ್ನು ಜೋಡಿಸಿ, ಎಲ್ಲಾ ಪ್ರಯಾಣಿಕರನ್ನು ಯಾವುದೇ ಆತಂಕವಿಲ್ಲದೆ ಕೆಳಗಿಳಿಸಿದ್ದಾರೆ.




