Tuesday, February 10, 2026
19.8 C
Bengaluru
Google search engine
LIVE
ಮನೆUncategorizedಯಶ್ ಹಾಗೂ ರಿಷಬ್ ಯೋಚನೆಯಲ್ಲಿ ಎಷ್ಟು ಹೋಲಿಕೆ..!

ಯಶ್ ಹಾಗೂ ರಿಷಬ್ ಯೋಚನೆಯಲ್ಲಿ ಎಷ್ಟು ಹೋಲಿಕೆ..!

ಸ್ಯಾಂಡಲ್​ ವುಡ್​ ಸ್ಟಾರ್​ ನಟರಾದ ರಾಕಿಂಗ್​ ಸ್ಟಾರ್​​​ ಯಶ್​​​​​​ ಮತ್ತು ಡಿವೈನ್​ ಸ್ಟಾರ್​​​ ರಿಷಬ್​​ ಶೆಟ್ಟಿ ಕನ್ನಡ ಚಿತ್ರರಂಗ ಮತ್ತು ತಮ್ಮ ಸಿನಿಮಾಗಳ ಬಗ್ಗೆ ಇಬ್ಬರು ಒಂದೇ ರೀತಿಯಾಗಿ ಅಭಿಮಾನ ವ್ಯಕ್ತಪಡಿಸಿದ್ದಾರೆ.. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಪ್ಯಾನ್ ಇಂಡಿಯಾ ಚಿತ್ರಗಳನ್ನು ಇಬ್ಬರೂ ತಮ್ಮದೆಂದು ಬಣ್ಣಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರನ್ನು ರಿಷಬ್ ಕೂಡ ಫಾಲೋ ಮಾಡಿದರು. ‘ಕೆಜಿಎಫ್ 2’ ಯಶಸ್ಸಿನ ಬಳಿಕ ಬಂದಿದ್ದು ‘ಕಾಂತಾರ’. ಈ ಎರಡೂ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಯಶ್ ಹಾಗೂ ರಿಷಬ್ ಮಧ್ಯೆ ಸಾಕಷ್ಟು ಹೋಲಿಕೆ ಇದೆ ಎಂದು ಅನೇಕರಿಗೆ ಅನಿಸಿದೆ. ಇದಕ್ಕೆ ಕಾರಣ ಆಗಿರೋದು ಇತ್ತೀಚಿಗಿನ ಒಂದು ಸಂದರ್ಶನ. ಈ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಯಶ್ ಅವರು ‘ಕೆಜಿಎಫ್ 2’ ಯಶಸ್ಸಿನ ಬಳಿಕ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದರು. ಅವರನ್ನು ಅನೇಕರು ಸಂದರ್ಶನ ಮಾಡಿದ್ದಾರೆ. ಈ ರೀತಿ ಸಂದರ್ಶನ ಮಾಡುವಾಗ ಅವರನ್ನು ಅನೇಕರು ಹೊಗಳುತ್ತಾರೆ. ಇದು ಸಾಮಾನ್ಯ. ಅದೇ ರೀತಿ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾರೆ. ‘ಕಾಂತಾರ’ ಸಿನಿಮಾ ಬರುವಾಗ ಯಶ್ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದ್ದರು.

ಆ್ಯಂಕರ್ ‘ಕಾಂತಾರ’ ಎಂದು ಹೇಳಿ, ‘ಇದು ನಿಮ್ಮ ಸಿನಿಮಾ ಅಲ್ಲ, ಆದರೆ ಕನ್ನಡದ ಚಿತ್ರ’ ಎಂದರು. ಆಗ ಯಶ್, ‘ಅದು ನನ್ನ ಸಿನಿಮಾ ಕೂಡ ಹೌದು’ ಎಂದು ಹೇಳಿದರು. ಈಗ ರಿಷಬ್​ಗೆ ಇದೇ ರೀತಿಯ ಪ್ರಶ್ನೆ ಎದುರಾದಾಗ ಅವರ ಉತ್ತರ ಕೂಡ ಯಶ್ ಉತ್ತರದ ರೀತಿಯೇ ಇತ್ತು.

ಕೆಜಿಎಫ್ 2 ಹಾಗೂ ಕಾಂತಾರ ಚಾಪ್ಟರ್ 1 ಹೋಲಿಕೆ ಬಗ್ಗೆ ನೀವೇನು ಹೇಳಿರುತ್ತೀರಿ ಎಂದು ಕೇಳಿದಾಗ ರಿಷಬ್ ಅವರು ನೇರವಾಗಿ ಉತ್ತರ ನೀಡಿದರು.‘ಎರಡೂ ನಮ್ಮದೇ ಸಿನಿಮಾ, ನಮ್ಮದೇ ಹೀರೋ. ನಮ್ಮ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾಗಳು ಇವು’ ಎಂದು ರಿಷಬ್ ಶೆಟ್ಟಿ ಪ್ರೀತಿಯಿಂದ ಹೇಳಿದ್ದಾರೆ. ಎರಡೂ ವಿಡಿಯೋಗಳನ್ನು ಹೋಲಿಕೆ ಮಾಡಿ ವೈರಲ್ ಮಾಡಲಾಗುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments