ರಾಜ್ಯವಾಣಿಜ್ಯ

ರಾಜ್ಯದಲ್ಲಿ ಮತ್ತೆ ಬೆಲೆ ಏರಿಕೆಯ ಬಿಸಿ – ಮಸಾಲೆ ಪದಾರ್ಥಗಳ ದರ ಭಾರಿ ದುಬಾರಿ!

Price hikes are on the rise again in the state - prices of spices are skyrocketing!

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇತ್ತೀಚೆಗಷ್ಟೇ ಅಕ್ಕಿ, ಹಾಲು ಮತ್ತು ತುಪ್ಪದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ಈಗ ಮಸಾಲೆ ಪದಾರ್ಥಗಳ ದರ ಏರಿಕೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ಅಡುಗೆ ಮನೆಯ ಅತ್ಯಗತ್ಯ ಪದಾರ್ಥಗಳಾದ ಮೆಣಸಿನಕಾಯಿ, ಜೀರಿಗೆ, ಏಲಕ್ಕಿ, ಧನಿಯಾ ಸೇರಿದಂತೆ ಬಹುತೇಕ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.

ಬೆಳೆ ಕೊರತೆ, ವಾತಾವರಣದ ವೈಪರೀತ್ಯ ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು ಈ ಬೆಲೆ ಏರಿಕೆಯಾಗಿದ್ದು, ದಿಢೀರ್ ಬೆಲೆ ಏರಿಕೆಯಿಂದಾಗಿ ಕೇವಲ ಗೃಹಿಣಿಯರಷ್ಟೇ ಅಲ್ಲದೆ, ಹೋಟೆಲ್ ಹಾಗೂ ಬೇಕರಿ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಮಸಾಲೆ ಪದಾರ್ಥಗಳ ದರ ಹೆಚ್ಚಿರುವುದರಿಂದ ಹೋಟೆಲ್ ಮತ್ತು ಬೇಕರಿಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ.

ಬೆಲೆ ಏರಿಕೆಯ ಹೊಡೆತಕ್ಕೆ ತತ್ತರಿಸಿರುವ ಮಧ್ಯಮ ಹಾಗೂ ಬಡ ವರ್ಗದ ಜನರು, ಮಾರುಕಟ್ಟೆಯಲ್ಲಿ ಮಸಾಲೆ ಪದಾರ್ಥಗಳ ಖರೀದಿ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದಾರೆ.

ಮಸಾಲೆ ಪದಾರ್ಥಗಳ ಹಳೆ ಮತ್ತು ಹೊಸ ದರಗಳ ವಿವರ

  • ಬ್ಯಾಡಗಿ ಮೆಣಸಿನಕಾಯಿ: ಹಳೆ ದರ ₹260 | ಹೊಸ ದರ ₹560
  • ಏಲಕ್ಕಿ: ಹಳೆ ದರ ₹2,200 | ಹೊಸ ದರ ₹3,800
  • ಜೀರಿಗೆ: ಹಳೆ ದರ ₹200 | ಹೊಸ ದರ ₹450
  • ಗುಂಟೂರ್ ಮೆಣಸಿನಕಾಯಿ: ಹಳೆ ದರ ₹160 | ಹೊಸ ದರ ₹300
  • ಧನಿಯಾ: ಹಳೆ ದರ ₹120 | ಹೊಸ ದರ ₹260
  • ಚಕ್ಕೆ: ಹಳೆ ದರ ₹320 | ಹೊಸ ದರ ₹480
  • ಕಾಳು ಮೆಣಸು: ಹಳೆ ದರ ₹680 | ಹೊಸ ದರ ₹880
  • ಬಾದಾಮಿ: ಹಳೆ ದರ ₹880 | ಹೊಸ ದರ ₹1,200
  • ಸಾಸಿವೆ: ಹಳೆ ದರ ₹120 | ಹೊಸ ದರ ₹160
  • ಹುಣಸೆಹಣ್ಣು: ಹಳೆ ದರ ₹140 | ಹೊಸ ದರ ₹160

Comments (0)

Your email address will not be published. Required fields are marked *

Back to top button