ಮನರಂಜನೆ

ಬಾಲಿವುಡ್‌ನಿಂದ ಬ್ಯಾನ್ ಆದ ರಣವೀರ್ ಸಿಂಗ್!

Ranveer singh ban from Bollywood

ಮುಂಬೈ: ಬಾಲಿವುಡ್ ಅಂಗಳದಲ್ಲಿ ಈಗ ‘ಡಾನ್ 3’ ಸಿನಿಮಾದ ವಿವಾದದ್ದೇ ಸದ್ದು. ಸದ್ದು ಟೈಮ್ ಬಾಂಬಾಗಿ ಸಿಡಿದಿದೆ. ಖ್ಯಾತ ನಟ ರಣವೀರ್ ಸಿಂಗ್ ಅವರ ವಿರುದ್ಧ ಪಾಶ್ಚಾತ್ಯ ಭಾರತೀಯ ಸಿನಿ ಉದ್ಯೋಗಿಗಳ ಒಕ್ಕೂಟ (FWICE) ನಿನ್ನೆ ಬ್ಯಾನ್ ಮಾಡಿದೆ. ಈ ನಿರ್ಣಯದಂತೆ ಒಕ್ಕೂಟದ ಯಾವುದೇ ನೌಕರರು ರಣವೀರ್ ಸಿಂಗ್ ಅವರ ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟ ಆದೇಶವನ್ನು ಹೊರಡಿಸಿದೆ. ಈ ದೊಡ್ಡ ಮಟ್ಟದ ಬ್ಯಾನ್ ಕುರಿತು ನಟ ರಣವೀರ್ ಸಿಂಗ್ ರವರ ಅಧಿಕೃತ ವಕ್ತಾರರು ಮೊದಲ ಬಾರಿಗೆ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ.

ಮೌನವೇ ನನ್ನ ಆಯುಧ-ರಣವೀರ್ ಸಿಂಗ್!


ಬ್ಯಾನ್ ಆದೇಶ ಹೊರಬೀಳುತ್ತಿದ್ದಂತೆ ರಣವೀರ್ ಸಿಂಗ್ ಅವರ ವಕ್ತಾರರು ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. “ರಣವೀರ್ ಸಿಂಗ್ ಅವರು ಬಾಲಿವುಡ್ ಚಿತ್ರರಂಗ ಹಾಗೂ ‘ಡಾನ್’ ಸಿನಿಮಾದ ಫ್ರಾಂಚೈಸಿಗೆ ಸಂಬಂಧಿಸಿದ ಪ್ರತಿಯೊಬ್ಬರ ಮೇಲೂ ಅತ್ಯುನ್ನತ ಗೌರವವನ್ನು ಹೊಂದಿದ್ದಾರೆ. ಡಾನ್ 3 ಸಿನಿಮಾ ಸುತ್ತ ಇತ್ತೀಚಿಗೆ ಎದ್ದಿರುವ ವಿವಾದಗಳ ಬಗ್ಗೆ ರಣವೀರ್ ಮೌನವಾಗಿದ್ದಾರೆ. ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಹೋಲಿಕೆಗಳನ್ನು ಘನತೆ, ಪ್ರಬುದ್ಧತೆ ಮತ್ತು ಪರಸ್ಪರ ಗೌರವದಿಂದ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಈ ವದಂತಿಗಳಿಗೆ ಸಾರ್ವಜನಿಕ ಪ್ರತಿಕ್ರಿಯೆ ಕೊಡುವುದು ಅನಗತ್ಯ ಎಂದಿದ್ದಾರೆ. ತಮ್ಮದೇನಿದ್ದರೂ ಕಾಯಕವೇ ಕೈಲಾಸ ಎಂದಿದ್ದಾರೆ.”

“ತಾವು ನಟಿಸುವ ಪ್ರತಿ ಚಿತ್ರಕ್ಕೂ ಗೌರವ ಸಲ್ಲಿಸುವ ರಣವೀರ್, ‘ಡಾನ್’ ಫ್ರಾಂಚೈಸಿಯ ಯಶಸ್ಸಿಗೆ ಪ್ರಾಮಾಣಿಕವಾಗಿ ಆಶಿಸುತ್ತಿದ್ದಾರೆ. ಬ್ಯಾನ್ ಸಂದರ್ಭದಲ್ಲೂ ಸಂಯಮದಿಂದ ಇರುವುದೇ ಅವರ ಪ್ರಜ್ಞಾಪೂರ್ವಕ ನಿರ್ಧಾರ” ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಡಾನ್ 3 – ರಣವೀರ್ ನಿಷೇಧಿಸಿದ್ದೇಕೆ?
ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ಆರೋಪಿಸಲಾಗಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಏಪ್ರಿಲ್ 11, 2026 ರಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ (IFTDA) ಮುಂದೆ ದೂರು ನೀಡಿದ್ದರು. ಬಳಿಕ ಈ ದೂರು ಪ್ರಕರಣ FWICE ಒಕ್ಕೂಟದ ಕೈ ಸೇರಿತ್ತು. ಒಕ್ಕೂಟವು ರಣವೀರ್ ಸಿಂಗ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ರಣವೀರ್ ಒಕ್ಕೂಟದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ, ಇದನ್ನು ಗಂಭೀರವಾಗಿ ಪರಿಗಣಿಸಿದ FWICE, ತನ್ನ 38 ವಿಭಾಗಗಳ ಯಾವುದೇ ಕಾರ್ಮಿಕರು (ಲೈಟ್ ಬಾಯ್ಸ್, ಸ್ಪಾಟ್ ಬಾಯ್ಸ್, ಕ್ಯಾಮೆರಾಮನ್ ಇತ್ಯಾದಿ ಸೇರಿ) ರಣವೀರ್ ಸಿನಿಮಾಗಳಲ್ಲಿ ಭಾಗಿಯಾಗಬಾರದು ಎಂಬ ನಿಷೇಧವನ್ನು ಹೇರಿದೆ.
ಬಾಲಿವುಡ್ ಸೂಪರ್‌ಸ್ಟಾರ್ ವಿರುದ್ಧ ಇಡೀ ಸಿನಿ ಕಾರ್ಮಿಕರ ಒಕ್ಕೂಟ ತಿರುಗಿಬಿದ್ದಿರುವುದು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ರಣವೀರ್ ಸಿಂಗ್ ಸಂಯಮದ ಹಾದಿ ಹಿಡಿದಿದ್ದರೂ, ಈ ವಿವಾದ ಅವರ ಮುಂಬರುವ ಬಿಗ್ ಬಜೆಟ್ ಸಿನಿಮಾಗಳ ಶೂಟಿಂಗ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು.

#FreedomTV #RanveerSingh #FarhanAkhtar #Don3Controversy #FWICEBan #BollywoodNews #RanveerSinghBanned #Don3 #IFTDA #BollywoodUpdates #BreakingNews #EntertainmentNews

Comments (0)

Your email address will not be published. Required fields are marked *

Back to top button