ಸಿನಿಮಾ

‘ರಾಮಾಯಣ’ ಟ್ರೇಲರ್ ರಿಲೀಸ್​ಗೆ ಮುಹೂರ್ತ ಫಿಕ್ಸ್!

‘Ramayana’ trailer release date fixed!

ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ನಾಳೆ ಮುಂಜಾನೆ 4:15ಕ್ಕೆ ಈ ದೃಶ್ಯ ವೈಭವ ಅನಾವರಣಗೊಳ್ಳಲಿದೆ. ವಿಶೇಷವೆಂಬಂತೆ ಬ್ರಾಹ್ಮೀ ಮುಹೂರ್ತದಲ್ಲೇ ಟ್ರೇಲರ್ ಲಾಂಚ್ ಆಗಲಿದ್ದು, ರಿಲೀಸ್​ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ದೇಶಾದ್ಯಂತ ಇರುವ ಸಿನಿಪ್ರಿಯರು ಅಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಮುಂಜಾನೆಯೇ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಡಿಜಿಟಲ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಲು ಚಿತ್ರತಂಡ ಪ್ಲಾನ್ ಮಾಡಿದೆ.

ಬ್ರಹ್ಮ ಮುಹೂರ್ತದಲ್ಲೇ ಟ್ರೈಲರ್ ಬಿಡುಗಡೆ ಮಾಡುತ್ತಿರುವುದು ಚಿತ್ರದ ಸಾಂಸ್ಕೃತಿಕ ಮಹತ್ವವನ್ನು ಸಾರುತ್ತದೆ. ಭಾರತೀಯ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಕ್ಕೆ ಈ ಸಮಯ ಅತ್ಯಂತ ಶ್ರೇಷ್ಠ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೈ-ಕ್ವಾಲಿಟಿ ಟ್ರೈಲರ್ ಲಭ್ಯವಿರಲಿದೆ.

ಹಾಲಿವುಡ್ ಮಟ್ಟದ ದೃಶ್ಯ ವೈಭವ (VFX) ಹಾಗೂ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದ್ದು, ಟ್ರೇಲರ್ ಹೇಗಿರಲಿದೆ ಎಂಬುದನ್ನು ನೋಡಲು ಕನ್ನಡಿಗರು ಸೇರಿದಂತೆ ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದೆ.

ಬಾಲಿವುಡ್ ಸ್ಟಾರ್ ನಟ ರಣ್‌ಬೀರ್ ಕಪೂರ್ ಅವರು ಪ್ರಭು ಶ್ರೀರಾಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟಿ ಸಾಯಿ ಪಲ್ಲವಿ ಸೀತಾ ಮಾತೆಯ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ. ಯಶ್ ಅವರು ಈ ಚಿತ್ರದಲ್ಲಿ ಪ್ರಮುಖ ಹಾಗೂ ಪವರ್‌ಫುಲ್ ಪಾತ್ರವಾದ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜೊತೆಗೆ ಈ ಬಿಗ್ ಬಜೆಟ್ ಸಿನಿಮಾಗೆ ಸಹ-ನಿರ್ಮಾಪಕರಾಗಿಯೂ ಸಾಥ್ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button