Andhra Pradeshರಾಜಕೀಯ

‘ನನಗೆ ವಿಜಯ್ ಕಂಡ್ರೆ ಅಸೂಯೆ’- ಪವನ್ ಕಲ್ಯಾಣ್!

DCM pawan kalyan says I jealous on CM vijay

ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ನೇರ ನಡೆನುಡಿಯ ಮನುಷ್ಯ. ಅವರು ನೆರೆಯ ತಮಿಳುನಾಡು ನೂತನ ಮುಖ್ಯಮಂತ್ರಿ, ದಳಪತಿ ವಿಜಯ್ ಕುರಿತು ಆಡಿರುವ ಮಾತುಗಳು ಸಖತ್ ವೈರಲ್ ಆಗುತ್ತಿವೆ. “ಸಿಎಂ ವಿಜಯ್ ಅವರನ್ನು ನೋಡಿ ನನಗೆ ವೈಯಕ್ತಿಕವಾಗಿ ಅಸೂಯೆಯಿದೆ” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಕಟೌಟ್ ನಿಲ್ಲಿಸಿ ಸಿಎಂ ಆದ ವಿಜಯ್ – ಕಾಲೆಳೆದ ಪವರ್ ಸ್ಟಾರ್!


ಅಮರಾವತಿಯಲ್ಲಿ ಸೋಮವಾರ ನಡೆದ ತಮ್ಮ ಜನಸೇನಾ ಪಕ್ಷದ ಕಾರ್ಯಕರ್ತರ ಹಾಗೂ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ತಮಿಳುನಾಡು ರಾಜಕೀಯದ ಸದ್ಯದ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದರು. “ನಾನು ಇತ್ತೀಚಿನ ದಿನಗಳಲ್ಲಿ ನೆರೆಯ ತಮಿಳುನಾಡಿನ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅಲ್ಲಿ ಹೊಸದಾಗಿ ಪಕ್ಷ ಕಟ್ಟಿ ಅಧಿಕಾರಕ್ಕೆ ಬಂದಿರುವ ವಿಜಯ್ ತುಂಬಾ ಸುಲಭವಾಗಿ ರಾಜಕೀಯ ಯಶಸ್ಸು ಪಡೆದಿದ್ದಾರೆ. ಇದನ್ನು ನೋಡಿ ನನಗೆ ಸ್ವಲ್ಪ ಅಸೂಯೆ ಕೇವಲ ದೊಡ್ಡ ದೊಡ್ಡ ಕಟೌಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅತಿ ಸುಲಭವಾಗಿ ಚುನಾವಣೆಯಲ್ಲಿ ವಿಜಯ್ ಗೆದ್ದು ಬೀಗಿದ್ದಾರೆ,” ಎಂದು ನಗುತ್ತಾ ಹೇಳಿದರು.

ಪಕ್ಷ ನಿರ್ವಹಣೆ ಬಹಳ ಕಷ್ಟ!
ವಿಜಯ್ ಕಾಲೆಳೆದ ಪವನ್ ಕಲ್ಯಾಣ್, ರಾಜಕಾರಣದ ನೈಜ ಸವಾಲುಗಳ ಬಗ್ಗೆ ಗಂಭೀರವಾಗಿ ಮಾತನಾಡಿದರು. ತಮಿಳುನಾಡು ಮತ್ತು ಆಂಧ್ರಪ್ರದೇಶದ ರಾಜಕೀಯ ಮನಸ್ಥಿತಿಗಳು ತದ್ವಿರುದ್ಧ. “ನಾನು ಕಳೆದ ಹದಿನೈದು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯ ಪಕ್ಷವೊಂದನ್ನು ಕಟ್ಟುವುದು ಮತ್ತು ಮುನ್ನಡೆಸುವುದು ಎಂದರೆ ಲಕ್ಷಾಂತರ ಜನರನ್ನು ಒಂದು ಸಂದೇಶ ನೀಡಿ ಒಟ್ಟುಗೂಡಿಸುವುದು. ಅಂದುಕೊಂಡಷ್ಟು ಸುಲಭವಲ್ಲ” ಎಂದರು. : “ಎಷ್ಟೋ ಸಂದರ್ಭಗಳಲ್ಲಿ ನಮ್ಮ ಸ್ವಂತ ಕುಟುಂಬದ ಸದಸ್ಯರನ್ನೇ ಮನವೊಲಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಅಂತಹುದರಲ್ಲಿ ಒಂದು ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿ, ಇಡೀ ಸಮಾಜವನ್ನು ಪರಿವರ್ತಿಸಲು ಹೊರಟಿರುವುದು ಅತ್ಯಂತ ದೊಡ್ಡ ಸವಾಲಿನ ಕೆಲಸ” ಎಂದು ಬಣ್ಣಿಸಿದರು.ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಅಬ್ಬರ ಇರಬಹುದು. ಆದರೆ ಆಂಧ್ರಪ್ರದೇಶದ ಸದ್ಯದ ಪರಿಸ್ಥಿತಿಗೆ ಮೈತ್ರಿ ಆಧಾರಿತ ರಾಜಕಾರಣ ಮಾತ್ರ ಅರ್ಥಪೂರ್ಣ ಮತ್ತು ಯಶಸ್ವಿ ಸೂತ್ರವಾಗಿದೆ” ಎಂದು ತಮ್ಮ ಕಾರ್ಯಕರ್ತರಿಗೆ ಪವನ್ ಕಲ್ಯಾಣ್ ತಿಳಿಸಿದ್ದರು.

ಭರ್ಜರಿಯಾಗಿ ಜಯಿಸಿದ್ದ ಟಿವಿಕೆ– ನಟನೆಯಿಂದ ಪಾಲಿಟಿಕ್ಸ್ ಗೆ TVk ಪಕ್ಷದೊಂದಿಗೆ ಧುಮುಕಿದ್ದ ವಿಜಯ್, ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಪಕ್ಷ ಸ್ಥಾಪಿಸದ ಕೇವಲ 2 ವರ್ಷದಲ್ಲೇ ತಮಿಳುನಾಡಿನ ಗದ್ದುಗೆ ಏರಿದ ಕೀರ್ತಿ ಜನ ನಾಯಗನ್ ವಿಜಯ್ ಗೆ ಸಲ್ಲುತ್ತದೆ. ಚುನಾವಣೆಯಲ್ಲಿ 108 ಸ್ಥಾನಗಳನ್ನು ಗಳಿಸುವ ಮೂಲಕ ಟಿವಿಕೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅಪ್ಪ ಅಮ್ಮ ಪಕ್ಷಗಳೆಂದೇ ಹೆಸರಾದ ಡಿಎಂಕೆ ಮತ್ತು ಎಐಎಡಿಎಂಕೆಗಳಿಗೆ ಸೋಲಿನ ರುಚಿ ತೋರಿಸಿ ದಶಕಗಳ ಪ್ರಾಬಲ್ಯವನ್ನು ಕೊನೆಗಾಣಿಸಿ ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದರು.

ಕಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಸ್ಟಾರ್ ನಟರಾಗಿದ್ದ ಈ ಉಭಯ ನಾಯಕರು ಈಗ ದಕ್ಷಿಣ ಭಾರತದ ರಾಜಕೀಯ ದ್ರುವ ನಕ್ಷತ್ರಗಳಾಗಿದ್ದಾರೆ. ಒಬ್ಬರು ಆಂಧ್ರದ ಡಿಸಿಎಂ ಮತ್ತೊಬ್ಬರು ತಮಿಳುನಾಡಿನ ಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏನೇ ಆಗಲಿ ತಮಾಷೆಗೆ ಹೇಳಿದ ಪವನ್ ಕಲ್ಯಾಣ್ ಅವರ ಈ ‘ಅಸೂಯೆ’ ಹೇಳಿಕೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

#FreedomTV #PawanKalyan #ThalapathyVijay #AndhraPradesh #TamilNaduPolitics #JanaSena #TVK #VijayCM #AndhraDCM #PawanKalyanSpeech #Amaravati #SouthPolitics #BreakingNews

Comments (0)

Your email address will not be published. Required fields are marked *

Back to top button