Tamil naduಮನರಂಜನೆ

ನಿರ್ಮಾಪಕ ಕೆ.ರಾಜನ್ ಅಂತ್ಯ- ಅಡ್ಯಾರ್ ನದಿಗೆ ಹಾರಿ ಆತ್ಮಹತ್ಯೆ!

Film Producer K.Rajan suicide in Adyar River

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ,ನಟ ಹಾಗೂ ನಿರ್ದೇಶಕ ಕೆ. ರಾಜನ್ (85) ಅವರು ಅನಿರೀಕ್ಷಿತವಾಗಿ ನಿಧನರಾಗಿದ್ದಾರೆ. ಭಾನುವಾರ ಚೆನ್ನೈನ ಅಡ್ಯಾರ್ ನದಿಗೆ ಹಾರಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ಆಘಾತ ತಂದಿದೆ.

ಏಕಾಂಗಿ ಜೀವನ @ ಹೋಟೆಲ್!

ಪೊಲೀಸ್ ಮೂಲಗಳ ಪ್ರಕಾರ, ಚೆನ್ನೈನ ಅಡ್ಯಾರ್ ಪ್ರದೇಶದ ಖಾಸಗಿ ಹೋಟೆಲ್‌ನಲ್ಲಿ ಒಬ್ಬರೇ ವಾಸವಾಗಿದ್ದ ಕೆ. ರಾಜನ್ ಅವರು, ಭಾನುವಾರ ಹೋಟೆಲ್‌ಗೆ ಮರಳುವ ವೇಳೆ ಈ ನಿರ್ಧಾರ ಕೈಗೊಂಡಿದ್ದಾರೆ. ಸೇತುವೆ ಬಳಿ ವಾಹನ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿ, ಕೂಡಲೇ ಕೆಳಗಿಳಿದು ನದಿಗೆ ಹಾರಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಸದ್ಯ ಮೃತದೇಹವನ್ನು ರಾಯಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಪ್ರಗತಿಯ ಹಂತದಲ್ಲಿದೆ.


ಕೆ. ರಾಜನ್ ಸಿನಿ ಪಯಣ

ಕೆ.ರಾಜನ್ ನಿರ್ಮಾಪಕ, ನಿರ್ದೇಶಕ, ಬರಹಗಾರ ಹಾಗೂ ನಟರಾಗಿ ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. 1983ರಲ್ಲಿ ‘ಬ್ರಹ್ಮಚಾರಿಗಳ್’ ಚಲನಚಿತ್ರದ ಮೂಲಕ ಕೆ.ರಾಜನ್ ರವರು ನಿರ್ಮಾಪಕರಾದರು. ಇವರ ನಿರ್ಮಾಣದ ಇತರೆ ಚಿತ್ರಗಳು ಡಬಲ್ಸ್, ಅವಳ್ ಪಾವಂ, ನಿನೈಕ್ಕಾದ ನಾಳಿಲ್ಲೈ ಆಗಿವೆ. ಇವರು ನಮ್ಮ ಊರು ಮಾರಿಯಮ್ಮ ಹಾಗೂ ಉಣರ್ಚಿಗಳ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ನಟನಾಗಿಯೂ ತಮ್ಮ ಛಾಪನ್ನು ಮೂಡಿಸಿದ್ದರು. ಇವರ ದಾರುಣ ಅಂತ್ಯ ತಮಿಳು ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ.

ನಟಿ ಕೀರ್ತಿ ಸುರೇಶ್ ಸಂತಾಪ- ಕೆ. ರಾಜನ್ ಅವರ ಅಗಲಿಕೆಗೆ ನಟಿ ಕೀರ್ತಿ ಸುರೇಶ್ ತೀವ್ರ ಸಂತಾಪ ಸೂಚಿಸಿದ್ದಾರೆ. ‘ಪಾಂಬು ಸಾಟ್ಟೈ ಚಿತ್ರದಲ್ಲಿ ಕೀರ್ತಿ ಸುರೇಶ್ ರವರೊಂದಿಗೆ ಇವರು ನಟಿಸಿದ್ದರು. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಾಜನ್ ಅವರ ಫೋಟೋ ಹಂಚಿಕೊಂಡಿರುವ ಅವರು, ಭಾವಪೂರ್ಣ ನಮನ ಸಲ್ಲಿಸಿದ್ದಾರೆ. ಇವರ ಜೊತೆಗೆ ಕಾಲಿವುಡ್‌ನ ಅನೇಕ ಗಣ್ಯರು ಹಿರಿಯ ಜೀವದ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಈ ದುರ್ಮರಣ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೆ. ರಾಜನ್ ಅವರು ಕೇವಲ ನಿರ್ಮಾಪಕರಾಗಿ ಮಾತ್ರವಲ್ಲದೆ, ಚಿತ್ರರಂಗದ ಸಮಸ್ಯೆಗಳ ಬಗ್ಗೆ ನೇರವಾಗಿ ಮಾತನಾಡುತ್ತಿದ್ದ ಧೀಮಂತ ವ್ಯಕ್ತಿಯಾಗಿದ್ದರು. ಅವರ ಈ ನಿಗೂಢ ಅಂತ್ಯ ಚಿತ್ರರಂಗದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

#FreedomTV #KRajan #TamilCinema #Kollywood #BreakingNews #KeerthySuresh #ChennaiNews #ProducerKRajan #RIPKRajan #TamilMovies #AdyarRiver #KollywoodUpdates #Tuniwu #Bakkiyaraj #SuddenDemise

Comments (0)

Your email address will not be published. Required fields are marked *

Back to top button