ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಈ ಬಾರಿ ಜೈಲಿನಲ್ಲೇ ದರ್ಶನ್ ದೀಪಾವಳಿ ಆಚರಿಸುವಂತಾಗಿದೆ..
ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ದರ್ಶನ್ ಮಧ್ಯಂತರ ಜಾಮೀನು ಪಡೆದು ರಿಲೀಸ್ ಆಗಿದ್ದರು.
ಆದ್ರೆ ಈ ಬಾರಿ ಜೈಲಿನಲ್ಲೇ ದರ್ಶನ್ ದೀಪಾವಳಿ ಆಚರಿಸುವಂತೆ ಆಗಿದೆ. ದರ್ಶನ್ ಪಾಲಿಗೆ ಬೆಳಕಿಲ್ಲದ ದೀಪಾವಳಿ ಆಗಿದೆ. ಈ ಬಗ್ಗೆ ದರ್ಶನ್ ಜೈಲಿನಲ್ಲಿ ಜೊತೆಗಿರುವವರ ಜೊತೆ ದರ್ಶನ್ ಬೇಸರ ಹೊರಹಾಕಿದ್ದಾರೆ ಎನ್ನಲ್ತಾಗಿದೆ. ಕಳೆದ ವರ್ಷ ದೀಪಾವಳಿ ಹಬ್ಬಕೆ ದರ್ಶನ್ ಜೈಲಿಂದ ಮನೆ ಸೇರಿದ್ರು . ಆಗ ಮನೆಯಲ್ಲಿದ್ರೂ ದರ್ಶನ್ ದೀಪಾವಳಿ ಆಚರಿಸದೆ ಬೆನ್ನು ನೋವಿನ ಹಿನ್ನಲೆ ಮನೆಯಲ್ಲೇ ರೆಸ್ಟ್ ಮಾಡಿದ್ದರು . ಈ ವರ್ಷ ಜೈಲಿನಲ್ಲೇ ಕಳೆಯೋದು ಕಷ್ಟವಾಗ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಗೂ ಮುನ್ನ ಭರ್ಜರಿಯಾಗಿ ಪ್ರತಿ ದೀಪಾವಳಿಯಲ್ಲೂ ಕುಟುಂಬ, ಸ್ನೇಹಿತರ ಜೊತೆಗೂಡಿ ಸೆಲಬ್ರೇಷನ್ ಮಾಡ್ತಿದ್ದರು .ಆದ್ರೆ ದರ್ಶನ್ ಮಾಡಿಕೊಂಡ ಯಡವಟ್ಟನಿಂದ ಜೈಲಿನಲ್ಲೇ ಹಬ್ಬ ಆಚರಿಸುವಂತಾಗಿದೆ. ಜೈಲಿನಲ್ಲಿರು ದರ್ಶನ್ ಅವರನ್ನ ಹೊರಗೆ ತರಲು ಯಾರು ಸಹಾಯ ಮಾಡ್ತಿಲ್ಲ ಎನ್ನುವ ಕೊರಗು ನಟನಿಗೆ ಎನ್ನಲಾಗ್ತಿದೆ. ಕಾನೂನಿನ ಹೋರಾಟಕ್ಕೆ ಪತ್ನಿ ವಿಜಯಲಕ್ಷ್ಮಿ ಬಿಟ್ಟು ಯಾರಿಂದಲೂ ದರ್ಶನ್ಗೆ ಸಹಾಯದ ಮಾತಿಲ್ಲ. ಈ ಬಗ್ಗೆ ಬ್ಯಾರಕ್ ನಲ್ಲೇ ಶಿಷ್ಯಂದಿರ ಬಳಿ ಬೇಸರ ಹೊರಹಾಕಿದ್ದಾರೆ ಎನ್ನಲಾಗ್ತಿದೆ. ದೀಪಾವಳಿ ಹಬ್ಬದಂದು ಕೂಡ ಸೆಲ್ನಲ್ಲೇ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.


