Tamil nadu

ನನ್ನ ಗರ್ಭಪಾತಕ್ಕೆ CM ವಿಜಯ್ ಕಾರಣ – ಕಣ್ಣೀರು ಹಾಕಿದ ಜೂಲಿ

bigboss fame julie blames TVK and vijay for abortion

ಚೆನ್ನೈ: ತಮಿಳುನಾಡು ರಾಜಕೀಯ ಹಾಗೂ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸು ಶಾಕಿಂಗ್ ಹೇಳಿಕೆಯೊಂದನ್ನು ಬಿಗ್‌ಬಾಸ್ ಖ್ಯಾತಿಯ ನಟಿ, ಮಾಜಿ ನರ್ಸ್ ಮಾರಿಯಾ ಜೂಲಿ ನೀಡಿದ್ದಾರೆ. ತಮಗೆ ಇತ್ತೀಚೆಗೆ ಆದ ಗರ್ಭಪಾತಕ್ಕೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮುಖ್ಯಸ್ಥ ದಳಪತಿ ಜೋಸೆಫ್ ವಿಜಯ್ ಅವರ ಬೆಂಬಲಿಗರೇ ನೇರ ಕಾರಣ ಎಂದು ಜೂಲಿ ಗಂಭೀರ ಆರೋಪ ಮಾಡಿದ್ದಾರೆ. ಚೆನ್ನೈನಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕುತ್ತಾ ತಮ್ಮ ನೋವನ್ನು ತೋಡಿಕೊಂಡ ನಟಿ, ಆನ್‌ಲೈನ್ ಕಿರುಕುಳ ಹಾಗೂ ತೀವ್ರ ಮಾನಸಿಕ ಯಾತನೆಯೇ ತಮ್ಮ ಮೊದಲ ಮಗುವಿನ ಸಾವಿಗೆ ಕಾರಣವಾಯಿತು ಎಂದು ಬಹಿರಂಗಪಡಿಸಿದ್ದಾರೆ.

ಆನ್‌ಲೈನ್ ಟ್ರೋಲಿಂಗ್ – ಮಾನಸಿಕ ಹಿಂಸೆ


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರಿಯಾ ಜೂಲಿ, “ನನಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತು. ನಾವು ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೆವು. ಆದರೆ ಟಿವಿಎಫ್ (TVK) ಪಕ್ಷದ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿದ್ದಾಗಲೂ ಈ ಆನ್‌ಲೈನ್ ಕಿರುಕುಳ ಮಿತಿಮೀರಿತ್ತು. ಇದರಿಂದ ಉಂಟಾದ ತೀವ್ರ ಮಾನಸಿಕ ಯಾತನೆಯಿಂದಾಗಿ ನಾನು ನನ್ನ ಮಗುವನ್ನು ಕಳೆದುಕೊಳ್ಳಬೇಕಾಯಿತು” ಎಂದು ಭಾವುಕರಾದರು.

ಪತಿಯ ವಿರುದ್ಧ ಕಿಡ್ನಿ ಹಗರಣದ ಪಿತೂರಿ!
ಕೇವಲ ಆನ್‌ಲೈನ್ ಟ್ರೋಲಿಂಗ್ ಮಾತ್ರವಲ್ಲದೆ, ತಮ್ಮ ಪತಿಯನ್ನು ದ್ವೇಷದ ರಾಜಕಾರಣಕ್ಕೆ ಬಲಿಪಶು ಮಾಡಲಾಗುತ್ತಿದೆ ಎಂದೂ ಜೂಲಿ ಆರೋಪಿಸಿದ್ದಾರೆ. “ನನ್ನ ಪತಿಯ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಅವರನ್ನು ಸುಳ್ಳು 15 ಲಕ್ಷ ರೂಪಾಯಿಗಳ ಮೂತ್ರಪಿಂಡ (ಕಿಡ್ನಿ) ಹಗರಣದಲ್ಲಿ ಸಿಲುಕಿಸಲಾಗಿದೆ. ಟಿವಿಕೆ ಅಧಿಕಾರಕ್ಕೆ ಬಂದಾಗಿನಿಂದ ನನಗೆ ನೋಟಿಸ್ ಕಳುಹಿಸಿ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಇದರ ಹಿಂದೆ ಟಿವಿಕೆ ಬೆಂಬಲಿಗರು ಮತ್ತು ವಕೀಲರ ಕೈವಾಡವಿದೆ” ಎಂದು ಅವರು ದೂರಿದ್ದಾರೆ.

ಎಂಟು ಜನರ ವಿರುದ್ಧ ಪೊಲೀಸ್ ದೂರು
ಈ ನಿರಂತರ ಕಿರುಕುಳದ ವಿರುದ್ಧ ತಾವು ಸುಮ್ಮನೆ ಕೂತಿಲ್ಲ ಎಂದು ಸ್ಪಷ್ಟಪಡಿಸಿದ ನಟಿ, ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಕಿರುಕುಳ ನೀಡಿದ ಸುಮಾರು ಎಂಟು ಜನರ ವಿರುದ್ಧ ಅಧಿಕೃತವಾಗಿ ಪೊಲೀಸ್ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ತಮಗೆ ನ್ಯಾಯ ಬೇಕು ಮತ್ತು ತಮ್ಮ ಮೇಲಾಗುತ್ತಿರುವ ಅವಹೇಳನಕಾರಿ ನಿಂದನೆಗಳು ನಿಲ್ಲಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ಬೆಂಬಲಿಗರ ವಿರುದ್ಧ ಕೇಳಿಬಂದಿರುವ ಈ ಗಂಭೀರ ಗರ್ಭಪಾತದ ಆರೋಪ ಈಗ ಇಡೀ ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮುಖ್ಯಮಂತ್ರಿ ಕಚೇರಿಯಾಗಲಿ ಅಥವಾ ಟಿವಿಕೆ ಪಕ್ಷದ ಹಿರಿಯ ನಾಯಕರಾಗಲಿ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

#MariaJuliana #Julie #ThalapathyVijay #TVK #TamilNaduNews #BreakingNews #BiggBossJulie #Controversy #OnlineTrolling #FreedomTVKannada #PoliticalSensation #KollywoodNews

Comments (0)

Your email address will not be published. Required fields are marked *

Back to top button