bengaluruರಾಜಕೀಯ

ಡಿಕೆಶಿ ಮಧ್ಯರಾತ್ರಿ ರಹಸ್ಯ ಸಭೆ- ಯಾರು ಅಂದರ್ ಯಾರು ಬಾಹರ್?

Midnight meeting in DK house with Chaluvarayaswamy and others

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ‘ಡಿಕೆ ಯುಗ’ ಶುರುವಾಗಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ ತಕ್ಷಣ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಪಟ್ಟಾಭಿಷೇಕ ಫಿಕ್ಸ್ ಆಗಿದೆ. ಬರುವ ಬುಧವಾರ ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ದಟ್ಟವಾಗಿದೆ.ಈ ಬೆನ್ನಲ್ಲೇ ಭಾನುವಾರ ಸಂಜೆ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಅಧಿಕೃತವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ.

ನೇರ ದೆಹಲಿ ಇಂದ ಸದಾಶಿವನಗರಕ್ಕೆ, ಗುಪ್ತ ಸಭೆ!


ಭಾವಿ ಸಿಎಂ ಡಿಕೆ ಶಿವಕುಮಾರ್ ನಡೆಸಿದ ‘ಮಿಡ್‌ನೈಟ್ ಮೀಟಿಂಗ್’ ಈಗ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಹೈಕಮಾಂಡ್ ಭೇಟಿ ಮುಗಿಸಿ ದೆಹಲಿಯಿಂದ ಬೆಂಗಳೂರಿಗೆ ತಡರಾತ್ರಿ ಆಗಮಿಸಿದ ಡಿಕೆಶಿ, ನೇರವಾಗಿ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ಪ್ರಭಾವಿ ನಾಯಕರೊಂದಿಗೆ ಜಂಟಿ ಸಭೆ ನಡೆಸಿದ್ದಾರೆ. ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಗಣಿಗ ರವಿಕುಮಾರ್ ಹಾಗೂ ಕಡಲೂರು ಉದಯ್ ಅವರೊಂದಿಗೆ ಡಿಕೆಶಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಆಪ್ತ ವಲಯದ ನಾಯಕರಾದ ಬೇಳೂರು ಗೋಪಾಲಕೃಷ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಹಾಗೂ ಮೊಹಮ್ಮದ್ ನಲಪಾಡ್ ಅವರೊಂದಿಗೂ ಪ್ರತ್ಯೇಕ ಲೆಕ್ಕಾಚಾರಗಳನ್ನು ನಡೆಸಿದ್ದಾರೆ.

ಹೊಸ ಸರ್ಕಾರಕ್ಕೆ ಹೊಸ ಮಂತ್ರಿಗಳು- ಹಲವರಾಗಲಿದ್ದಾರೆ ಮಾಜಿಗಳು!
ಡಿಕೆಶಿ ನೂತನ ಮುಖ್ಯಮಂತ್ರಿಯಾಗುತ್ತಿದ್ದಂತೆ ಹೈಕಮಾಂಡ್ ಇಡೀ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲು ಮುಂದಾಗಿದ್ದಾರೆ. ಡಿಕೆಶಿ ಹೊಸ ಟೀಂನಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ? ಸಿದ್ದರಾಮಯ್ಯ ಸಂಪುಟದಲ್ಲಿದ್ದ ಎಷ್ಟು ಜನ ಹಳಬರನ್ನುರೀಟೇನ್ ಮಾಡಲಾಗುತ್ತದೆ ಮತ್ತು ಎಷ್ಟು ಜನ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿವೆ. ಎಚ್‌.ಸಿ ಮಹದೇವಪ್ಪ, ಶಿವಾನಂದ ಪಾಟೀಲ್, ಶರಣಬಸಪ್ಪ ದರ್ಶನಾಪುರ್, ರಹೀಂ ಖಾನ್, ಆರ್.ಬಿ ತಿಮ್ಮಾಪುರ್, ಬೋಸರಾಜು ರವರಿಗೆ ಆತಂಕ ಎದುರಾಗಿದ್ದರೆ, ,ಡಾ. ಜಿ. ಪರಮೇಶ್ವರ್,ಕೆಎಚ್ ಮುನಿಯಪ್ಪ,ಸತೀಶ್ ಜಾರಕಿಹೋಳಿ, ಹೆಚ್.ಕೆ. ಪಾಟೀಲ್, ಜಮೀರ್ ಅಹ್ಮದ್,ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ ನಿರಾಳವಾಗಿದ್ದಾರೆ.

ವಿಶ್ವಾಸನೀಯ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಹಲವರಿಗೆ ಈ ಬಾರಿ ಕೊಕ್ ನೀಡುವುದು ಬಹುತೇಕ ಖಚಿತವಾಗಿದ್ದು, ತಮಗೆ ಮನ್ನಣೆ ನೀಡುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ.ಈ ತಡರಾತ್ರಿಯ ರಾಜಕೀಯ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕು.

#DKShivakumar #KarnatakaPolitics #MidnightMeeting #DKSAsCM #MandyaLeaders #Chaluvarayaswamy #CongressCLPMeeting #FreedomTV #BreakingNews #KarnatakaCabinet #BengaluruNews #CongressHighCommand #VidhanaSoudha

Comments (0)

Your email address will not be published. Required fields are marked *

Back to top button