ಕ್ರಿಕೆಟ್ಮನರಂಜನೆ

ಟೀಮ್ ಇಂಡಿಯಾದ ‘ಯಂಗ್ ಸೆನ್ಸೇಷನ್’ ಅಭಿಷೇಕ್ ಶರ್ಮಾ ಲೈಫ್‌ಗೆ ಲೈಲಾ ಎಂಟ್ರಿ

ಬೆಂಗಳೂರು: ಟಿ-20 ಕ್ರಿಕೆಟ್‌ನ ಹೊಸ ಕಿಂಗ್ ಎನಿಸಿಕೊಂಡಿರೋ ಅಭಿಷೇಕ್ ಶರ್ಮಾ ಹೆಸರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ. ಕೇವಲ ಆಟದ ಕಾರಣಕ್ಕಲ್ಲ, ಬದಲಾಗಿ ತಮ್ಮ ಪರ್ಸನಲ್ ಲೈಫ್‌ನಿಂದಾಗಿ ಲೈಲಾ ಫೈಸಲ್ ಮತ್ತು ಅಭಿಷೇಕ್ ಶರ್ಮಾ ಅತ್ಯಂತ ಆಪ್ತವಾಗಿರುವ ಫೋಟೋವೊಂದು ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಅಂದಿನಿಂದಲೇ ಇವರಿಬ್ಬರು ಸೀರಿಯಸ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್‌ಗಳು ಗಲ್ಲಿ ಗಲ್ಲಿಯಲ್ಲೂ ಸೌಂಡ್ ಮಾಡ್ತಿವೆ.

ಕೇವಲ ಅಭಿಷೇಕ್ ಮಾತ್ರವಲ್ಲ, ಅವರ ಇಡೀ ಕುಟುಂಬವೇ ಲೈಲಾ ಜೊತೆ ಆತ್ಮೀಯತೆ ಹೊಂದಿದೆ ಅನ್ನೋದಕ್ಕೆ ಸೋಶಿಯಲ್ ಮೀಡಿಯಾ ಸಾಕ್ಷಿ ನುಡಿಯುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಅಭಿಷೇಕ್ ಮತ್ತು ಲೈಲಾ ಪರಸ್ಪರ ಫಾಲೋ ಮಾಡ್ತಿದ್ದಾರೆ. ಅಭಿಷೇಕ್ ಅವರ ತಾಯಿ ಮತ್ತು ತಂಗಿ ಕೋಮಲ್ ಶರ್ಮಾ ಕೂಡ ಲೈಲಾರನ್ನು ಫಾಲೋ ಮಾಡ್ತಿದ್ದು, ಫೋಟೋಗಳಿಗೆ ಲೈಕ್ ಒತ್ತುತ್ತಿದ್ದಾರೆ. ಅಭಿಷೇಕ್ ಮೈದಾನದಲ್ಲಿ ಮಿಂಚಿದಾಗಲೆಲ್ಲಾ ಲೈಲಾ ತಪ್ಪದೇ ಶುಭಾಶಯದ ಪೋಸ್ಟ್ ಹಾಕುತ್ತಾ ಚಿಯರ್ ಮಾಡ್ತಿದ್ದಾರೆ. ಅಭಿಷೇಕ್ ಮನಗೆದ್ದಿರೋ ಈ ಲೈಲಾ ಯಾರು ಎಂಬ ಕುತೂಹಲ ಸಹಜ. ಲೈಲಾ ಫೈಸಲ್ ದೆಹಲಿ ಮೂಲದ ಪ್ರತಿಷ್ಠಿತ ಕುಟುಂಬದ ಹುಡುಗಿ.

ಈ ಹಿಂದೆ ಅಭಿಷೇಕ್ ಶರ್ಮಾ ಹೆಸರು ಮಾಜಿ ಮಿಸ್ ರಾಜಸ್ಥಾನ ದಿಯಾ ಮೆಹ್ತಾ ಜೊತೆ ತಳುಕು ಹಾಕಿಕೊಂಡಿತ್ತು. ಐಪಿಎಲ್ ವೇಳೆ ದಿಯಾ ಡ್ರೆಸ್ಸಿಂಗ್ ರೂಮ್‌ಗೆ ಬಂದಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಲೈಲಾ ಫೈಸಲ್ ಎಂಟ್ರಿ ಇವೆಲ್ಲದಕ್ಕೂ ತೆರೆ ಎಳೆದಂತಿದೆ.

ಸದ್ಯಕ್ಕೆ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಬಾಯಿ ಬಿಟ್ಟಿಲ್ಲ. ಆದರೆ ಹರಿದಾಡುತ್ತಿರುವ ಫೋಟೋಗಳು ಮತ್ತು ಕುಟುಂಬದವರ ಸಪೋರ್ಟ್ ನೋಡಿದ್ರೆ, ಅಭಿಷೇಕ್ ಲೈಫ್‌ಗೆ ‘ಲೈಲಾ’ ಬಂದಿರೋದು ಪಕ್ಕಾ ಎನ್ನುತ್ತಿದ್ದಾರೆ ನೆಟ್ಟಿಗರು.

Comments (0)

Your email address will not be published. Required fields are marked *

Back to top button