Monday, June 23, 2025
26.3 C
Bengaluru
Google search engine
LIVE
ಮನೆHealthಬೈರತಿಯ ನಕಲಿ ಡಾಕ್ಟರ್ ಪ್ರಮೋದ್​ ಎಸ್ಕೇಪ್

ಬೈರತಿಯ ನಕಲಿ ಡಾಕ್ಟರ್ ಪ್ರಮೋದ್​ ಎಸ್ಕೇಪ್

ಬೆಂಗಳೂರಿನ ಭೈರತಿಯಲ್ಲಿ ಸಂಜೀವಿನಿ ಹೆಲ್ತ್ ಕ್ಲಿನಿಕ್ ಇಟ್ಟುಕೊಂಡಿರುವ ನಕಲಿ ವೈದ್ಯ ಡಾ ಪ್ರಮೋದ್​ ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾನೆ.

ಎಂಬಿಬಿಎಸ್ ಮಾಡಿರುವ ಡಾಕ್ಟರ್​ ಒಬ್ಬರ ಹೆಸರಲ್ಲಿ ಕೆಪಿಎಂಇ ಸರ್ಟಿಫಿಕೇಟ್​ ಪಡೆದ ವಂಚಕ ಪ್ರಮೋದ್​ ತನ್ನನ್ನು ತಾನು ಡಾಕ್ಟರ್​ ಅಂತ ಪೋಸ್ ಕೊಟ್ಟುಕೊಂಡು ಜನರನ್ನು ಯಾಮಾರಿಸ್ತಿದ್ದಾನೆ.

ಈ ಬಗ್ಗೆ ಮಾಹಿತಿ ಪಡೆದ ನಿಮ್ಮ ಫ್ರೀಡಂ ಟಿವಿ, ನಕಲಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ, ವಿಷಯ ತಿಳಿದ ನಕಲಿ ವೈದ್ಯ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇಡೀ ದಿನ ​ ಕ್ಲಿನಿಕ್ ಗೆ ವಾಪಸ್ ಬಂದಿಲ್ಲ. ಕರೆ ಮಾಡಿದ್ರೆ ಕೀಮೋ ಥೆರಪಿ ಮಾಡ್ತಿದ್ದೀನಿ.. ಯಾರಿಗೋ ಹಾವು ಕಚ್ಚಿದೆ.. ಟ್ರೀಟ್ಮೆಂಟ್​ ಕೊಡ್ತಿದ್ದೀನಿ ಅಂತಾ ಬೊಗಳೆ ಬಿಡ್ತಾನೆ.

ಇಷ್ಟಕ್ಕೂ ಟ್ರೀಟ್ಮೆಂಟ್​ ಕೊಡೋಕೆ ನೀನು ಡಾಕ್ಟರ್ ಅಲ್ಲ.. ಕಾಂಪೌಂಡರ್​ ಕೂಡ ಅಲ್ವಲ್ಲಪ್ಪ ಅಂತ ಕೇಳಿದ್ರೆ, ನಾನು ಹೈ ಲೆವೆಲ್ ಗೆ ಹೋಗ್ಬೇಕಾಗತ್ತೆ ಅಂತ ಮಿನಿಸ್ಟರ್​ ಭೈರತಿ ಸುರೇಶ್​ ಹೆಸರನ್ನು ಡಾಕ್ಟರ್ ಪ್ರಮೋದ್ ಬಳಸ್ತಾನೆ. ಮಿನಿಸ್ಟರ್​ ಹೆಸರೇಳಿ ಬೆದರಿಸಲು ನೋಡಿದ್ದಾನೆ.

ಈ ಬಗ್ಗೆ ಭೈರತಿ ಸುರೇಶ್​ ಪಿಎ ದೇವೇಂದ್ರ ಅವರಿಗೆ ಏನ್ರಿ ನಕಲಿ ಡಾಕ್ಟರ್​ಗೆ ನೀವು ಸಪೋರ್ಟ್​ ಮಾಡ್ತಿದ್ದೀರ ಅಂತ ಕೇಳಿದ್ರೆ, ಅಯ್ಯಯ್ಯೋ ಸಾಹೇಬ್ರು ಯಾಕೆ ಹಂಗೆ ಮಾಡ್ತಾರೆ. ಮನೆಗೆ ಬರ್ತಾರೆ, ಪರಿಚಯ ಇರೋದು ಹೌದು. ಅವರು ನಿಜವಾದ ಡಾಕ್ಟರ್​ ಹೌದೋ ಅಲ್ವೋ ಅಂತ ನಾವು ಚೆಕ್​ ಮಾಡಿಲ್ಲ. ಈಗಲೇ ನಕಲಿ ವೈದ್ಯ ಅಂತಾ ಗೊತಾಗ್ತಿರೋದು ಅಂತಾ ಸ್ಪಷ್ಟನೆ ನೀಡಿದ್ರು.

ಅಸಲಿಯತ್ತು ಏನಪ್ಪ ಅಂದ್ರೆ ಈ ಪ್ರಮೋದ್​ ಮಾಡಿರೋದು ಎಲೆಕ್ಟ್ರೋಪತಿ ಕೋರ್ಸ್​. ಅದು ಎಂಬಿಬಿಎಸ್​ ಅಲ್ಲ. ಜತೆಗೆ ಎಲೆಕ್ಟ್ರೋಪತಿ ನಮ್ಮ ರಾಜ್ಯದಲ್ಲಿ ಬ್ಯಾನ್​ ಆಗಿದೆ. ಆದ್ರೂ, ಎಂಬಿಬಿಎಸ್ ವೈದ್ಯನ ಹೆಸರಲ್ಲಿ ಹಾಡಹಗಲೇ ನೂರಾರು ಜನರಿಗೆ ಮನಸಿಗೆ ಬಂದಂಗೆ ಮೆಡಿಸಿನ್​ ಕೊಡ್ತಿದ್ದಾನೆ ಈ ಫೋರ್ಜರಿ ಪ್ರಮೋದ.

ಯಾರೋ ಡಾ. ಚಂದ್ರಮೋಹನ್​ ಅನ್ನೋರ ಹೆಸರಲ್ಲಿ ವಂಚಕ ಪ್ರಮೋದ್ ಸರ್ಟಿಫಿಕೇಟ್​ ಪಡೆದಿದ್ದಾನೆ. ಆದರೆ ಆ ಡಾಕ್ಟರ್ ಚಂದ್ರಮೋಹನ್​ ಕ್ಲಿನಿಕ್ ಗೆ ಬರೋದೆ ಇಲ್ಲ. ಅವನ ಹೆಸರಲ್ಲಿ ನಕಲಿ ಡಾಕ್ಟರ್​ ಪ್ರಮೋದನ ಜನರ ಜೀವದ ಜೊತೆ ಆಟ ಆಡ್ತಿದ್ದಾನೆ. ಇಂಥವರನ್ನು ಆರೋಗ್ಯ ಸಚಿವರು ಮಟ್ಟ ಹಾಕಬೇಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments