ಪ್ರಮಾಣ ವಚನ ಕಾಂಗ್ರೆಸ್ ಶಾಸಕನಿಗೆ ಬುದ್ಧಿ ಹೇಳಿದ ಗವರ್ನರ್! ಸಚಿವರ ತಪ್ಪೇನು?
Congress MLA Rajesh kumar oath ceremony in TN - Governer advices

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಒಂದು ವಿನೂತನ ಘಟನೆಯೊಂದು ನಡೆದಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಂದು ನಡೆದಿದ್ದು,ಈ ವೇಳೆ ನಡೆದ ಆಸಕ್ತಿಕರ ಘಟನೆ ಈಗ ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ಶಾಸಕರೊಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮಾಡಿದ ಎಡವಟ್ಟಿಗೆ ರಾಜ್ಯಪಾಲರು ವೇದಿಕೆಯಲ್ಲೇ ತಿದ್ದಿ,ಬುದ್ಧಿ ಹೇಳಿದ್ದಾರೆ

ಆ ಘಟನೆಯ ಸುತ್ತ! ನೂತನ ಸಚಿವ ಮಾಡಿದ ತಪ್ಪೇನು?
ಕಿಳ್ಳಿಯೂರು ಕ್ಷೇತ್ರದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎಸ್.ರಾಜೇಶ್ ಕುಮಾರ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ವೇದಿಕೆಗೆ ಬಂದರು. ಚೆನ್ನೈನ ಲೋಕ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸುತ್ತಿದ್ದರು.ಪ್ರಮಾಣ ವಚನ ಸ್ವೀಕರಿಸುವ ವೇಳೆ ರಾಜೇಶ್ ಕುಮಾರ್ ಅವರು ಇದ್ದಕ್ಕಿದ್ದಂತೆ ತಮ್ಮ ಪಕ್ಷದ ನಾಯಕರಾದ ಕಾಮರಾಜ್, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿ, ಹೊಗಳಲು ಪ್ರಾರಂಭಿಸಿದರು.ಕೂಡಲೆ ಮಧ್ಯಪ್ರವೇಶಿಸಿದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು, “ಇದು ಪ್ರಮಾಣವಚನ ಸ್ವೀಕಾರ ಸಮಾರಂಭ. ಈ ವಾಕ್ಯಗಳು ನಿಮ್ಮ ಪ್ರಮಾಣ ವಚನದ ಭಾಗವಲ್ಲ. ನಿಮಗೆ ನೀಡಲಾದ ಲಿಖಿತ ಪ್ರಮಾಣ ವಚನವನ್ನು ಮಾತ್ರ ಓದಿ,” ಎಂದು ಕಟ್ಟುನಿಟ್ಟಿನ ಸಲಹೆ ನೀಡಿದರು.
ರಾಜ್ಯಪಾಲರು ಟಾಂಗ್ ನೀಡುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ತಕ್ಷಣವೇ ಸಚಿವ ರಾಜೇಶ್ ಕುಮಾರ್ ಅವರನ್ನು ಸಂಪರ್ಕಿಸಿ ಅವರ ಮುಂದೆ ಇರಿಸಲಾಗಿದ್ದ ಲಿಖಿತ ಪ್ರತಿಯನ್ನು ತೋರಿಸಿದರು.ತದನಂತರ ನೂತನ ಸಚಿವರು ನಿಗದಿತ ಪ್ರಮಾಣ ವಚನವನ್ನು ಓದಿ ಮುಗಿಸಿದರು.
60 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರ ಹಂಚಿಕೆ!
ಗುರುವಾರ ಬೆಳಗ್ಗೆ 10 ಗಂಟೆಗೆ ಲೋಕ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಒಟ್ಟು 23 ಶಾಸಕರು ನೂತನ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. 21 ಟಿವಿಕೆ (TVK) ಶಾಸಕರು ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರು ಸಚಿವ ಸಂಪುಟ ಸೇರಿದರು. ಈ ಪ್ರಮಾಣ ವಚನದೊಂದಿಗೆ ಕಾಂಗ್ರೆಸ್ ಪಕ್ಷವು ಸುಮಾರು ಆರು ದಶಕಗಳ (60 ವರ್ಷ) ದೀರ್ಘ ಅವಧಿಯ ನಂತರ ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೊಳ್ಳುತ್ತಿರುವುದು ವಿಶೇಷ.ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಐಎಡಿಎಂಕೆಯನ್ನು (AIADMK) ಸಂಪೂರ್ಣವಾಗಿ ಹೊರಗಿಡುವ ಮೂಲಕ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹೊಸ ರಾಜಕೀಯ ದಿಕ್ಸೂಚಿ ನೀಡಿದ್ದಾರೆ.
ಒಟ್ಟಾರೆಯಾಗಿ, ತಮಿಳುನಾಡಿನಲ್ಲಿ ಹೊಸ ಮೈತ್ರಿ ಸರ್ಕಾರದ ಆಡಳಿತ ಆರಂಭವಾಗಿದ್ದರೂ, ಮೊದಲ ದಿನವೇ ಕಾಂಗ್ರೆಸ್ ಸಚಿವರ ಅತಿರೇಕದ ವರ್ತನೆಗೆ ಗವರ್ನರ್ ಕ್ಲಾಸ್ ತಗೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
#FreedomTV #TamilNaduPolitics #VijayCabinetExpansion #GovernorRajendraArlekar #CongressMLA #RajeshKumar #TVKGovernment #VijayCabinet #OathTakingCeremony #ChennaiNews #PoliticalDrama #RahulGandhi #KannadaNews #NationalPolitics




