DHARWAD

ಬಕ್ರೀದ್ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳ ಆಗ್ರಹ!

during Bakrid stop cow slaughter request given by Hindu organisations

ಧಾರವಾಡ: ಮುಂಬರುವ ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬದ ಸಂದರ್ಭದಲ್ಲಿ ಖುರ್ಬಾನಿ ಹೆಸರಿನಲ್ಲಿ ನಡೆಯುವ ಅಕ್ರಮ ಗೋವುಗಳ ಸಾಗಾಟ ಹಾಗೂ ಗೋಹತ್ಯೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಆಗ್ರಹಿಸಿ ಧಾರವಾಡದ ವಿವಿಧ ಹಿಂದೂ ಪರ ಹಾಗೂ ಗೋ ರಕ್ಷಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಜಂಟಿಯಾಗಿ ಬೃಹತ್ ಮನವಿ ಪತ್ರ ಸಲ್ಲಿಸಿವೆ.ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ವಿಶ್ವ ಹಿಂದೂ ಪರಿಷದ್ (VHP), ಬಜರಂಗದಳ ಹಾಗೂ ಗೋ ರಕ್ಷಕ್ ಕರ್ನಾಟಕ ಉತ್ತರ ಪ್ರಾಂತ ಸಂಘಟನೆಯ ಪದಾಧಿಕಾರಿಗಳು,ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ತಮ್ಮ ಬೇಡಿಕೆಗಳ ಪಟ್ಟಿಯನ್ನು ಹಸ್ತಾಂತರಿಸಿದರು.

ಹಿಂದುಗಳ ಭಾವನೆಗೆ ಧಕ್ಕೆ ಬೇಡ!


ರಾಜ್ಯದಲ್ಲಿ ಈಗಾಗಲೇ 2020ರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂಬುದನ್ನು ನೆನಪಿಸಿದ ಪ್ರತಿಭಟನಾಕಾರರು, ಬಕ್ರೀದ್ ಹಬ್ಬವನ್ನು ಕೊಂಡಾಡುವ ನೆಪದಲ್ಲಿ ಸಾವಿರಾರು ಗೋವುಗಳ ಹತ್ಯೆಯಾಗುತ್ತಿದೆ.”ಹಿಂದೂ ಧರ್ಮದಲ್ಲಿ ಗೋವಿಗೆ ಅತ್ಯುನ್ನತ ಸ್ಥಾನವಿದೆ. ನಾವು ಗೋವಿನಲ್ಲಿ 33 ಕೋಟಿ ದೇವ-ದೇವತೆಗಳನ್ನು ಕಂಡು ಪೂಜಿಸುತ್ತೇವೆ. ಹೀಗಾಗಿ, ಹಬ್ಬದ ನೆಪದಲ್ಲಿ ಗೋಹತ್ಯೆ ನಡೆಸಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಪರಮ ಜವಾಬ್ದಾರಿಯಾಗಿದೆ.” ಹಾಗಾಗಿ ಜಿಲ್ಲೆಯ ಯಾವುದೇ ಭಾಗದಲ್ಲಿ ಕಾನೂನು ಉಲ್ಲಂಘಿಸಿ ಗೋವುಗಳನ್ನು ವಧೆ ಮಾಡಬಾರದು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತದ ಮುಂದೆ ಹಿಂದೂ ಸಂಘಟನೆಗಳ ಪ್ರಮುಖ ಬೇಡಿಕೆಗಳು
ವಿಶೇಷ ಟಾಸ್ಕ್ ಫೋರ್ಸ್ ರಚನೆ: ಜಿಲ್ಲೆಯಲ್ಲಿ ಅಕ್ರಮ ಗೋವುಗಳ ಶೇಖರಣೆ ಮತ್ತು ಸಾಗಾಟವನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆ,ಸಾರಿಗೆ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ವಿಶೇಷ ‘ಟಾಸ್ಕ್ ಫೋರ್ಸ್’ (Task Force) ರಚಿಸಬೇಕು.

ಚೆಕ್ ಪೋಸ್ಟ್‌ಗಳ ಸ್ಥಾಪನೆ: ಜಿಲ್ಲೆಯ ಗಡಿಭಾಗಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ತಕ್ಷಣವೇ ತಪಾಸಣಾ ಕೇಂದ್ರಗಳನ್ನು (Check Posts) ತೆರೆಯುವ ಮೂಲಕ ಅಕ್ರಮ ಜಾನುವಾರು ಸಾಗಣೆಗೆ ಬ್ರೇಕ್ ಹಾಕಬೇಕು.

ಜಾನುವಾರು ಸಂತೆ ರದ್ದು: ಮುನ್ನೆಚ್ಚರಿಕೆ ಕ್ರಮವಾಗಿ ಮೇ 29ರವರೆಗೆ ಧಾರವಾಡ ಜಿಲ್ಲೆಯಾದ್ಯಂತ ನಡೆಯುವ ಎಲ್ಲಾ ರೀತಿಯ ಜಾನುವಾರು ಸಂತೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು.

ಕಠಿಣ ಕಾನೂನು ಕ್ರಮ: ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೀರಿ ಕಾನೂನು ಕೈಗೆತ್ತಿಕೊಳ್ಳುವ ಹಾಗೂ ಅಕ್ರಮ ದಂಧೆಯಲ್ಲಿ ತೊಡಗುವ ಗೋಹತ್ಯೆಕೋರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಈ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಯೋಜಕ ಶಿವಾನಂದ ಸತ್ತಿಗೇರಿ, ಜಿಲ್ಲಾಧ್ಯಕ್ಷ ಮಹೇಶ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಅನುದೀಪ ಕುಲಕರ್ಣಿ, ಜಿಲ್ಲಾ ಸಂಯೋಜಕ ಸಿದ್ದು ಹಿರೇಮಠ, ಪ್ರಮುಖರಾದ ಮಂಜುನಾಥ ಶಿಗ್ಗಾವಿ, ಗುರುಶಾಂತ ಹಿರೇಮಠ, ಧ್ರುವ ಉಪ್ಪಾರ, ಉದಯ ಸೇರಿದಂತೆ ನೂರಾರು ಗೋ ರಕ್ಷಕರು ಉಪಸ್ಥಿತರಿದ್ದರು.

#FreedomTV #DharwadNews #AntiCowSlaughter #Bakrid2026 #VHP #BajrangDhal #GoRakshak #DCDharwad #LawAndOrder #AnimalWelfare #KarnatakaGovernment #CheckPostAlert #KannadaNews #DistrictAdministration

Comments (0)

Your email address will not be published. Required fields are marked *

Back to top button