chennaiಮನರಂಜನೆ

ಜಯಂ ರವಿ ಮಡದಿ ಆರತಿ ಬೆಂಬಲಕ್ಕೆ ನಿಂತ ಖುಷ್ಬೂ!

Actress Kushbu stands with Aarti Ravi

ಚೆನ್ನೈ: ಕಾಲಿವುಡ್‌ನ ಸ್ಟಾರ್ ನಟ ಜಯಂ ರವಿ ಹಾಗೂ ಮಡದಿ ಆರತಿ ತಮ್ಮ ಗೃಹಸ್ಥಾಶ್ರಮಕ್ಕೆ ದಿಢೀರ್ ವಿಚ್ಛೇದನ ಘೋಷಣೆ ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದ್ದರು. ಬೆಂಗಳೂರು ಮೂಲದ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ಜಯಂ ರವಿ ಹೆಸರು ತಳುಕುಹಾಕಿಕೊಂಡಿದ್ದು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಎಲ್ಲಾ ವಿವಾದಗಳ ನಡುವೆ, ಬಹುಭಾಷಾ ನಟಿ ಖುಷ್ಬೂ ಸುಂದರ್ ಸೋಶಿಯಲ್ ಮೀಡಿಯಾದಲ್ಲಿ ಆರತಿ ರವಿಯನ್ನು ಬೆಂಬಲಿಸಿರುವುದು ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಯಂ ರವಿ ಹೆಸರನ್ನು ಉಲ್ಲೇಖಿಸದೆ ಖುಷ್ಬೂ, ಪತಿ-ಪತ್ನಿ ಸಂಬಂಧ ಹಾಗೂ ಮದುವೆ ಜೀವನದ ಘನತೆಯ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ನಿಜವಾದ ಗಂಡ ಹೆಂಡತಿಯನ್ನು ಗೌರವಿಸುತ್ತಾನೆ!


ನಟಿ ಖುಷ್ಬೂ ಸುಂದರ್ ತಮ್ಮ ಪೋಸ್ಟ್‌ನಲ್ಲಿ ಸಂಸಾರದ ಒಳಹೊರಗು ಹಾಗೂ ಪುರುಷನ ಜವಾಬ್ದಾರಿಯ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಬರೆದಿದ್ದಾರೆ. ಕುಟುಂಬವೇ ಸರ್ವಸ್ವ: “ಒಬ್ಬ ನಿಜವಾದ ವ್ಯಕ್ತಿ ತನ್ನ ಕುಟುಂಬದ ಘನತೆಗೋಸ್ಕರ ಏನು ಬೇಕಾದರೂ ಮಾಡುತ್ತಾನೆ. ತನ್ನ ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ತಾನು ಪ್ರೀತಿಸಿದವರ ಅವಶ್ಯಕತೆ ಹಾಗೂ ಆಸೆಗಳನ್ನು ಈಡೇರಿಸಲು ಸದಾ ಪ್ರಯತ್ನಿಸುತ್ತಾನೆ.”
“ಮದುವೆಯ ಜೀವನದ ಪ್ರಯಾಣದಲ್ಲಿ ಏರಿಳಿತಗಳು ತೀರಾ ಸಹಜ. ಚಿಕ್ಕ ಚಿಕ್ಕ ತಪ್ಪುಗಳು ಪ್ರತಿಯೊಬ್ಬರಿಂದಲೂ ನಡೆಯುತ್ತವೆ. ಕಾಲಾನಂತರದಲ್ಲಿ ಪ್ರೀತಿ ಆಗಾಗ ಕಮ್ಮಿ ಆಗಬಹುದು, ಆದರೆ ಪರಸ್ಪರ ಇಟ್ಟುಕೊಂಡಿರುವ ಗೌರವ ಮತ್ತು ಮರ್ಯಾದೆ ಎಂದಿಗೂ ಕಮ್ಮಿ ಆಗಬಾರದು. ಮುಖ್ಯವಾಗಿ ಪುರುಷ ತನ್ನ ಪತ್ನಿಗೆ ಸೂಕ್ತ ಗೌರವ ಕೊಡಬೇಕು. .ನಿಮ್ಮ ಮಕ್ಕಳ ತಾಯಿಯನ್ನು ಗೌರವಿಸುವುದು ಕೇವಲ ಅತ್ಯಗತ್ಯವಲ್ಲ, ಅದು ಸಂಸಾರದ ಅಡಿಪಾಯವಾಗಿದೆ. ಈ ಗೌರವ ನೀಡದ ವ್ಯಕ್ತಿ ಸಮಾಜದಲ್ಲಿ ಇತರರ ಗೌರವವನ್ನು ಪಡೆಯಲು ಅಥವಾ ಜೀವನದಲ್ಲಿ ನಿಜವಾಗಿಯೂ ಅಭಿವೃದ್ಧಿ ಹೊಂದಲು ಸಾಧ್ಯವೇ ಇಲ್ಲ.” ಎಂದಿದ್ದಾರೆ

ವಿಧುರಾನದರೆ ಆನಂದವೇ ಇಲ್ಲವಾದಂತೆ!
“ನಿಮ್ಮೊಂದಿಗೆ ಕಷ್ಟ ಸುಖದಲ್ಲಿ ಜೊತೆಯಾಗಿ ನಿಂತವರನ್ನು ಗೌರವಿಸುವುದರಲ್ಲಿ ಮತ್ತು ನಿಮ್ಮ ಜಗತ್ತನ್ನು ರೂಪಿಸುವ ಕುಟುಂಬವನ್ನು ಪಾಲಿಸುವುದರಲ್ಲಿ ನಿಜವಾದ ಶಕ್ತಿ ಅಡಗಿದೆ. ಗೌರವ ಎನ್ನುವುದು ಮೊದಲು ಮನೆಯಲ್ಲಿ ಇರಬೇಕು. ಈ ಮೂಲಭೂತ ವಿಷಯವನ್ನು ಮರೆತ ವ್ಯಕ್ತಿ, ಪ್ರೀತಿಗಿಂತ ದೊಡ್ಡದಾದ ಬಂಧವನ್ನು ಹಾಗೂ ಜೀವನದ ನಿಜವಾದ ಆನಂದವನ್ನು ಕಳೆದುಕೊಂಡಂತೆ,” ಎಂದು ಖುಷ್ಬೂ ಭಾವುಕರಾಗಿ ಬರೆದುಕೊಂಡಿದ್ದಾರೆ.

ಜಯಂ ರವಿಗೆ ಕಿವಿಮಾತು- ನೆಟ್ಟಿಗರ ಕಮೆಂಟ್ಸ್ ಹಾವಳಿ!
ಖುಷ್ಬೂ ಸುಂದರ್ ಅವರು ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ತಮಿಳು ನಟ ಜಯಂ ರವಿ ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಇತ್ತೀಚಿನ ಅವರ ಡಿವೋರ್ಸ್ ವಿವಾದವನ್ನು ಮನಸ್ಸಿನಲ್ಲಿಟ್ಟುಕೊಂಡೇ ಖುಷ್ಬೂ ಈ ಪೋಸ್ಟ್ ಮಾಡಿದ್ದಾರೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಆರತಿ ಅವರನ್ನು ಬಿಟ್ಟು ಕೆನಿಶಾ ಜೊತೆ ಜಯಂ ರವಿ ಹೆಸರು ಕೇಳಿಬರುತ್ತಿರುವುದಕ್ಕೆ ಬೇಸರಗೊಂಡು, ಗಂಡ-ಹೆಂಡತಿ ಅಂದಮೇಲೆ ಹೇಗಿರಬೇಕು ಎಂದು ಹಿರಿಯ ನಟಿಯ ಸ್ಥಾನದಲ್ಲಿ ನಿಂತು ಖುಷ್ಬೂ ಪರೋಕ್ಷವಾಗಿ ಜಯಂ ರವಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನುವುದು ನೆಟ್ಟಿಗರ ವಾದವಾಗಿದೆ.

ಒಟ್ಟಿನಲ್ಲಿ, ಯಾರ ಹೆಸರನ್ನೂ ಪ್ರಸ್ತಾಪಿಸದೆ ಖುಷ್ಬೂ ನೀಡಿರುವ ಈ ಕೌಟುಂಬಿಕ ಸಂದೇಶ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವೈವಾಹಿಕ ಜೀವನದಲ್ಲಿ ‘ಗೌರವ’ದ ಮಹತ್ವದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

#FreedomTV #KushbooSundar #JayamRavi #AratiRavi #JayamRaviDivorce #KenishaaFrancis #KollywoodNews #RelationshipGoals #KushbooPost #TrendingNews #CinemaUpdates #FamilyValues #InstagramPost

Comments (0)

Your email address will not be published. Required fields are marked *

Back to top button