HUBLIರಾಜಕೀಯ

ಸರ್ಕಾರದಲ್ಲಿ ಇನ್ನೂ ಒಳಗುಟ್ಟೈತಿ ಎಂದ MLC ಜಕ್ಕಪ್ಪನವರ!

MLC Jakkappanavar says lot of changes in congress govt

ಹುಬ್ಬಳ್ಳಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಹೈಡ್ರಾಮಾ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಬೆನ್ನಲ್ಲೇ, ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆದ ಹೈಕಮಾಂಡ್‌ನ ಸರಣಿ ಸಭೆಗಳಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಅವರು ಆಸಕ್ತಿದಾಯಕ ಶಾಕಿಂಗ್ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. “ನಮ್ಮ ಸಮ್ಮುಖದಲ್ಲಿ ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ನೇರ ಚರ್ಚೆ ನಡೆದಿಲ್ಲ ನಿಜ. ಆದರೆ, ಹೈಕಮಾಂಡ್ ಕರ್ನಾಟಕದ ನಾಯಕತ್ವದ ಕುರಿತು ಶೀಘ್ರದಲ್ಲೇ ಒಂದು ‘ಬಿಗ್ ಸರ್ಪ್ರೈಸ್’ ನೀಡುವ ಸಾಧ್ಯತೆ ದಟ್ಟವಾಗಿದೆ” ಎಂದು ಹೊಸ ಬಾಂಬ್ ಸಿಡಿಸಿದ್ದಾರೆ!

“ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ; ಅಧಿಕಾರದ ಆಸೆ ಸಹಜ!”


ರಾಜ್ಯದಲ್ಲಿ ಸಿಎಂ ಕುರ್ಚಿ ಹಾಗೂ ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯ ಕುರಿತು ಜಕ್ಕಪ್ಪನವರ ಮುಕ್ತವಾಗಿ ಮಾತನಾಡಿದ್ದಾರೆ.ರಾಜಕಾರಣದಲ್ಲಿ ಯಾವಾಗ ಏನಾಗುತ್ತದೋ ಯಾರೂ ಊಹಿಸಲು ಸಾಧ್ಯವಿಲ್ಲ. ಇಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದೆ, ಆದರೆ ಅದು ಸಸ್ಪೆನ್ಸ್ ಮತ್ತು ಸರ್ಪ್ರೈಸ್ ಆಗಿ ಉಳಿದಿದೆ. “ರಾಜಕೀಯ ಅಖಾಡದಲ್ಲಿ ಸ್ಪರ್ಧೆ ಇರುವುದು ತೀರಾ ಸಹಜ. ಇಲ್ಲಿ ಯಾರೂ ಸನ್ಯಾಸಿಗಳಾಗಿ ಬಂದಿಲ್ಲ. ಜನರಿಂದ ಚುನಾಯಿತರಾಗಿ ಬಂದ ಮೇಲೆ ಎಲ್ಲರಿಗೂ ಅಧಿಕಾರದ ಅಪೇಕ್ಷೆ ಇರುತ್ತದೆ. ಎಲ್ಲರಿಗೂ ಒಂದೇ ಇಲಾಖೆಯ ಮೂಲಕ ಜನಸೇವೆ ಮಾಡುವ ಭಾವನೆಯನ್ನು ತಡೆಯಲು ಆಗಲ್ಲ, ಪ್ರೋತ್ಸಾಹ ನೀಡಬೇಕಾಗುತ್ತದೆ.”

ಸಚಿವಗಿರಿಗೆ ನಾನವನಲ್ಲ ಎಂದ MLC !
“ಪಕ್ಷ ನನಗೆ ಈಗಾಗಲೇ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ದೊಡ್ಡ ಜವಾಬ್ದಾರಿ ಕೊಟ್ಟಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಚಿವನಾದರೆ ಕೇವಲ ಒಂದೇ ಇಲಾಖೆಯ ಕೆಲಸ ಮತ್ತು ಒತ್ತಡ ಹೆಚ್ಚಿರುತ್ತದೆ. ಆದರೆ ಈಗ ಪರಿಷತ್ ಸದಸ್ಯನಾಗಿ ನಾನು ಮುಕ್ತವಾಗಿ ಎಲ್ಲರೊಟ್ಟಿಗೆ ಬೆರೆತು ಕೆಲಸ ಮಾಡಬಹುದು. ಸರ್ಕಾರದ ಎಲ್ಲಾ ೩೪ ಇಲಾಖೆಗಳಿಂದಲೂ ಜನರಿಗೆ ಕೆಲಸ ಮಾಡಿಸಿಕೊಡುವ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿರುವ ತೃಪ್ತಿ ನನಗಿದೆ.”ಎಂದರು

ದೆಹಲಿ ಸಭೆಯ ಅಸಲಿ ಅಜೆಂಡಾ – ಒಳಗುಟ್ಟು ಬಹಿರಂಗ!
ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಮ್ಮುಖದಲ್ಲಿ ನಡೆದ ಸುದೀರ್ಘ ಸಭೆಯ ಎರಡು ಪ್ರಮುಖ ನಿರ್ಧಾರಗಳನ್ನು ಜಕ್ಕಪ್ಪನವರ ಬಿಚ್ಚಿಟ್ಟಿದ್ದಾರೆ. ರಾಜ್ಯದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಎದುರಾಗುತ್ತಿದ್ದು, ಕಾಂಗ್ರೆಸ್ ಬಳಿ ಮೂವರನ್ನು ಗೆಲ್ಲಿಸಿಕೊಳ್ಳುವಷ್ಟು ಭದ್ರ ಸಂಖ್ಯಾಬಲವಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮತ್ತೊಮ್ಮೆ ರಾಜ್ಯಸಭೆಗೆ ಪುನರ್ ಆಯ್ಕೆಯಾಗಬೇಕು ಎಂಬುದು ಎಲ್ಲರ ತೀವ್ರ ಅಭಿಲಾಷೆಯಾಗಿದೆ. ಇದರೊಂದಿಗೆ ಶೀಘ್ರದಲ್ಲೇ ಖಾಲಿಯಾಗಲಿರುವ 7 ವಿಧಾನ ಪರಿಷತ್ ಸ್ಥಾನಗಳ ಆಯ್ಕೆ ಕುರಿತು ಗಂಭೀರ ಚರ್ಚೆ ನಡೆದಿದೆ.
ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಎಸ್‌ಐಆರ್ (SIR) ಕಾರ್ಯಾಚರಣೆಯ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆಯಾಗಿದೆ. “ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಅನ್ನು ಎಸ್‌ಐಆರ್ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ. ಇದರ ವಿರುದ್ಧ ನಮ್ಮ ಪಕ್ಷದಿಂದ ಜನರಲ್ಲಿ ಭಾರಿ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರದ ಕಾರ್ಯವೈಖರಿಯನ್ನು ಜನರಿಗೆ ತಲುಪಿಸುವ ಕುರಿತು ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದೆ.”
ದೆಹಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಜಕ್ಕಪ್ಪನವರ ಅವರ ಮಾತುಗಳನ್ನು ಗಮನಿಸಿದರೆ, ಹೈಕಮಾಂಡ್ ಕೇವಲ ರಾಜ್ಯಸಭೆ ಅಥವಾ ಪರಿಷತ್ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ಇವಿ ಚಾರ್ಜಿಂಗ್ ಹಗರಣ, ಮುಸ್ಲಿಂ ಓಲೈಕೆ ಮತ್ತು ದಲಿತ ಸಿಎಂ ಚರ್ಚೆಗಳ ನಡುವೆ ಹೈಕಮಾಂಡ್ ಅತ್ಯಂತ ಗೌಪ್ಯವಾಗಿ ‘ಕರ್ನಾಟಕ ಕುರ್ಚಿ’ಯ ಬಗ್ಗೆ ದೊಡ್ಡ ಆಪರೇಷನ್ ನಡೆಸಿದ್ದು, ಸದ್ಯದಲ್ಲೇ ಹೊರಬೀಳಲಿರುವ ಆ ಸಂಗತಿ ಏನಾಗಿರಬಹುದು ಎಂಬ ಕುತೂಹಲ ಈಗ ದಟ್ಟವಾಗಿದೆ.

#FreedomTV #FHJakkappanavar #CongressHighCommand #KarnatakaPolitics #RahulGandhi #MallikarjunKharge #Siddaramaiah #DKShivakumar #CMChangeKarnataka #RajyaSabhaElection #SIRInvestigation #HubliNews #KannadaNews #BreakingNews

Comments (0)

Your email address will not be published. Required fields are marked *

Back to top button