Sunday, February 15, 2026
20 C
Bengaluru
Google search engine
LIVE
ಮನೆ#Exclusive NewsTop Newsತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾ ದಾಳಿ

ತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾ ದಾಳಿ

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭಾರಿ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಏಕಕಾಲಕ್ಕೆ ತುಮಕೂರು ಜಿಲ್ಲೆಯ 11 ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ತುಮಕೂರು, ಗುಬ್ಬಿ, ಕುಣಿಗಲ್, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಪಾವಗಡ, ಕೊರಟಗೆರೆ, ಮಧುಗಿರಿ, ಶಿರಾ ತಾಲೂಕಿನ ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ರೇಡ್ ಮಾಡಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ತುಮಕೂರು ಲೋಕಾಯುಕ್ತ ಎಸ್ ಪಿ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ ಈ ದಾಳಿಯನ್ನು ಸಂಘಟಿಸಲಾಗಿದೆ.

ವಾರದ ಹಿಂದಷ್ಟೇ ತುಮಕೂರು ಜಿಲ್ಲೆಯ 10 ತಹಸಿಲ್ದಾರ್ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ಈ ಬೆನ್ನಲ್ಲೆ ಜಿಲ್ಲೆಯ 11 ಸಬ್ ರಿಜಿಸ್ಟರ್ ಕಚೇರಿಗಳ ಮೇಲೆ ಲೋಕಾಯುಕ್ತ‌ ದಾಳಿ ನಡೆದಿದೆ.

ಖಾತೆ ಬದಲಾವಣೆ, ಜಮೀನು ನೋಂದಣಿಗೆ ಎಲ್ಲಾ ಕಡೆ ಬ್ರೋಕರ್ ಗಳ ಹಾವಳಿ ಮಿತಿ ಮೀರಿದೆ. ಬ್ರೋಕರ್ ಗಳನ್ನು ಮುಂದಿಟ್ಟುಕೊಂಡು ಸಬ್ ರಿಜಿಸ್ಟ್ರಾರ್ ಗಳೇ ದಂಧೆ ನಡೆಸ್ತಿರುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments